ಕೆಲಸ ಮಾಡದ್ದಕ್ಕೆ ಜಿಲ್ಲಾಧಿಕಾರಿ ಕಚೇರಿಯಲ್ಲೇ ಬಿ.ಎಸ್.ಎನ್.ಎಲ್ ಅಧಿಕಾರಿಗಳು ಲಾಕ್! ಸಂಸದ ಅನಂತಕುಮಾರ್ ಹೆಗಡೆ ಕೋಪಕ್ಕೆ ಅಧಿಕಾರಿಗಳು ಕಕ್ಕಾಬಿಕ್ಕಿ!

2088

ಕಾರವಾರ:- ಮುಖದಲ್ಲಿ ಕೋಪ!,ಅಧಿಕಾರಿಗಳು ಕಂಗಾಲು ಬೆಳಗ್ಗೆ ಒಂಬತ್ತುಘಂಟೆಗೆ ಜಿಲ್ಲಾ ಪ್ರಗತಿ ಪರಿಶೀಲನಾ ಸಭೆಗೆ ಬಂದ ಸಂಸದರು ರಾತ್ರಿ ಎಂಟು ದಾಟಿದರೂ ಜಿಲ್ಲಾಧಿಕಾರಿ ಕಚೇರಿ ಬಿಟ್ಟು ತೆರಳದೇ ಕುಳಿತಲ್ಲೇ ಕುಳಿತರು.ಕೆಲಸ ಆಗುವ ವರೆಗೂ ಧರಣಿ ಕೂರ್ತೀನಿ, ಇಂದು ಎಲ್ಲಿಗೂ ಹೋಗೊಲ್ಲ ಎಂದು ಪಟ್ಟು ಹಿಡಿದು ಕುಳಿತು ಜಡ್ಡು ಹಿಡಿದ ಅಧಿಕಾರಿಗಳಿಗೆ ತರಾಟೆ ತೆಗೆದುಕೊಂಡು ಕುಳಿತಲ್ಲೇ ಕುಳಿತ ಉತ್ತರ ಕನ್ನಡ ಜಿಲ್ಲೆಯ ಸಂಸದ ಅನಂತಕುಮಾರ್ ಹೆಗಡೆ.
ಹೌದು ಈ ಕೋಪಕ್ಕೆ ಕಾರಣವೂ ಇದೆ. ಇಂದು ಕಾರವಾರದಲ್ಲಿ ಜಿಲ್ಲಾ ಪ್ರಗತಿ ಪರಿಶೀಲನೆ ಸಭೆ ನಡೆಸಿದ ಸಂಸದರು ಮಧ್ಯಾನದ ವೇಳೆ ಜಿಲ್ಲೆಯಲ್ಲಿನ 231 ಗ್ರಾಮಪಂಚಾಯ್ತಿಗಳಿಗೆ ಉಚಿತ ಬಿ.ಎಸ್.ಎನ್.ಎಲ್ ವೈಫೈ ನೀಡಿರುವ ಕುರಿತು ಮಾಹಿತಿ ಪಡೆದರು.

ಈ ವೇಳೆ ಜಿಲ್ಲೆಯಲ್ಲಿ ಎಲ್ಲಾ ಗ್ರಾಮಪಂಚಾಯ್ತಿಗಳಿಗೂ ವೈ.ಪೈ ನೀಡಲಾಗಿದ್ದು ಕಾರ್ಯನಿರ್ವಹಿಸುತ್ತಿದೆ ಎಂದು ಬಿ.ಎಸ್.ಎನ್.ಎಲ್ . ನ ಜಿ.ಎಂ ಆರ್.ವಿ ಜನ್ನು ದಾಖಲೆಗಳನ್ನು ನೀಡಿದರು‌.

ಸಭೆಯ ವಿಡಿಯೋ ನೋಡಿ:-

https://youtu.be/AO5cNEwZAZI

ಆದರೇ ಜಿಲ್ಲೆಯಲ್ಲಿ ಉಚಿತ ವೈ.ಫೈ ನೀಡಿರುವುದರಲ್ಲಿ ಕೇವಲ 148 ಗ್ರಾಪಂ ಗಳಲ್ಲಿ ಮಾತ್ರ ಕಾರ್ಯ ನಿರ್ವಹಿಸುತಿದ್ರೆ 62 ರಲ್ಲಿ ಕಾರ್ಯನಿರ್ವಹಿಸುತ್ತಿರಲಿಲ್ಲ.

ಜಿಲ್ಲೆಯಲ್ಲಿ ಗ್ರಾಮಪಂಚಾಯ್ತು ಗಳಿಗಲ್ಲದೇ ಹಲವು ಮೊಬೈಲ್ ಟವರ್ ಸಿದ್ದವಾಗಿದ್ದರೂ ಯಾವುದೂ ಕೂಡ ಕಾರ್ಯನಿರ್ವಹಿಸದಿದ್ದರೂ ಬಿ‌ಎಸ್ ಎನ್ ಎಲ್ ಅಧಿಕಾರಿಗಳು ಎಲ್ಲವೂ ಸುಸ್ಥಿತಿಯಲ್ಲಿದೆ ಎಂದು ಸುಳ್ಳುದಾಖಲೆ ತೋರಿಸಿತ್ತು. ಹೀಗಾಗಿ ಈ ವಿಷಯ ಕುರಿತು ಗರಂ ಆದ ಸಂಸದ ಅನಂತಕುಮಾರ್ ಹೆಗಡೆ ಸಂಜೆ ಆರು ಘಂಟೆಗೆ ಮುಗಿಯಬೇಕಿದ್ದ ಪ್ರಗತಿ ಪರಿಶೀಲನಾ ಸಭೆಯಲ್ಲಿ ಇಂದೇ ಎಲ್ಲಾ ಸರಿಯಾಗಬೇಕು ಎಂದು ಪಟ್ಟು ಹಿಡಿದರು.

ಅಷ್ಟಕ್ಕೇ ಸುಮ್ಮನಾಗದ ಸಂಸದರು ಇಂದೇ ಸರಿಯಾಗಬೇಕು ಅಲ್ಲಿವರೆಗೂ ಕಚೇರಿ ಬಿಟ್ಟು ನಾನೂ ತೆರಳುವುದಿಲ್ಲ ನೀವೂ ತೆರಳುವಂತಿಲ್ಲ ಎಂದು ಪಟ್ಟು ಹಿಡಿದು ಜಿಲ್ಲಾಧಿಕಾರಿ ಕಚೇರಿಯ ಸಭಾಂಗಣದಲ್ಲೇ ಕುಳಿತಿದ್ದಾರೆ.

ಇದರಿಂದಾಗಿ ಬಿಎಸ್.ಎನ್ .ಎಲ್ ಅಧಿಕಾರಿಗಳು ಕಕ್ಕಾ ಬಿಕ್ಕಿಯಾಗಿದ್ದು ಜಿಲ್ಲಾಧಿಕಾರಿ ಕಚೇರಿಯಲ್ಲೇ ಲಾಕ್ ಆಗಿದ್ದಾರೆ. ಈ ಮಧ್ಯೆ ಮಾಧ್ಯಮದ ಜೊತೆ ಮಾತನಾಡಿದ ಸಂಸದರು ಒಂದು ವರ್ಷಗಳಿಂದ ಬಿ.ಎಸ್.ಎನ್.ಎಲ್, ಜಿ.ಎಸ್.ಎನ್.ಎಲ್ ,ಸಿ.ಎಸ್.ಎ ತಮ್ಮ ಆಂತರಿಕ ಜಗಳದಿಂದ ಗ್ರಾ.ಪಂ ಗಳಿಗೆ ವೈ.ಫೈ ನೀಡದೆ ಇಡೀ ಗ್ರಾಮಪಂಚಾಯ್ತಿ ಕಾರ್ಯಗಳು ,ಚಟುವಟಿಕೆಗಳು ನಿಂತುಹೋಗುವಂತಾಗಿದೆ‌. ಇಂದೇ ಎಲ್ಲಾ ಸಮಸ್ಯೆ ಬಗೆಹರಿಯಬೇಕು ಅಲ್ಲಿಯವರೆಗೂ ಕಚೇರಿ ಬಿಟ್ಟು ತೆರಳುವುದಿಲ್ಲ ಇಲ್ಲಿಯೇ ಧರಣಿ ಕೂರುತ್ತೇನೆ,ಅಧಿಕಾರಿಗಳನ್ನು ಸಹ ಬಿಡುವುದಿಲ್ಲ ಎಂದರು.

ಇನ್ನು ಅಧಿಕಾರಿಗಳು ಸಹ ಸಂಸದರ ಈ ಧಿಡೀರ್ ನಿರ್ಧಾರದಿಂದ ತಲೆಕೆಡಿಸಿಕೊಂಡಿದ್ದು ಜಿಲ್ಲಾಧಿಕಾರಿ ಕಚೇರಿಯಲ್ಲಿ ಸಂಸದರನ್ನು ಓಲೈಸುವ ಕೆಲಸದಲ್ಲಿ ಕೊನೆಗೂ ಸಫಲರಾದರು. ನಂತರ ಮಂಗಳವಾರದ ವರೆಗೆ ಗಡುವು ನೀಡಿ ಒಂಬತ್ತುಗಂಟೆ ನಂತರ ಅಧಿಕಾರಿಗಳಿಗೆ ತೆರಳಲು ಅನುವುಮಾಡಿಕೊಟ್ಟರು.
ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ