BREAKING NEWS
Search

ನಾಯಿ ಭೇಟೆಗೆ ಬಂದ ಚಿರತೆ ಬಾವಿಗೆ ಬಿತ್ತು! ಮುಂದೇನಾಯ್ತು ಗೊತ್ತಾ?

993

ಕಾರವಾರ :- ನಾಯಿಯನ್ನ ಅಟ್ಟಿಸಿಕೊಂಡು ಬಂದ ಚಿರತೆಯೊಂದು ಅಟ್ಟಿಸಿಕೊಂಡು ಬಂದ ವೇಗಕ್ಕೆ ಆಯಾ ತಪ್ಪಿ ಬಾವಿಗೆ ಬಿದ್ದು ನರಳಾಡಿದ ಘಟನೆ ಉತ್ತರಕನ್ನಡ ಜಿಲ್ಲೆಯ ಕುಮಟ ತಾಲೂಕಿನ ಬರ್ಗಿ ಗ್ರಾಮದಲ್ಲಿ ನಡೆದಿದೆ.

ಬರ್ಗಿ ಗ್ರಾಮದ ವಸಂತ ಶಿವು ನಾಯ್ಕ ಎಂಬುವವರ ಮನೆಯ ಬಾವಿಯಲ್ಲಿ ಚಿರತೆ ಬಿದ್ದಿದೆ.
ಚಿರತೆಯು ಬಿದ್ದ ಹೊಡೆತಕ್ಕೆ ಬಾವಿಯಿಂದ ಏಳಲು ಪ್ರಯತ್ನಿಸಿದೆ. ಈ ವೇಳೆ ಅದರ ಗರ್ಜನೆಗೆ ಮನೆಯವರಿಗೆ ತಿಳಿದಿದ್ದು ಬಾವಿಯಲ್ಲಿ ಚಿರತೆ ಬಿದ್ದಿರುವುದು ತಿಳಿದಿದೆ.ತಕ್ಷಣ ಅರಣ್ಯ ಇಲಾಖೆ ಅಧಿಕಾರಿಗಳಿಗೆ ಮಾಹಿತಿ ನೀಡಲಾಯಿತು.

ಚಿರತೆ ಬಾವಿಯಲ್ಲಿ ಬಿದ್ದಿರುವ ಸುದ್ದಿ ತಿಳಿಯುತ್ತಿದ್ದಂತೆ ಸಾರ್ವಜನಿಕರು ತಂಡೋಪ ತಂಡವಾಗಿ ಬಂದು ಚಿರತೆ ನೋಡಲು ಮುಗಿಬಿಳುತ್ತಿದ್ದಾರೆ.

ಬಾವಿಗೆ ಬಿದ್ದ ಚಿರತೆಯ ವಿಡಿಯೋ ನೋಡಿ:-

ಈಗಾಗಲೆ ಅರಣ್ಯ ಇಲಾಖೆಗೆ ಅಧಿಕಾರಿಗಳು ಸ್ಥಳಕ್ಕೆ ಆಗಮಿಸಿದ್ದು ಅದರ ರಕ್ಷಣೆಗಾಗಿ ಡೇರಿಂಕ್ ಟೀಮ್ ಬಂದಿದ್ದು ಬಾವಿಗೆ ವಿದ್ದಿರುವ ಚಿರತೆಯನ್ನ ಮೇಲೆತ್ತುವ ಕಾರ್ಯಚರಣೆ ನಡೆಸಲಾಗುತ್ತಿದ್ದು ಬುಟ್ಟಿಯನ್ನು ಬಿಟ್ಟು ಚಿರತೆಯನ್ನು ಬಾವಿಯಿಂದ ಮೇಲಕ್ಕೆತ್ತಿ ರಕ್ಷಣೆ ಮಾಡಲಾಯಿತು.

ರಕ್ಷಣೆ ಮಾಡಿದ ಪೊಟೋ



Leave a Reply

Your email address will not be published. Required fields are marked *