ಬಿಜೆಪಿ ಅಭ್ಯರ್ಥಿ ಪರ ಸಂಸದ ಅನಂತಕುಮಾರ್ ಹೆಗಡೆ ಪ್ರಚಾರಕ್ಕಿಲ್ಲ! ಪಕ್ಷದವರು ಗೋಗರೆದರೂ ಸಿಗಲಿಲ್ಲ ಕಾಲ್ ಶೀಟ್ !

1141

ಕಾರವಾರ :- ಉತ್ತರ ಕನ್ನಡ ಜಿಲ್ಲೆಯಲ್ಲಿ ಪರಿಷತ್ ಚುನಾವಣೆ ಕಾವು ಏರತೊಡಗಿದೆ. ಬಿಜೆಪಿ ಯಿಂದ ಗಣಪತಿ ಉಳ್ವೇಕರ್ ಅಭ್ಯರ್ಥಿಯಾಗಿ ಪ್ರಚಾರ ಪ್ರಾರಂಭಿಸಿದ್ದಾರೆ. ಆದರೇ ಬಿಜೆಪಿಯಲ್ಲಿ ಭಿನ್ನಮತ ಉಳ್ವೇಕರ್ ಗೆ ದೊಡ್ಡ ಹೊಡೆತ ಕೊಡುತ್ತಿದೆ.

ಗಣಪತಿ ಯಳ್ವೇಕರ್ ಗೆ ಟಿಕೆಟ್ ಎಂಬುದು ಗೊತ್ತಾಗುತಿದ್ದಂತೆ ಸಂಸದ ಅನಂತಕುಮಾರ್ ಹೆಗಡೆ ಜಿಲ್ಲೆಯ ಪಕ್ಷದ ಮುಖಂಡರಿಂದ ಅಂತರ ಕಾಪಾಡಿಕೊಂಡು ತಟಸ್ತರಾಗಿದ್ದಾರೆ. ಉಳ್ವೇಕರ್ ನಾಮಪತ್ರ ಸಲ್ಲಿಕೆಯಲ್ಲೂ ದೂರವಿದ್ದು ಅಂತರ ಕಾಪಾಡಿಕೊಂಡು ಮೌನ ವಹಿಸಿದ್ದು ,ಇದೀಗ ಪಕ್ಷದ ಆಂತರಿಕ ವಲಯದಲ್ಲಿ ಬಹು ಚರ್ಚಿತವಾಗುತ್ತಿದೆ.

ಪ್ರಚಾರಕ್ಕೆ ಬನ್ನಿ ಅಂದ್ರು ವಲ್ಲೇ ಎಂದ ಅನಂತಕುಮಾರ್!

ಪಕ್ಷದ ಅಭ್ಯರ್ಥಿ ಪರ ಪ್ರಚಾರಕ್ಕೆ ಬರುವಂತೆ ಸ್ಥಳೀಯ ಮುಖಂಡರು ಸಂಸದರನ್ನು ಸಂಪರ್ಕಿಸಿ ಒಂದು ದಿನವಾದರೂ ಪ್ರಚಾರಕ್ಕೆ ಬರುವಂತೆ ವಿನಂತಿಸಿದ್ದಾರೆ. ಇದಕ್ಕೆ ನೋಡೋಣ ಆದ್ರೆ ಬರುತ್ತೇನೆ ಎಂದು ಉತ್ತರ ಅನಂತ್ ಕಡೆಯಿಂದ ಬಂದಿದೆ.

ಇನ್ನು ಹೇಗಾದರೂ ಮಾಡಿ ಪ್ರಚಾರಕ್ಕೆ ಕರೆತರಬೇಕು ಎಂದು ಕೆಲವು ಆಪ್ತರು ಮಾಡಿದ ಪ್ರಯತ್ನ ಸಫಲವಾಗಿಲ್ಲ. ಬೆಂಗಳೂರಿನಲ್ಲಿ ವಾಸ್ತವ್ಯ ಮಾಡಿರುವ ಅನಂತಕುಮಾರ್ ಹೆಗಡೆ ದೆಹಲಿ ಕಡೆ ಮುಖ ಮಾಡಿದ್ದಾರೆ.

ಅನಂತ್ ಬಿನ್ನರಾಗ ಏಕೆ?

ಜಿಲ್ಲೆಯಲ್ಲಿ ಪಕ್ಷದ ಯಾವುದೇ ನಿರ್ಧಾರ ತೆಗೆದುಕೊಳ್ಳಬೇಕಾದರೂ ಸಂಸದರ ಮಾತು ಅಗ್ರ ವಾಕ್ಯ ವಾಗಿರುತಿತ್ತು. ಹಿಂದಿನ ವಿಧಾನಸಭೆ ಚುನಾವಣೆಯಲ್ಲಿ ಸಹ ಸಂಸದರ ಮಾತಿನಂತೆ ಟಿಕೆಟ್ ನೀಡಲಾಗಿತ್ತು. ಹೀಗಾಗಿ ಕುದ್ದು ಮುತುವರ್ಜಿ ವಹಿಸಿ ತಾವು ತಂದ ಜನರನ್ನು ಗೆಲ್ಲಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದರು‌ ಅನಂತಕುಮಾರ್ . ಇದರ ಫಲವಾಗಿ ಕರಾವಳಿಯಲ್ಲಿ ಗೆಲ್ಲದ ಕಡೆ ಬಿಜೆಪಿ ಗೆದ್ದಿತು.
ಬಿಜೆಪಿಯಲ್ಲಿ ರಾಜಕೀಯ ಬದಲಾವಣೆ ಆದ ನಂತರ ಜಿಲ್ಲೆಯ ನಾಯಕರಲ್ಲೂ ಹಲವು ಬಿನ್ನಾಭಿಪ್ರಾಯಗಳು ಏಳತೊಡಗಿದೆ. ಪಕ್ಷದಲ್ಲಿ ರಾಜಕೀಯ ಹಿಡಿತಕ್ಕೆ ನಾಯಕರ ಮುಸುಕಿನ ಗುದ್ದಾಟ ತಾರಕಕ್ಕೆ ಏರಿದೆ. ಇದಕ್ಕೆ ಪುಷ್ಟಿ ನೀಡುವಂತೆ ಇದೇ ತಿಂಗಳು ಯಲ್ಲಾಪುರದಲ್ಲಿ ಯಡಿಯೂರಪ್ಪನವರ ನೇತ್ರತ್ವದಲ್ಲಿ ನಡೆದ ಜನ ಸ್ಪರಾಜ್ ಸಮಾವೇಶದಲ್ಲಿ ಅನಂತಕುಮಾರ್ ಹೆಗಡೆ ಗೈರು ಎಲ್ಲವೂ ಸರಿ ಇಲ್ಲ ಎಂಬುದನ್ನು ತೋರಿಸಿಕೊಟ್ಟಿತು.
ಇನ್ನು ಪರಿಷತ್ ಅಭ್ಯರ್ಥಿ ಆಯ್ಕೆಯಲ್ಲೂ ಹೆಗಡೆಗೆ ಹಿನ್ನಡೆ ಮತ್ತಷ್ಟು ಒಳ ಮುನಿಸಿಗೆ ಕಾರಣವಾಯಿತು‌. ಇದರ ಪರಿಣಾಮ ಬಿಜೆಪಿ ಅಭ್ಯರ್ಥಿ ನಾಮಪತ್ರ ಸಲ್ಲಿಸುವಾಗ ಸಂಸದರ ಗೈರು ಮತ್ತೆ ತೋರಿಸಿಕೊಟ್ಟಿತು.

ಈ ತಿಂಗಳು ಸಂಸದರು ಎಲ್ಲಿ ಇರಲಿದ್ದಾರೆ? ಕಾರ್ಯಕ್ರಮ ಏನು?

ಸಂಸದರ ಅಪ್ತ ಮೂಲಗಳ ಮಾಹಿತಿ ಪ್ರಕಾರ ಉಳ್ವೇಕರ್ ಪರ ಪ್ರಚಾರಕ್ಕೆ ಸಂಸದರು ಇರುವುದಿಲ್ಲ ಎಂದು ತಿಳಿದುಬಂದಿದೆ. ಇಂದು ಅವರು ಬೆಂಗಳೂರಿನಲ್ಲಿ ಇದ್ದಾರೆ.
ನ. 26 ಕ್ಕೆ ದೆಹಲಿಗೆ ಪ್ರಯಾಣ ಬೆಳಸಲಿದ್ದಾರೆ.
ನ.29 ರಿಂದ ಸಂಸತ್ ಅಧಿವೇಶನದಲ್ಲಿ ಭಾಗಿಯಾಗಲಿದ್ದರೆ.ಡಿ.13 ಅಧಿವೇಶನ ಮುಗಿಯಲಿದ್ದು 15 ಕ್ಕೆ ಮರಳಿ ಶಿರಸಿ ಅಥವಾ ಬೆಂಗಳೂರಿಗೆ ಮರಳಿ ಬರಲಿದ್ದಾರೆ. ಈ ಮಧ್ಯೆ ಅವಕಾಶ ದೊರೆತರೆ ಡಿ. 10 ಕ್ಕೆ ಶಿರಸಿಯಲ್ಲಿ ಮತದಾನ ಮಾಡಲಿದ್ದಾರೆ ಎಂಬ ಮಾಹಿತಿ ಅವರ ಆಪ್ತ ಮೂಲಗಳಿಂದ ತಿಳಿದುಬಂದಿದೆ.

ಉಳ್ವೇಕರ್ ಗೆ ಹಿನ್ನಡೆ? ಭೀಮಣ್ಣನ ಪರ ಅನುಕಂಪ!

ಜಿಲ್ಲೆಯಲ್ಲಿ ಬಿಜೆಪಿ ಅಭ್ಯರ್ಥಿ ಉಳ್ವೇಕರ್ ರವರು ಈಗಾಗಲೇ ಪ್ರಚಾರ ಪ್ರಾರಂಭಿಸಿದ್ದಾರೆ. ನಾಳೆ ಶಿರಸಿ,ಸಿದ್ದಾಪುರ ಭಾಗದಲ್ಲಿ ಪ್ರಚಾರ ಮಾಡಲಿದ್ದಾರೆ. ಇವುಗಳ ನಡುವೆ ಇದೀಗ ಕ್ಷೇತ್ರದಲ್ಲಿ ಭೀಮಣ್ಣ ಪರ ಮಾತುಗಳು ಕೇಳಿಬರುತ್ತಿವೆ. ಕರಾವಳಿ ಭಾಗದಲ್ಲೂ ಪಕ್ಷಕ್ಕಿಂತ ವ್ಯಕ್ತಿ ,ವ್ಯಕ್ತಿತ್ವದ ಬಗ್ಗೆ ಸ್ಥಳೀಯ ಸಂಸ್ಥೆಗಳ ಪ್ರತಿನಿಧಿಗಳ ಬಾಯಲ್ಲಿ ಮಾತುಗಳು ಕೇಳಿಬರುತ್ತಿದೆ.

ಉಳ್ವೇಕರ್ ಗಿಂತ ಪಕ್ಷದ ಬಗ್ಗೆ ಅಭಿಮಾನ ಇರುವವರು ನಾವು ಉಳ್ವೇಕರ್ ಗೆ ಮತ ನೀಡುತ್ತೇವೆ ಎಂದು ಹೇಳಿದರೇ, ಭೀಮಣ್ಣ ಉತ್ತಮ ಅಭ್ಯರ್ಥಿ,ಒಳ್ಳೆ ಮನುಷ್ಯ, ಹಲವು ಬಾರಿ ಸೋತಿದ್ದಾರೆ,ಈ ಬಾರಿ ಅವರನ್ನು ಗೆಲ್ಲಿಸಬೇಕು ಎಂಬ ಮಾತುಗಳು ಕೇಳಿ ಬರುತ್ತಿದೆ. ಇದರ ಜೊತೆಗೆ ಜಾತಿ ಲೆಕ್ಕಾಚಾರ ಸಹ ನಡೆಯುತ್ತಿದೆ.
ಇನ್ನು ಸಂಸದರ ಮೌನ ಸಹ ಬಿಜೆಪಿ ಅಭ್ಯರ್ಥಿಗೆ ದೊಡ್ಡ ಹೊಡೆತ ಕೊಡುತ್ತಿದೆ. ಹೀಗಾಗಿ ಗೆಲ್ಲುವ ಕುದುರೆ ಇವರೇ ಎನ್ನುವಷ್ಟು ಲೆಕ್ಕಾಚಾರಗಳು ನಡೆಯುತಿದ್ದು, ಮುಂದೆ ಯಾರಿಗೆ ವಿಜಯಮಾಲೆ ಎಂಬುದು ಮಾತ್ರ ಚುನಾವಣೆ ಫಲಿತಾಂಶದ ನಂತರ ತಿಳಿದುಬರಲಿದೆ.
ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ