ಷೇರುಪೇಠೆಯಲ್ಲಿ ಕುಸಿತ!

11

ನವದೆಹಲಿ: ಕೇಂದ್ರ ಬಜೆಟ್​ನಿಂದ ಷೇರು ಮಾರುಕಟ್ಟೆಗೆ ನಿರಾಸೆಯಾಗಿದ್ದು, ಎರಡು ದಿನಗಳಲ್ಲಿ ಹೂಡಿಕೆದಾರರ ಸುಮಾರು -ಠಿ; 3.39 ಲಕ್ಷ ಕೋಟಿ ಸಂಪತ್ತು ಕರಗಿದೆ. ಬಾಂಬೆ ಷೇರುಪೇಟೆಯಲ್ಲಿ (ಬಿಎಸ್​ಇ) ಶುಕ್ರವಾರವಾದ ವಹಿವಾಟಿನ ಅಂತ್ಯಕ್ಕೆ -153.58 ಲಕ್ಷ ಕೋಟಿ ನಷ್ಟವಾದರೆ, ಸೋಮವಾರ -ಠಿ; 147.43 ಕೋಟಿ ಸಂಪತ್ತು ಕರಗಿದೆ. ಇದು 2019ರಲ್ಲಿ ಸಂಪತ್ತು ನಷ್ಟವಾದ ಗರಿಷ್ಠ ದಾಖಲೆ ಕೂಡ ಆಗಿದೆ.

ಬಿಎಸ್​ಇ ಸೂಚ್ಯಂಕ ಸೋಮವಾರ 792.82 ಅಂಕ ದಾಖಲೆಯ (ಶೇ. 2.01) ಇಳಿಕೆ ಕಂಡು, 38,720.57ಕ್ಕೆ ವಹಿವಾಟು ಮುಗಿಸಿತು. ರಾಷ್ಟ್ರೀಯ ಷೇರು ಮಾರುಕಟ್ಟೆ (ನಿಫ್ಟಿ) 247.15 ಅಂಶ (ಶೇ. 2.09) ಕುಸಿದು, 11,564ಕ್ಕೆ ಸ್ಥಿರವಾಯಿತು.

ಎಚ್​ಡಿಎಫ್​ಸಿ ಬ್ಯಾಂಕ್, ಎಲ್ ಆಂಡ್ ಟಿ, ಐಸಿಐಸಿಐ ಬ್ಯಾಂಕ್, ಎಸ್​ಬಿಐ, ಬಜಾಜ್ ಫೈನಾನ್ಸ್, ಕೋಟಾಕ್ ಮಹಿಂದ್ರಾ ಬ್ಯಾಂಕ್, ಆಕ್ಸಿಸ್ ಬ್ಯಾಂಕ್, ಒಎನ್​ಜಿಸಿ, ಎನ್​ಟಿಪಿಸಿ, ಹಿರೋ ಮೋಟಾರ್​ಕಾರ್ಪ್, ಮಾರುತಿ ಸುಜುಕಿ ಕಂಪನಿಗಳು ಸೋಮವಾರ ಮಧ್ಯಾಹ್ಯದ ಹೊತ್ತಿಗೆ ಶೇ. 8 ಇಳಿಕೆ ಕಂಡವು. ಇದಕ್ಕೆ ವ್ಯತಿರಿಕ್ತವಾಗಿ ಯೆಸ್ ಬ್ಯಾಂಕ್, ಡಾ. ಪಾಲ್​ಪಥ್ ಲ್ಯಾಬ್ಸ್, ಪಿಸಿ ಜ್ಯುವೆಲರ್ಸ್, ಎಚ್​ಸಿಎಲ್ ಟೆಕ್ನಾಲಜೀಸ್, ರಿಲಯನ್ಸ್ ಕಮ್ಯುನಿಕೇಷನ್ಸ್ ಕಂಪನಿಗಳ ಷೇರುಗಳ ಮೌಲ್ಯ ತುಸು ವೃದ್ಧಿಸಿತು.

ಅತಿ ಶ್ರೀಮಂತರಿಗೆ ಅಧಿಕ ತೆರಿಗೆ ವಿಧಿಸಿರುವುದರಿಂದ ವಿದೇಶಿ ವಲಯದ ಹೂಡಿಕೆ (ಎಫ್​ಪಿಐ) ಮೇಲೆ ನಕಾರಾತ್ಮಕ ಪರಿಣಾಮ ಬೀರಿದೆ ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ.

ತಲ್ಲಣಕ್ಕೆ ಐದು ಕಾರಣ…

ಬಜೆಟ್​ನಲ್ಲಿ ಪ್ರಸ್ತಾಪಿಸಿರುವ ನೋಂದಾಯಿತ ಕಂಪನಿಗಳಲ್ಲಿ ಸಾರ್ವಜನಿಕ ಕನಿಷ್ಠ ಹೂಡಿಕೆ ಶೇ. 25ರಿಂದ ಶೇ. 35ಕ್ಕೆ ಹೆಚ್ಚಳ.
ಅಮೆರಿಕದಲ್ಲಿ ಉದ್ಯೋಗಾವಕಾಶ ಹೆಚ್ಚಿದ್ದು, ಕಳೆದ ತಿಂಗಳು 2.24 ಲಕ್ಷ ಮಂದಿಗೆ ಉದ್ಯೋಗ ಪ್ರಾಪ್ತವಾಗಿದೆ. ಇದರಿಂದ ಅಮೆರಿಕದ ಫೆಡರಲ್ ಬ್ಯಾಂಕ್ ಬಡ್ಡಿದರ ಇಳಿಸಿದೆ.
ಏಷ್ಯಾದ ಇತರ ಷೇರು ಮಾರುಕಟ್ಟೆಗಳಲ್ಲೂ ಇಳಿಕೆ ಕಂಡುಬಂದಿದ್ದು, ಇದು ಭಾರತದ ಮೇಲೂ ಪ್ರಭಾವ ಬೀರಿದೆ.
ಅಮೆರಿಕ ಪಶ್ಚಿಮ ಏಷ್ಯಾ ರಾಷ್ಟ್ರಗಳ ಜತೆ ಹೊಂದಿರುವ ವೈಮನಸ್ಯದಿಂದ ಕಚ್ಚಾ ತೈಲ ದರ ಹೆಚ್ಚಳ, ತತ್ಪರಿಣಾಮ ರೂಪಾಯಿ ಮೌಲ್ಯ ಕುಸಿತ. ಡಾಲರ್ ಎದುರು ರೂಪಾಯಿ ಮೌಲ್ಯ 21 ಪೈಸೆ ಕುಸಿತ ಕಂಡಿದೆ.
ಜೂನ್ ತ್ರೖೆಮಾಸಿಕದಲ್ಲಿ ಐಟಿ ಕಂಪನಿಗಳ ಗಳಿಕೆಯಲ್ಲಿ ಆಗಿರುವ ಹಿನ್ನಡೆ.
Leave a Reply

Your email address will not be published. Required fields are marked *