add

Astrology

Daily horoscope |ಸೋಮವಾರದ ದಿನ ಭವಿಷ್ಯ.

304

ಶ್ರೀ ಶಾರ್ವರಿ ನಾಮ ಸಂವತ್ಸರ, ಉತ್ತರಾಯಣ,
ಹೇಮಂತ ಋತು, ಪುಷ್ಯ ಮಾಸ,
ಕೃಷ್ಣಪಕ್ಷ ವಾರ : ಸೋಮವಾರ,
ತಿಥಿ : ದ್ವಾದಶಿ, ನಕ್ಷತ್ರ : ಮೂಲ,
ರಾಹುಕಾಲ: 8.15_9.42
ಗುಳಿಕಕಾಲ: 2.05_3.32
ಯಮಗಂಡಕಾಲ: 11.10-12.37

  • ಇಂದಿನ ರಾಶಿಗಳ ಫಲ ಈ ಕೆಳಗಿನಂತಿದೆ.

ಮೇಷರಾಶಿ
ಶುಭಮಂಗಲ ಕಾರ್ಯಕ್ಕಾಗಿ ಚಿಂತನೆ, ಧಾರ್ಮಿಕ ಕ್ಷೇತ್ರಗಳ ಭೇಟಿ, ಕೆಲಸ ಕಾರ್ಯಗಳಲ್ಲಿ ಯಶಸ್ಸು, ದೂರ ಸಂಚಾರ, ಆರೋಗ್ಯ ಸಮಸ್ಯೆಯ ಬಗ್ಗೆ ಎಚ್ಚರಿಕೆಯಿರಲಿ, ವ್ಯವಹಾರಗಳಿಂದ ಧನಲಾಭವಾದರೂ ಖರ್ಚುಗಳ ಬಗ್ಗೆ ಹಿಡಿತವಿರಲಿ, ಕುಟುಂಬದೊಂದಿಗೆ ಶುಭಸಂಜೆ

ವೃಷಭರಾಶಿ
ರಾಜಕಾರಣಿಗಳಿಗೆ ಶುಭ ಫಲ, ಪ್ರಾಮಾಣಿಕ ಕಾರ್ಯಕ್ಕೆ ಸಾಮಾಜಿಕ ಮನ್ನಣೆ, ಆಸ್ತಿ ಖರೀದಿ, ಸಹೋದರಿಯರಿಂದ ಸಹಕಾರ, ಆರೋಗ್ಯದ ಬಗ್ಗೆ ಕಾಳಜಿಯಿರಲಿ, ವಿಶೇಷ ಅತಿಥಿಗಳ ಆಗಮನ, ಯಾವುದೇ ಕಾರಣಕ್ಕೂ ಉದಾಸೀನತೆ ಸಲ್ಲದು.

ಮಿಥುನರಾಶಿ
ವಿದ್ಯಾರ್ಥಿಗಳಿಗೆ ವಿದ್ಯಾರ್ಜನೆಯಲ್ಲಿ ಪ್ರಗತಿ, ಸಾಂಸಾರಿಕವಾಗಿ ಸುಖ ಸಮೃದ್ದಿ ವೃದ್ದಿ, ಸ್ಬೇಹಿತರಿಂದ ಸಮಸ್ಯೆಗೆ ಪರಿಹಾರ ಕಂಡುಕೊಳ್ಳುವಿರಿ, ವ್ಯವಹಾರದಲ್ಲಿ ಪ್ರಗತಿ, ಧಾರ್ಮಿಕ, ಸಾಮಾಜಿಕ ಕಾರ್ಯಗಳ್ಲಲಿ ಮನ್ನಣೆ.

ಕಟಕರಾಶಿ
ಒಡಹುಟ್ಟಿದವರ ಬಗ್ಗೆ ಕಾಳಜಿಯಿರಲಿ, ಧೀರ್ಘ ಕಾಲದಿಂದ ಬಾಕು ಉಳಿದಿದ್ದ ಕಾರ್ಯಕ್ಕೆ ಮರು ಚಾಲನೆ, ಕುಟುಂಬಸ್ಥರೊಂದಿಗೆ ಪ್ರವಾಸ, ಇಷ್ಟಾರ್ಥ ಕಾರ್ಯ ಸಿದ್ದಿ, ರಾಜಕಾರಣಿಗಳಿಗೆ ಅನುಕೂಲದ ದಿನ, ಕೆಲಸ ಒತ್ತಡದಿಂದ ಚಿಂತೆ.

ಸಿಂಹರಾಶಿ
ಹಣಕಾಸಿನ ವಿಚಾರದಲ್ಲಿ ಸಮಸ್ಯೆಗಳು ಎದುರಾಗಲಿದೆ, ವ್ಯವಹಾರದಲ್ಲಿ ಪ್ರಭಾವಿಗಳ ಹಸ್ತಕ್ಷೇಪ. ಅತಿಥಿಗಳ ಆಗಮನ ಮನಸಿಗೆ ನೆಮ್ಮದಿ ತರಲಿದೆ, ರಾಜಕಾರಣಿಗಳಿಗೆ ಪ್ರಶಂಸೆ, ಸೋಮಾರಿತನವನ್ನು ವ್ಯವಹಾರದಲ್ಲಿ ಯಶಸ್ವಿಯಾಗಲಿದ್ದಾರೆ.

ಕನ್ಯಾರಾಶಿ
ತಾಯಿಯ ಆರೋಗ್ಯದ ಬಗ್ಗೆ ಚಿಂತೆ, ಹಿರಿಯರ ಮಾತನ್ನು ಆಲಿಸುವುದರಿಂದ ಯಶಸ್ಸು, ತಂದೆಯಿಂದ ಸಹಕಾರ, ಹೊಸ ವ್ಯವಹಾರಗಳಲ್ಲಿನ ಹೂಡಿಕೆಯಲ್ಲಿ ಲಾಭ, ಭೂಮಿ ಮತ್ತು ವಾಹನಗಳ ಖರೀದಿ ಯೋಗ, ಯಾವುದೇ ಕಾರಣಕ್ಕೂ ದುಡುಕಿನ ನಿರ್ಧಾರ ಬೇಡ.

ತುಲಾರಾಶಿ
ಸಾಮಾಜಿಕ ಮತ್ತು ವ್ಯವಹಾರ ಕ್ಷೇತ್ರಗಳಲ್ಲಿ ವಿರೋಧಿಗಳಿಂದ ಅಡೆತಡೆ, ಧಾರ್ಮಿಕ ಕ್ಷೇತ್ರಗಳ ಭೇಟಿ, ಬಂಧುಗಳ ಜೊತೆಗೆ ಮನಸ್ಥಾಪ, ನಿಮ್ಮ ಬುದ್ದಿವಂತಿಕೆ ಉತ್ತಮ ಫಲವನ್ನು ಕೊಡಲಿದೆ, ಹಿರಿಯರ ಸಲಹೆಯನ್ನು ಆಲಿಸಿ, ಹಳೆಯ ಯೋಜನೆಗಳು ಲಾಭವನ್ನು ನೀಡಲಿದೆ.

ವೃಶ್ಚಿಕರಾಶಿ
ಅಡೆತಡೆಗಳಿಂದಲೇ ಕಾರ್ಯಾನುಕೂಲ, ಕೆಲಸ ಕಾರ್ಯಗಳಲ್ಲಿ ಗೌಪ್ಯತೆಯನ್ನು ಕಾಪಾಡಿಕೊಳ್ಳಿ, ಕೌಟುಂಬಿಕವಾಗಿ ಶುಭ ಸುದ್ದಿ, ಚಿನ್ನಾಭರಣಗಳ ಖರೀದಿ ಯೋಗ, ಸಾಮಾಜಿಕ ಕ್ಷೇತ್ರಗಳಲ್ಲಿ ಮನ್ನಣೆ, ವಿದ್ಯಾರ್ಜನೆಯಲ್ಲಿ ಪ್ರಗತಿ, ಉದ್ಯೋಗ ಸ್ಥಳ ಬದಲಾವಣೆ, ಹೊಸ ಯೋಜನೆಗಳನ್ನು ಕೈಗೊಳ್ಳಲು ಸಕಾಲ,

ಧನಸುರಾಶಿ
ವ್ಯಾಪಾರ, ವ್ಯವಹಾರಗಳಲ್ಲಿ ಜಯ, ದೂರ ಪ್ರಯಾಣ, ಹೊಸ ಯೋಜನೆಗೆ ಹಣ ಹೂಡಿಕೆ ಬೇಡ, ಕೌಟುಂಬಿಕವಾಗಿ ಸಂತಸವನ್ನು ತರಲಿದೆ, ಸ್ನೇಹಿತರೊಂದಿಗೆ ಕಾಲ ಕಳೆಯುವಿರಿ, ಭವಿಷ್ಯದ ಶುಭ ಫಲಗಳು ಗೋಚರಕ್ಕೆ ಬರಲಿದೆ, ಸಾಲ ನೀಡಿದ ಹಣ ಕೈ ಸೇರದೆ ಚಿಂತೆ.

ಮಕರರಾಶಿ
ಪುಣ್ಯಕ್ಷೇತ್ರಗಳ ದರ್ಶನ, ಇಡೀ ದಿನಗಳ ಕಾಲ ಶುಭ ಸುದ್ದಿಯನ್ನೇ ಕೇಳುವಿರಿ, ಕೃಷಿ ಕ್ಷೇತ್ರದವರಿಗೆ ಹೆಚ್ಚಿನ ಲಾಭ, ವ್ಯವಹಾರಕ್ಕೆ ಸಂಬಂದಿಸಿದ ತೊಡಕುಗಳ ನಿವಾರಣೆಯಾಗಲಿದೆ, ಶತ್ರುಗಳ ವಿರುದ್ದ ಗೆಲುವು, ಪರಸ್ಥಳಗಳಲ್ಲಿ ವಾಸ. ವಾಹನ ಚಾಲನೆಯಲ್ಲಿ ಎಚ್ಚರವಹಿಸಿ.

ಕುಂಭರಾಶಿ
ಸ್ನೇಹಿತರ ಭೇಟಿಯಿಂದ ಸಂತಸ, ಮಂಗಳ ಕಾರ್ಯಕ್ಕಾಗಿ ಪ್ರಯಾಣ, ರಾಜಕಾರಣಿಗಳಿಗೆ ಉತ್ತಮ ಸ್ಥಾನಮಾನ, ಆರ್ಥಿಕ ಪರಿಸ್ಥಿತಿಯು ಬದಲಾವಣೆಯಾಗಲಿದೆ, ವಿದ್ಯಾರ್ಥಿಗಳಿಗೆ ವಿದ್ಯಾರ್ಜನೆಯಲ್ಲಿ ಯಶಸ್ಸು, ನಿಮ್ಮ ಪಾಲಿಗಿಂದು ಅದೃಷ್ಟದ ದಿನವಾಗಿರಲಿದೆ.

ಮೀನರಾಶಿ
ತಾಯಿಯೊಂದಿಗೆ ಭಿನ್ನಾಭಿಪ್ರಾಯ, ವಿವಾದಗಳಿಗೆ ತೆರೆಬೀಳಲಿದೆ, ಹಣಕಾಸಿನ ಸ್ಥಿತಿಯು ವೃದ್ದಿಸಲಿದೆ, ರಹಸ್ಯ ಶತ್ರುಗಳ ಬಗ್ಗೆ ಎಚ್ಚರವಿರಲಿ, ಹೊಸ ವ್ಯವಹಾರಗಳಿಗೆ ಕೈ ಹಾಕಬೇಡಿ, ನಿಂತಿದ್ದ ಕೆಲಸ ಕಾರ್ಯಗಳಿಗೆ ಮರು ಚಾಲನೆ, ವಿದ್ಯಾರ್ಥಿಗಳಿಗೆ ಪ್ರಗತಿ, ದೇವತಾದರ್ಶನ.
ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ