ಶ್ರೀರಾಮಸೇನೆ ರಾಜ್ಯ ಉಪಾಧ್ಯಕ್ಷನನ್ನು ಗಡಿಪಾರು ಮಾಡಲು ಮುರುಡೇಶ್ವರದ ಜನರಿಂದ ಆಗ್ರಹ!

943

ಕಾರವಾರ:-ಉದ್ಯಮಿಗಳಿಂದ ಹಪ್ತಾ ವಸೂಲಿ ಹಾಗೂ ಜೀವ ಬೆದರಿಕೆ ಆರೋಪದಡಿ ಮುರಡೇಶ್ವರ ಮೂಲದ ಶ್ರಿರಾಮ ಸೇನೆಯ ರಾಜ್ಯ ಉಪಾಧ್ಯಕ್ಷ ಜಯಂತ್ ನಾಯ್ಕ ನನ್ನು ಮುರುಡೇಶ್ವರ ಪೊಲೀಸರು ಈ ಹಿಂದೆ ಬಂಧಿಸಿ ನ್ಯಾಯಾಲಯದ ವಶಕ್ಕೆ ನೀಡಿದ್ದರು.

ಇಂದು ಮುರಡೇಶ್ವರದ ಗ್ರಾಮ ನಿವಾಸಿಗಳು ಹಾಗೂ ಅಂಗಡಿ ವರ್ತಕರು ಭಟ್ಕಳದ ಅಸಿಸ್ಟೆಂಟ್ ಕಮೀಷನರ್ ಬಳಿ ತೆರಳಿ ಈತನನ್ನು ಗಡಿಪಾರು ಮಾಡುವಂತೆ ಮನವಿ ಮಾಡಿದ್ದಾರೆ.

ಈ ಹಿಂದಿನಿಂದಲೂ ಮುರುಡೇಶ್ವರದ ವ್ಯಾಪಾರಿಗಳಿಗೆ ಹಾಗೂ ಬರುವ ಪ್ರವಾಸಿಗರಿಗೆ ಕಿರುಕುಳ ನೀಡುವುದು ಹಾಗೂ ಹಪ್ತಾ ವಸೂಲಿ ಮಾಡುತಿದ್ದು ತಮಗೆ ತೊಂದರೆ ನೀಡುತಿದ್ದಾನೆ ಎಂದು ಮನವಿ ಪತ್ರದಲ್ಲಿ ಆರೋಪಿಸಿದ್ದಾರೆ.

ಜನವರಿ 2 ರಂದು ಮುರುಡೇಶ್ವರದ ಉದ್ಯಮಿ ಹಾಗೂ ನೇತ್ರಾಣಿ ಸ್ಕೂಬಾ ಡ್ರೈವಿಂಗ್ ಮಾಲೀಕ ಗಣೇಶ್ ಹರಿಕಾಂತ ಎಂಬುವವರಿಂದ ಅವರು ನಡೆಸುತ್ತಿರುವ ಉದ್ಯಮಗಳಿಗೆ ಹಪ್ತಾ ನೀಡುವಂತೆ ಪೀಡಿಸುತಿದ್ದ. ಹಣ ನೀಡದಿದ್ದಾಗ ಮರಡೇಶ್ವರದ ಅವರ ಕಚೇರಿಗೆ ಬಂದು ಜೀವ ಬೆದರಿಕೆ ಹಾಕಿದ್ದನು.

ಈ ಹಿನ್ನಲೆಯಲ್ಲಿ ಈತನ ವಿರುದ್ಧ ಮುರುಡೇಶ್ವರ ಠಾಣೆಯಲ್ಲಿ ಪ್ರಕರಣವನ್ನು ಉದ್ಯಮಿ ಗಣೇಶ್ ಹರಿಕಾಂತ್ ದಾಖಲಿಸಿದ್ದರು.

ನಂತರ ಜಯಂತ್ ನನ್ನು ಪೊಲೀಸರು ವಶಕ್ಕೆ ಪಡೆದು ನ್ಯಾಯಾಲಯಕ್ಕೆ ಹಾಜುರುಪಡಿಸಿದ್ದು ಆರೋಪಿಯು ನ್ಯಾಯಾಂಗ ಬಂಧನದಲ್ಲಿದ್ದಾನೆ.




ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

error: Content is protected !!