ಕಾರವಾರದ ಶಾಸಕಿ ಕೈಗೆ ಕೈಹಾಕಿ ಸಚಿವ ಆರ್.ವಿ ದೇಶಪಾಂಡೆ ಹೇಳಿದ್ದೇನು ಗೊತ್ತಾ!

3441

ಅರೇ ನಮ್ಮ ಜಿಲ್ಲಾ ಉಸ್ತುವಾರಿ ಸಚಿವ ಆರ್ .ವಿ ದೇಶಪಾಂಡೆರವರಿಗೇನಾಯ್ತಪ್ಪ ! ಏಕಾ ಏಕಿ ಕಾರವಾರದ ಶಾಸಕಿ ರೂಪಾಲಿ ನಾಯ್ಕರ ಕೈಗೆ ಕೈಹಾಕಿ ಬಳೆ ರೇಟು ಎಷ್ಟು ಅಂತ ಕೇಳಿಬಿಟ್ಟಿದ್ದಾರೆ ,ಕೋಟಿ ಇರುಬಹುದಾ ..!? ಲಕ್ಷ ಇರಬಹುದಾ !? ಅಂತ ತಾವೇ ಕುದ್ದು ಬಳೆ ಮುಟ್ಟಿ ರೇಟು ಕೇಳಿ ತಮಾಷೆ ಮಾಡಿದ್ದಾರೆ .ಇದಕ್ಕೆ ಕುದ್ದು ಶಾಸಕರು ನಗುತ್ತಲೇ ಖಜಾನೆಯೇ ಇಲ್ಲಿ ಕುಳಿತಿದೆ ನನ್ನ ದೇನು ಎಂದು ಉತ್ತರ ನೀಡಿದ್ರು.

ವಿಡಿಯೋ ಇಲ್ಲಿದೆ ನೋಡಿ:-

ಹೌದು ಈ ಹಾಸ್ಯ ಮಯ ದೃಶ್ಯ ನಡೆದಿದ್ದು ಕಾರವಾರದಲ್ಲಿ ನಿನ್ನೆ ನಡೆದ ಕರಾವಳಿ ಉಸ್ತವದ ಸಭೆಯಲ್ಲಿ .ಹೌದು ಕಾರವಾರದ ಜಿಲ್ಲಾಧಿಕಾರಿ ಕಚೇರಿಗೆಯ ಮೀಟಿಂಗ್ ಹಾಲ್ ನಲ್ಲಿ ಸಭೆ ನಡೆದಿತ್ತು .ಈ ವೇಳೆ ಕುದ್ದು ಶಾಸಕಿ ರೂಪಾಲಿ ನಾಯ್ಕರವರು ಜರತಾರಿ ಸೀರೆ ಉಟ್ಟು ಬಂಗಾರದ ಬಳೆ ತೊಟ್ಟು ಎಂದಿನ ಕದರ್ ನಲ್ಲಿ ಬಂದಿದ್ದರು. ಇನ್ನು ಸಭೆಯಲ್ಲಿ ಶಾಸಕಿ ಪಕ್ಕ ಕುಳಿತು ಅಧ್ಯಕ್ಷತೆ ವಹಿಸಿದ್ದ ಜಿಲ್ಲಾ ಉಸ್ತುವಾರಿ ಸಚಿವ ಆರ್.ವಿ ದೇಶಪಾಂಡೆ ಏಕಾ ಏಕಿ ಪಕ್ಕದಲ್ಲಿ ಕುಳಿತಿದ್ದ ರೂಪಾಲಿ ನಾಯ್ಕರ ಬಳೆಯ ಮೇಲೆ ಕಣ್ಣು ಹೋಗಿದೆ ಇದು ಕೋಟಿನಾ ,ಲಕ್ಷದ್ದ ಎಂದು ಹಾಸ್ಯ ಚಟಾಕಿ ಹಾರಿಸಿದ್ದು ಕ್ಯಾಮರಾ ಕಣ್ಣಲ್ಲಿ ಸೆರೆಯಾಗಿದೆ. ಈ ವೀಡಿಯೋ ವನ್ನು ಭಟ್ಕಳ ಮೂಲದ ಸುದ್ದಿ ಕನ್ನಡ ವೆಬ್ ಪೋರ್ಟಲ್ ನ ಸಂಪಾದಕ ದೇವರಾಜ್ ನಾಯಕ್ ತಮ್ಮ ವಾಟ್ಸ್ ಅಪ್ ಸ್ಟೇಟಸ್ ನಲ್ಲಿ ಹಾಕಿಕೊಂಡಿದ್ದಾರೆ.ಇದರಿಂದಾಗಿ ಸಕತ್ ವೀಡಿಯೋ ವೈರಲ್ ಆಗಿದ್ದು ಹಲವು ಜನರ ಮೊಬೈಲ್ ನಲ್ಲಿ ಹರಿದಾಡತೊಡಗಿದೆ.ಒಟ್ಟಿನಲ್ಲಿ ಶಾಸಕಿಗೆ ಸಚಿವರು ಮಾಡಿದ ತಮಾಷೆ ಮಾತ್ರ ಸಕತ್ ವೈರಲ್ ಆಗುತ್ತಿದೆ.
Leave a Reply

Your email address will not be published. Required fields are marked *

error: Content is protected !!