ಮುಖ್ಯಮಂತ್ರಿಗಳು ಕೊಟ್ಟಮಾತಿಗೆ ತಪ್ಪುವುದಿಲ್ಲ:ಶಿವರಾಮ್ ಹೆಬ್ಬಾರ್!

307

ಕಾರವಾರ:-ಮುಖ್ಯಮಂತ್ರಿಗಳು ಎಂದೂ ಕೂಡ ಕೊಟ್ಟ ಮಾತಿಗೆ ತಪ್ಪಿಲ್ಲ.ಸೋತವರನ್ನೂ ಕೂಡ ಎಂಎಲ್ ಸಿ ಮಾಡಿ ಮಾತು ಉಳುಸಿಕೊಂಡಿದ್ದಾರೆ ಎಂದು ಆರ್ ಆರ್ ನಗರ ಕ್ಷೇತ್ರದ ಶಾಸಕ ಮುನಿರತ್ನ ಅವರಿಗೆ ಸಚಿವ ಸ್ಥಾನ ನೀಡುವ ವಿಚಾರ ಹಿನ್ನಲೆ ಯಲ್ಲಿ ಕಾರ್ಮಿಕ ಸಚಿವ ಶಿವರಾಮ್ ಹೆಬ್ಬಾರ್ ತಿಳಿಸಿದರು.ಕಾರವಾರ ದಲ್ಲಿ ಮಾಧ್ಯಮದೊಂದಿಗೆ ಮಾತನಾಡಿದ ಅವರು ಮುನಿರತ್ನ ಕೂಡ ಬಹಳ ದೊಡ್ಡ ಗೆಲುವನ್ನ ಸಾಧಿಸಿದ್ದಾರೆ,ಸ್ಥಾನ ಮಾನ ನೀಡುವ ಬಗ್ಗೆ ಸರಿಯಾದ ವಿರ್ಧಾರವನ್ನ ಮುಖ್ಯಮಂತ್ರಿ ಮಾಡಲಿದ್ದಾರೆ.ಅನರ್ಹರಾಗಿದ್ದ ಎಲ್ಲರಿಗೂ ಟಿಕೆಟ್ ನೀಡಿ ಸೋತವರಿಗೂ ಕೂಡ ಸ್ಥಾನಮಾನ ಕಲ್ಪಿಸಿದ್ದಾರೆ,ಕ್ಯಾಬಿನೆಟ್ ವಿಸ್ತರಣೆಗೆ ಸಂಬಂಧಿಸಿದಂತೆ ಸರಿಯಾದ ನಿರ್ಧಾರವನ್ನ ಕೈಗೊಳ್ಳಲಿದ್ದಾರೆ ಎಂದರು.
ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ