BREAKING NEWS
Search

ಪಾಕಿಸ್ತಾನಕ್ಕೆ ಹೋಗಿ ಅಂದ್ರು ಅನಂತಕುಮಾರ್ ಹೆಗಡೆ! ಯಾರಿಗೆ ಹೇಳಿದ್ದು ಗೊತ್ತಾ?

908

ಕಾರವಾರ:-ಮಂಗಳೂರಿನ ಜಿಲ್ಲಾಧಿಕಾರಿಯಾಗಿದ್ದ IAS ಅಧಿಕಾರಿ ಸೆಂಥಿಲ್ ಕೇಂದ್ರ ಸರ್ಕಾರದ ವಿರುದ್ಧ ಅಸಮದಾನ ಗೊಂಡು ರಾಜೀನಾಮೆ ನೀಡಿರುವುದಕ್ಕೆ ಉತ್ತರ ಕನ್ನಡ ಜಿಲ್ಲೆಯ ಸಂಸದ ಹಾಗೂ ಕೇಂದ್ರ ಮಾಜಿ ಸಚಿವ ಅನಂತಕುಮಾರ್ ಹೆಗಡೆಸೆಂಥಿಲ್ ಗೆ ಪಾಕಿಸ್ತಾನಕ್ಕೆ ವಲಸೆ ಹೋಗಿ ಎಂದು ಟ್ಟೀಟ್ ಮಾಡಿ ಟಾಂಗ್ ನೀಡಿದ್ದಾರೆ.

ಅನಂತಕುಮಾರ್ ಹೆಗಡೆ ಟ್ಟೀಟ್

ಮಾಧ್ಯಮಗಳಲ್ಲಿ ಕೇಂದ್ರದ ವಿರುದ್ಧ ಸಿಡಿದೇ ರಾಜೀನಾಮೆ ನೀಡಿದ್ದೆ ಎಂದು ಹೇಳಿದ್ದ ಅವರು
ಕಾಶ್ಮೀರ,ತಲಾಖ್,ರಾಮಮಂದಿರದ ಬಗ್ಗೆ ಕೇಂದ್ರದ ನಿಲುವು ಸಹಿಸಲಾಗಿಲ್ಲ ಈ ಕಾರಷದಿಂದ ರಾಜೀನಾಮೆ ನೀಡುತಿದ್ದೇನೆ ಕೇಂದ್ರ ಸರಗಕಾರದ ವಿರುದ್ಧ ಕರ್ನಾಟಕದಿಂದ ಮೊದಲ ಹೋರಾಟ ಪ್ರಾರಂಭಿಸುತ್ತೇನೆ ಎಂದು ಮಾಜಿ IAS ಅಧಿಕಾರಿ ಸೆಂಥಿಲ್ ಹೇಳಿಕೆ ನೀಡಿದ್ದರು.ಇದರ ಬೆನ್ನಲ್ಲೇ ಪತ್ರಿಕಾ ಹೇಳಿಕೆಯ ತುಣುಕನ್ನು ಟ್ವಿಟ್ಟರ್ ನಲ್ಲಿ ಷೇರ್ ಮಾಡುವ ಮೂಲಕ ಇಲ್ಲೇ ಇದ್ದು ನಮ್ಮ ದೇಶ ಒಡೆಯುವ ಬದಲು ಅಲ್ಲಿಗೆ ಹೋಗಿ ನಮ್ಮ ದೇಶ ಮತ್ತು ನಮ್ಮ ಸರ್ಕಾರದ ವಿರುದ್ಧ ಹೋರಾಟ ಮಾಡುವುದು ಒಳಿತು ಇದರಲ್ಲಾದರೂ ನಿಯತ್ತು ತೋರಿಸಲಿ ಎಂದು ಟ್ಟೀಟ್ ಮಾಡಿ ಟಾಂಗ್ ನೀಡಿದ್ದಾರೆ.
ವಿಪ್ಲೋ….
Leave a Reply

Your email address will not be published. Required fields are marked *