ಮುಂಡಗೋಡಿನಲ್ಲಿ ಬೇಟೆಗೆ ಹೋದ ಐವರು ಗೆಳೆಯರು ಗೆಳಯನಿಗೆ ಗುಂಡುಹಾರಿಸಿದ್ರು ಯಾಕೆ ಗೊತ್ತಾ?

743

ಕಾರವಾರ:-ರಾತ್ರಿ ವೇಳೆ ಕಾಡು ಪ್ರಾಣಿ‌ ಬೇಟೆಗೆ ಹೋದ ಐವರು ಕಾಡು ಪ್ರಾಣಿ ಎಂದು ತಮ್ಮ ತಂಡದಲ್ಲೇ ಇದ್ದವನಿಗೆ ಗುಂಡುಹಾರಿಸಿದ ಘಟನೆ ಉತ್ತರ ಕನ್ನಡ ಜಿಲ್ಲೆಯ ಮುಂಡಗೋಡಿನಲ್ಲಿ ನಡೆದಿದೆ.

ಜಿಲ್ಲೆಯ ಮುಂಡಗೋಡಿನ ಮಳಗಿ ಅರಣ್ಯ ಪ್ರದೇಶದಲ್ಲಿ ನಿನ್ನೆ ರಾತ್ರಿ ವೇಳೆ ಐವರು ತೆರಳಿದ್ದರು.ಈ ವೇಳೆ ಪ್ರಾಣಿಗಳನ್ನು ಬೇಟೆಯಾಡಲು ಗುಂಪಿನಲ್ಲಿದ್ದವರು ಚದುರಿ ಹೋಗಿದ್ದರು ಈ ವೇಳೆ ಮುಸ್ತಾಕ್ ಎಂಬಾತ ತಂಡದಿಂದ ಬೇರ್ಪಟ್ಟು ಪ್ರಾಣಿಗಳನ್ನು ಹುಡುಕುತಿದ್ದ.ಈತನೇ ಕಾಡುಪ್ರಾಣಿ ಎಂದು ಗುಂಡು ಹಾರಿಸಿದ್ದಾರೆ.ಈ ವೇಳೆ ಮುಸ್ತಾಕ್ ಗೆ ಎದೆಯ ಮೇಲ್ಭಾಗ ಗಂಭೀರ ಗಾಯವಾಗಿದ್ದು ತಕ್ಷಣಾ ಹುಬ್ಬಳ್ಳಿ ಆಸ್ಪತ್ರೆಗೆ ರವಾನಿಸಲಾಗಿದೆ. ಘಟನೆ ಸಂಬಂಧ ಮುಂಡಗೋಡು ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ನಾಲ್ವರು ಬೇಟೆಗಾಗಿ ಹೋಗಿದ್ದ ಸುಲೇಮಾನ್, ಇಸ್ಮಾಯಿಲ್, ಮುಕಮುಲ್, ಅಹ್ಮದ್ ಎಂಬುವವರನ್ನು ವಶಕ್ಕೆ ಪಡೆದು ಬಂದೂಕನ್ನು ವಶಕ್ಕೆ ಪಡೆದು ಪ್ರಕರಣ ದಾಖಲಿಸಲಾಗಿದೆ.
ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ