ಮುಂಡಗೋಡಿನಲ್ಲಿ ಅಪ್ರಾಪ್ತ ಬಾಲಕಿ ಅತ್ಯಾಚಾರ-ಅಪರಾಧಿಗಳಿಗೆ ಹತ್ತುವರ್ಷ ಜೈಲು ಶಿಕ್ಷೆ!

484

ಮುಂಡಗೋಡು:-ಮುಂಡಗೋಡ ಪೊಲೀಸ್ ಠಾಣೆ ವ್ಯಾಪ್ತಿಯ ಮಜ್ಜಿಗೇರಿ ಗ್ರಾಮದಲ್ಲಿ 07-08-2014 ರಂದು ಅಪ್ರಾಪ್ತ ಬಾಲಕಿಯ ಮೇಲೆ ಅತ್ಯಾಚಾರ ಮಾಡಿದ ಕುರಿತು ಮೂರು ಜನ ಆರೋಪಿಗಳ ಮೇಲೆ ಮುಂಡಗೋಡ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು ಪ್ರಕರಣದ ತನಿಖೆ ಕೈಗೊಂಡ ಹೆಚ್.ಕೆ.ಪಠಾಣ ಪಿ.ಐ. ಮುಂಡಗೋಡ ರವರು ತನಿಖೆ ನೆಡೆಸಿ ನ್ಯಾಯಾಲಯಕ್ಕೆ ಆರೋಪಿತರ ಮೇಲೆ ದೋಷಾರೋಪಣೆ ಪತ್ರ ಸಲ್ಲಿಸಿದ್ದರು.

ಈ ಹಿನ್ನಲೆಯಲ್ಲಿ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ವಿಶೇಷ ನ್ಯಾಯಾಲಯ FTSC-I (CFC) ಉತ್ತರ ಕನ್ನಡ, ಕಾರವಾರ ನ್ಯಾಯಾಲಯದ ನ್ಯಾಯಾಧೀಶರಾದ ಶ್ರೀ ಶಿವಾಜಿ ಅನಂತ ನಾಲ್ವಾಡೆ ರವರು ಈ ಪ್ರಕರಣದ ವಿಚಾರಣೆ ಕೈಗೊಂಡು ಆರೋಪಿತರಾದ ನಾಗರಾಜ ಭರಮಣ್ಣ ಭೋವಿವಡ್ಡರ, ಈತನಿಗೆ 10 ವರ್ಷ ಜೈಲು, ಶಿಕ್ಷೆ ,ರಮೇಶ ಯಲ್ಲಪ್ಪ ಭೋವಿ,ಮಂಜುನಾಥ ಹನುಮಂತಪ್ಪ ಹಾವೇರಿ ಇವರಿಗೆ ತಲಾ 07 ವರ್ಷ ಜೈಲು ಶಿಕ್ಷೆ ಹಾಗೂ 30,000/- ರೂ ದಂಡ ವಿಧಿಸಿ ತೀರ್ಪು ನೀಡಿದ್ದಾರೆ.

ಆರೋಪಿತರೆಲ್ಲರೂ ಮಜ್ಜಿಗೇರಿ ಗ್ರಾಮದವರಾಗಿದ್ದು ಸರಕಾರದ ಪರವಾಗಿ ವಿಶೇಷ ಅಭಿಯೋಜಕರಾದ ಸುಭಾಷ ಪಿ. ಖೈರಾನ ರವರು ವಾದವನ್ನು ಮಂಡಿಸಿದ್ದರು.
ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ