ಸಚಿವ ಸ್ಥಾನದ ಅವಕಾಶಸಿಗುವ ಮೊದಲೇ ಏಕೆ ತಪ್ಪಿಸಿಕೊಳ್ಳಲಿ!  ಹೆಬ್ಬಾರ್ ಹೀಗೇಕೆ ಹೇಳಿದ್ರು!

355

ಶಿರಸಿ:- ನಾನು ಯಾವತ್ತೂ ಸಚಿವ ಸ್ಥಾನದ ಆಕಾಂಕ್ಷಿಯಾಗಿದ್ದೇನೆ. ಸಂಪುಟ ವಿಸ್ತರಣೆಯಲ್ಲಿ ಅವಕಾಶ ಸಿಗುವ ವಿಶ್ವಾಸವಿದೆ ಎಂದು ಕಾಂಗ್ರೆಸ್ ಶಾಸಕ ಹಾಗೂ NWKRTC ಅಧ್ಯಕ್ಷ ಶಿವರಾಮ ಹೆಬ್ಬಾರ ಹೇಳಿದರು.

ಶಿರಸಿಯ ಬೀಳೂರಿನಲ್ಲಿ ಶೈಕ್ಷಣಿಕ ಕಾರ್ಯಕ್ರಮದಲ್ಲಿ ಪಾಲ್ಗೊಂಡ ಅವರು ಸಂಪುಟ ವಿಸ್ತರಣೆಯಲ್ಲಿ ಸಚಿವ ಸ್ಥಾನದ ಅವಕಾಶ ಸಿಗುವ ಸಂಪೂರ್ಣ ವಿಶ್ವಾಸವಿದೆ. ನಾನು ಸಚಿವ ಸ್ಥಾನದ ಆಕಾಂಕ್ಷಿಯಲ್ಲ ಎಂದು ಎಲ್ಲಿಯೂ ಹೇಳಿಲ್ಲ. ಹಾಗಾಗಿ ಒಂದೊಮ್ಮೆ ಸಚಿವ ಸ್ಥಾನ ನೀಡದಿದ್ದರೆ ನನಗಾಗುವ ಬೇಸರದ ಕುರಿತು ಮುಂಬರುವ ದಿನಗಳಲ್ಲಿ ಮಾತನಾಡುವುದಾಗಿ ಹೇಳಿದರು.

ಈ ಮೊದಲಿನಿಂದಲೂ ನಾನು ಸಚಿವ ಸ್ಥಾನದ ಆಕಾಂಕ್ಷಿ ಎಂದು ಹೇಳುತ್ತಾ ಬಂದಿದ್ದೇನೆ. ಅವಕಾಶ ಸಿಗುವ ಮೊದಲೇ ನಾನು ಯಾಕೆ ಬೇಸರದ ಕುರಿತು ಮಾತನಾಡಿ ಸಚಿವ ಸ್ಥಾನ ತಪ್ಪಿಸಿಕೊಳ್ಳಲಿ ,ಸಂಪುಟ ವಿಸ್ತರಣೆ ಆದ ಮೇಲೆ ಈ ಕುರಿತು ಹೆಚ್ಚಿನ ಅಭಿಪ್ರಾಯ ನೀಡುತ್ತೇನೆ ಎಂದರು.
Leave a Reply

Your email address will not be published. Required fields are marked *

error: Content is protected !!