BREAKING NEWS
Search

ಹೆಚ್.ಕೆ ಪಾಟೀಲ್ ಹಾಗೂ ಸಚಿವ ಮಾಧುಸ್ವಾಮಿಗೆ ಕರೋನಾ ಪಾಸಿಟಿವ್ !

218

ಬೆಂಗಳೂರು :- ಕಾಂಗ್ರೆಸ್ ಮುಖಂಡ, ಶಾಸಕ ಎಚ್.ಕೆ.ಪಾಟೀಲ್ ಹಾಗೂ ರಾಜ್ಯ ಸಚಿವ ಮಾಧವಸ್ವಾಮಿಗೆ ಕೊರೊನಾ ಸೋಂಕು ದೃಢಪಟ್ಟಿದೆ.

ಹೆಚ್ .ಕೆ ಪಾಟಿಲ್ ರವರು ಟ್ಟೀಟ್ ಮಾಡುವ ಮೂಲಕ ನನಗೆ ಕೋವಿಡ್ ಸೋಂಕು ದೃಢಪಟ್ಟಿದ್ದು, ಲಕ್ಷಣ ರಹಿತ ಸೋಂಕಾಗಿದ್ದು, ಇದರಿಂದ ನಾನು ಹೋಂ ಕ್ವಾರಂಟೈನ್ ಆಗಿದ್ದೇನೆ. ನಾನೀಗ ಆರೋಗ್ಯವಾಗಿದ್ದೇನೆ. 10 ದಿನಗಳ ಕಾಲ ಕ್ವಾರೈಂಟೈನ್ ನಲ್ಲಿರಲಿದ್ದೇನೆ. ನನ್ನ ಪ್ರಾಥಮಿಕ ಸಂಪರ್ಕದಲ್ಲಿರುವವರು ಮುನ್ನೆಚ್ಚರಿಕೆ ಕ್ರಮವಾಗಿ ಕೋವಿಡ್ ಪರೀಕ್ಷೆಗೊಳಗಾಗಲು ಟ್ವೀಟ್ ಮೂಲಕ ಮನವಿ ಮಾಡಿದ್ದಾರೆ.

ಇತ್ತಿಚೆಗಷ್ಟೆ ಶಾಸಕ ಎಚ್.ಕೆ.ಪಾಟೀಲ್ ಮಹಾರಾಷ್ಟ್ರ ರಾಜ್ಯದ ಕಾಂಗ್ರೆಸ್ ಪಕ್ಷದ ಉಸ್ತುವಾರಿಯಾಗಿದ್ದರು. ಸದ್ಯ ಕೊರೊನಾ ಪಾಸಿಟಿವ್ ನಿಂದ ಬೆಂಗಳೂರಿನ ತಮ್ಮ ಮನೆಯಲ್ಲಿಯೇ ಕ್ವಾರಂಟೈನ್ ಆಗಿದ್ದಾರೆ.

ಇನ್ನು ಕಾನೂನು ಮತ್ತು ಸಂಸದೀಯ ಸಚಿವ ಜೆ.ಸಿ.ಮಾಧುಸ್ವಾಮಿ ಅವರಿಗೂ ಕೋವಿಡ್ ಸೋಂಕು ದೃಢಪಟ್ಟಿದೆ. ಭಾನುವಾರಷ್ಟೇ ಕೆಪಿಸಿಸಿ ಮಾಜಿ ಅಧ್ಯಕ್ಷ ದಿನೇಶ್​ ಗುಂಡೂರಾವ್​ಗೂ ಕರೊನಾ ಟೆಸ್ಟ್​ ವರದಿ ಪಾಸಿಟಿವ್​ ಬಂದಿದ್ದರಿಂದ ಅವರು ಹೋಂ ಐಸೋಲೇಶನ್​ಗೆ ಒಳಪಟ್ಟಿದ್ದಾರೆ.

ವರದಿ:- ಪ್ರದೀಪ್ .ಜಿ.ಎಸ್.
ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ