BREAKING NEWS
Search

ಲಿಂಗನಮಕ್ಕಿ ಜಲಾಶಯದಲ್ಲಿ ಹೆಚ್ಚಿದ ನೀರು! ಶರಾವತಿ ತೀರ ಪ್ರದೇಶದ ಜನರಿಗೆ ಅಲರ್ಟ ?

972

ಕಾರವಾರ/ಶಿವಮೊಗ್ಗ:- ಪಶ್ಚಿಮ ಘಟ್ಟ ಪ್ರದೇಶದಲ್ಲಿ ಸುರಿಯುತ್ತಿರುವ ಅಬ್ಬರದ ಮಳೆಗೆ ಶರಾವತಿ ನದಿ ನೀರಿನ ಮಟ್ಟದಲ್ಲಿ ಗಣನೀಯ ಏರಿಕೆ ಕಂಡಿದೆ.
ಈ ಹಿನ್ನಲೆಯಲ್ಲಿ ಕರ್ನಾಟಕ ವಿದ್ಯುತ್ ನಿಗಮದ ವತಿಯಿಂದ ಜನರಿಗೆ ಎಚ್ಚರಿಕೆ ನೀಡಲಾಗಿದೆ.

ಲಿಂಗನಮಕ್ಕಿ ಜಲಾಶಯಭಾಗದ ಹಿನ್ನೀರಿನ ಭಾಗದಲ್ಲಿ ಹೆಚ್ಚಿನ ಮಳೆಯಾಗುತಿದ್ದು ಇಂದು ಜಲಾಶಯದಲ್ಲಿ 30,397 ಕ್ಯೂಸೆಕ್ ನೀರು ಹರಿದುಬರುತ್ತಿದೆ.ಕಳೆದ ತಿಂಗಳು ಸಹ ಹೆಚ್ಚಿನ ಪ್ರಮಾಣದಲ್ಲಿ ನೀರು ಹರಿದುಬಂದು ಜಲಾಶಯದ ಒಳ ಹರಿವಿನಲ್ಲಿ ನೀರಿನ ಪ್ರಮಾಣ ಗಣನೀಯ ಏರಿಕೆ ಕಂಡಿತ್ತು.

ಇಂದು ಏರಿಕೆ ಕಂಡ ಪ್ರಮಾಣವೆಷ್ಟು?

ಸಾಂದರ್ಭಿಕ ಚಿತ್ರ.


ಲಿಂಗನಮಕ್ಕಿ ಜಲಾಶಯದ ನೀರಿನ ಸಂಗ್ರಹ ಮಟ್ಟವು 1819 ಅಡಿ ಇದೆ. ಜಲಾಶಯದ ಭರ್ತಿಗೆ 17.65 ಅಡಿಮಾತ್ರ ಬಾಕಿ ಇದೆ.ಪ್ರಸ್ತುತ ಜಲಾಶಯದಲ್ಲಿ 1801.35 ಅಡಿ ಯಷ್ಟು ನೀರು ಸಂಗ್ರಹವಾಗಿದೆ.

ಜನರಿಗೆ ಮುನ್ನೆಚ್ಚರಿಕೆ

ಜಲಾಶಯದಲ್ಲಿ ನೀರಿನ ಮಟ್ಟ ಹೆಚ್ಚಾದ್ದರಿಂದ ಜನರಿಗೆ ಮೊದಲ ಎಚ್ಚರಿಕೆ ರವಾನಿಸಲಾಗಿದೆ.
ಜಲಾಶಯದ ನೀರಿನ ಮಟ್ಟ ಪ್ರತಿ ಕ್ಷಣ ಏರಿಕೆ ಕಾಣುತಿದ್ದು ಇನ್ನೂ ಹೆಚ್ಚಿನ ಮಳೆಯಾದರೇ ಶೀಘ್ರದಲ್ಲಿ ಭರ್ತಿಯಾಗುವ ಸಾಧ್ಯತೆ ಇದ್ದು ಆಣೆಕಟ್ಟಿನ ಸುರಕ್ಷತೆ ದೃಷ್ಟಿಯಿಂದ ಯಾವುದೇ ಕ್ಷಣದಲ್ಲಿ ನೀರನ್ನು ಹೊರಬಿಡಲಾಗುತ್ತದೆ. ಆಣೆಕಟ್ಟಿನ ಕೆಳದಂಡೆ ಹಾಗೂ ನದಿ ಪಾತ್ರದಪದಲ್ಲಿ ವಾಸವಿರುವ ಜನ ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರ ಗೊಳ್ಳುವಂತೆ ಕೆ.ಪಿ.ಸಿ.ಕಾರ್ಯಪಾಲಕ ಇಂಜಿನಿಯರ್ ರವರು ತಿಳಿಸಿದ್ದಾರೆ.




ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ