BREAKING NEWS
Search

ಚಿಗಳ್ಳಿ ಚಕ್ ಡ್ಯಾಮ್ ಒಡೆದು ಕೃಷಿ ಭೂಮಿಗೆ ಹಾನಿ! ಜನರಿಗೆ ತೊಂದರೆ ಇಲ್ಲ:ಭಯ ಬೇಡಿ.

865

ಕಾರವಾರ:- ಉತ್ತರ ಕನ್ನಡ ಜಿಲ್ಲೆಯ ಮುಂಡಗೋಡು ತಾಲೂಕಿನ ಚಿಗಳ್ಳಿಯಲ್ಲಿರುವ ಚಕ್ ಡ್ಯಾಮ್ ಒಡೆದು ಅಪಾರ ಪ್ರಮಾಣದ ನೀರು ಹೊರಬರುತಿದ್ದು ಚಕ್ ಡ್ಯಾಮ್ ಬಳಿ ಇರುವ 5000 ಎಕರೆ ಕೃಷಿ ಭೂಮಿಗೆ ನೀರು ಹೋಗುವ ಸಾಧ್ಯತೆಗಳಿದ್ದು ಈಗಾಗಲೇ ಒಂದು ಸಾವಿರ ಎಕರೆಯಷ್ಟು ಪ್ರದೇಶಕ್ಕೆ ನೀರು ನುಗ್ಗಿದೆ.


ಇನ್ನು ಎರಡು ಹಳ್ಳಿಗಳಿಗೆ ನೀರು ಬರುವ ಸಾಧ್ಯತೆ ಹಿನ್ನೆಲೆಯಲ್ಲಿ ಮುನ್ನೆಚ್ಚರಿಕಾ ಕ್ರಮವಾಗಿ ಈಗಾಗಲೇ ಜನರಿಗೆ ಸ್ಥಳಾಂತರ ಗೊಳ್ಳಲು ಸೂಚನೆ ನೀಡಲಾಗಿದೆ.

ಹೆದರುವ ಅವಷ್ಯಕತೆ ಇಲ್ಲ !ಜನರಿಗೆ ತೊಂದರೆ ಇಲ್ಲ.

ಚಿಗಳ್ಳಿ ಯಲ್ಲಿ ನೀರು ಹರಿದು ಹೋಗುತ್ತಿರುವುದು


ಇದೊಂದು ಹಳ್ಳ ಕೊಳ್ಳದಿಂದ ತುಂಬಿದ ನೀರು ಶೇಕರಿಸುವ ಚಕ್ ಡ್ಯಾಮ್ ಆಗಿದ್ದು ಇದರ ಸಾಮರ್ಥ 6800ಕ್ಯೂಸೆಕ್ಸ್ ನೀರನ್ನು ಸಂಗ್ರಹಿಸಿಕೊಳ್ಳುತ್ತದೆ. ಈ ನೀರನ್ನು ಕೃಷಿ ಚಟುವಟಿಕೆಗಳಿಗಾಗಿ ಮಾತ್ರ ಉಪಯೋಗಿಸುತಿದ್ದು 2009 ರಲ್ಲಿ ಒಂದು ಬಾರಿ ಒಡೆದಿತ್ತು .
ಈ ಡ್ಯಾಮ್ ಮಣ್ಣಿನ ದಿಬ್ಬದಿಂದ ಒಡ್ಡನ್ನು ನಿರ್ಮಿಸಿ ಕಟ್ಟಿದ್ದಾಗಿದೆ.ಈ ಬಾರಿ ಮಳೆ ಹೆಚ್ಚಾದ್ದರಿಂದ ಒತ್ತಡ ಹೆಚ್ಚಾಗಿ ಒಂದು ಭಾಗದಲ್ಲಿ ಬಿರುಕುಬಿಟ್ಟು ಒಡೆದಿದೆ. ಹೀಗಾಗಿ ಕೃಷಿ ಭೂಮಿ ಮುಳುಗಡೆ ಆಗಲಿದ್ದು ಇಲ್ಲಿನ ನೀರು ನೇರವಾಗಿ ಬೇಡ್ತಿ ನದಿಗೆ ಹೋಗಲಿದ್ದು ಈ ಭಾಗದಲ್ಲಿರುವ ಶಿರಸಿ ಮುಂಡಗೋಡು ರಸ್ತೆಯನ್ನು ತಾತ್ಕಾಲಿಕ ಬಂದ್ ಮಾಡಲಾಗಿದೆ.ಸ್ಥಳಕ್ಕೆ ತಹಶಿಲ್ದಾರ್ ಮೊಕ್ಕಾಂ ಹೂಡಿದ್ದು ಜಿಲ್ಲಾ ಪಂಚಾಯಿತ್ ಸಿ.ಇ.ಓ ರೋಷನ್ ಸ್ಥಳಕ್ಕೆ ಹೂಗುತಿದ್ದಾರೆ.
ಇನ್ನು ಈ ಕುರಿತು ಜಿಲ್ಲಾಧಿಕಾರಿ ಡಾ.ಹರೀಶ್ ಕುಮಾರ್ ಪ್ರತಿಕ್ರಿಯಿಸಿದ್ದು ಇದೊಂದು ಚಕ್ ಡ್ಯಾಮ್ ಇದರಿಂದ ಯಾವುದೇ ತೊಂದರೆ ಇಲ್ಲ ,ಜನ ಹೆದರುವ ಅವಶ್ಯಕತೆ ಇಲ್ಲ ಎಂದು ತಿಳಿಸಿದ್ದಾರೆ.

ಚಿಗಳ್ಳಿ ಡ್ಯಾಮ್ ನೀರಿನ ಸಾಮರ್ಥ್ಯ ಹಾಗು ವಿವರ ಇಲ್ಲಿದೆ:-

  • 20 ಮೀಟರ್ ಎತ್ತರ
  • 830 ಮೀಟರ್ ಅಗಲ
  • 6800 ಕ್ಯೂಸೆಕ್ ಸಾಮರ್ಥ ಹೊಂದಿದೆ
  • 165 ಹೆಕ್ಟೇರ್ ಜಾಗದಲ್ಲಿ ವಿಸ್ತಾರ ಹೊಂದಿದೆ
  • ಕ್ಯಾಚ್ ಮೆಂಟ್ ಏರಿಯಾ 25 ಸ್ವೇರ್ ಮೀಟರ್ ಹೊಂದಿದೆLeave a Reply

Your email address will not be published. Required fields are marked *