ರಾಜ್ಯ ಸರ್ಕಾರ ಏಕಪಕ್ಷೀಯವಾಗಿ ನಿರ್ಧಾರ ತೆಗೆದುಕೊಂಡು ಮಸೂದೆಗಳನ್ನ ಪಾಸ್ ಮಾಡುತ್ತಿದೆ.ಇಂತಹ ಘಟನೆಗಳು ದುರದೃಷ್ಟಕರ
ವಿರೋಧ ಪಕ್ಷವನ್ನ ಲೆಕ್ಕಕ್ಕೆ ತೆಗೆದುಕೊಳ್ಳದೆ ಮಸೂದೆಗಳನ್ನ ಪಾಸ್ ಮಾಡಿದ್ದಾರೆ ಎಂದು ಹಳಿಯಾಳ ಶಾಸಕ ಹಾಗೂ ಮಾಜಿ ಸಚಿವ ಆರ್.ವಿ ದೇಶಪಾಂಡೆ ದೂರಿದ್ದಾರೆ.
ಇಂದು ಶಿರಸಿಯ ಕಾಂಗ್ರೆಸ್ ಕಚೇರಿಯಲ್ಲಿ ಮಾತನಾಡಿದ ಅವರು ಎಮರ್ಜೆನ್ಸಿ ಇದ್ದಾಗ ಮಾತ್ರ ಮಸೋದೆಯನ್ನು ಈ ರೀತಿ ಮಾಡುವ ಕಾನೂನು ಜಾರಿಯಲ್ಲಿದೆ ಚರ್ಚೆಗಳು ಇಲ್ಲದೇನೆ ವಿಧೇಯಕ ಪಾಸ್ ಮಾಡಿರೋದು ಇತಿಹಾಸದಲ್ಲಿ ಪ್ರಥಮ ಎಂದರು.ಉಪಚುನಾವಣೆ ಕುರಿತು ಮಾತನಾಡಿದ ಅವರು 2 ಕ್ಷೇತ್ರದಲ್ಲೂ ಗೆಲುವು ನಮ್ಮದೇ ಈಗಾಗಲೇ ಚುನಾವಣೆ ಘೋಷಣೆಯಾಗಿದೆ,
ಅಭ್ಯರ್ಥಿಗಳ ಗೆಲುವಿನ ಘೋಷಣೆಯೊಂದೇ ಬಾಕಿ ಇದೆ.ಅಷ್ಟು ಆತ್ಮವಿಶ್ವಾಸ ನಮ್ಮಲ್ಲಿದೆ
ಎಂದರು.
ಕಾಂಗ್ರೆಸ್ ಎಂದಿಗೂ ದೇಶ ಉದ್ದಾರ ಮಾಡಿಲ್ಲ- ಜಗದೀಶ್ ಶಟ್ಟರ್!
ಕಾಂಗ್ರೆಸ್ ಎಂದಿಗೂ ದೇಶವನ್ನ ಉದ್ಧಾರ ಮಾಡಿಲ್ಲ,ಅವರ ಸರ್ಕಾರ ಇದ್ದಾಗ ಯಾವುದೇ ಅಭಿವೃದ್ಧಿ ಬಿಲ್ ತಂದಿಲ್ಲ ಎಂದು ಆರ್.ವಿ ದೇಶಪಾಂಡೆ ಮಾತಿಗೆ ಸಚಿವ ಶಟ್ಟರ್ ತಿರುಗೇಟು ನೀಡಿದ್ದಾರೆ.ಶಿರಸಿಯ ಗಾಣಿಗ ಸಭಾಭವನದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಸಚಿವ ಜಗದೀಶ್ ಶಟ್ಟರ್ ಈಗಿರೋ ವಿರೋಧ ಪಕ್ಷ ಅಭಿವೃದ್ಧಿಗೂ ವಿರೋಧ ಮಾಡ್ತಿದೆ,ರೈತರ ಅನುಕೂಲ ದೃಷ್ಟಿಯಲ್ಲಿ ಇಟ್ಕೊಂಡೇ ಬಿಲ್ ಪಾಸ್ ಮಾಡಿದ್ದೇವೆ ಎಂದ ಅವರು ದೇಶಪಾಂಡೆ ಕೈಗಾರಿಕಾ ಸಚಿವರಾಗಿದ್ದಾಗ ಏನು ಮಾಡಿದ್ದಾರೆ ಗೊತ್ತು ಎಂದರು.
ವಾಲ್ಮೀಕಿ ಜನಾಂಗದ ನಾಯಕ ರಾಮಲು ರವರಿಗೆ ಉಪಮಂತ್ರಿ ಪದವಿ ವಿಚಾರ ಕುರಿತು ಮಾತನಾಡಿದ ಅವರು ಮುಖ್ಯಮಂತ್ರಿಗಳು ಎಲ್ಲವನ್ನೂ ಸರಿಪಡಿಸುತ್ತಾರೆ,ಎಲ್ಲರನ್ನೂ ಈಗಾಗಲೇ ವಿಶ್ವಾಸಕ್ಕೆ ತೆಗೆದುಕೊಳ್ಳಲಾಗಿದೆ.ಈ ಕುರಿತು ಯಾವುದೇ ಗೊಂದಲವಿಲ್ಲ.ಇದು ಎಲ್ಲಾ ಪಕ್ಷಗಳಲ್ಲೂ ಸರ್ವೇ ಸಾಮಾನ್ಯ ಎಂದರು.