ತಾಂತ್ರಿಕ ಕಾರಣ-ಬ್ಯಾಂಕ್ ಗಳ ಕಾರ್ಯದಲ್ಲಿ ವಿಳಂಬ! ಆಟೋ ಡೆಬಿಟ್ ಸಿಸ್ಟಮ್ ಬಂದ್!

354

ನವದೆಹಲಿ/ಕಾರವಾರ :- ಇಂದು ಉತ್ತರ ಕನ್ನಡ ಜಿಲ್ಲೆ ಸೇರಿದಂತೆ ಹಲವು ಜಿಲ್ಲೆಯಲ್ಲಿ ಬ್ಯಾಂಕ್ ಗಳ ಕಾರ್ಯಚಟುವಟಿಕೆ ಯಲ್ಲಿ ತಾಂತ್ರಿಕ ಸಮಸ್ಯೆ ಉಂಟಾಗಿ ಗ್ರಾಹಕರಿಗೆ ಸಮಸ್ಯೆಯಾಗಿದೆ.

ನಾಳೆ ಮತ್ತು ನಾಡಿದ್ದು ರಜೆ ಇರುವುದರಿಂದ ಏ.3 ರ ವರೆಗೆ ಬ್ಯಾಂಕ್ ಗಳ ಕೆಲಸ ಮಾಡಲು ಸಾಧ್ಯವಾಗುವುದಿಲ್ಲ.

ಕಾರಣ ಏನು?

ಇನ್ನುಮುಂದೆ ಬಿಲ್ ಪಾವತಿಸಲು ಆಟೋ ಡೆಬಿಟ್ ಸಿಸ್ಟಮ್ ಅನ್ನು ಇರಿಸಿಕೊಂಡಿದ್ದರೆ, ಗ್ರಾಹಕರಿಗೆ ಸಮಸ್ಯೆ ಎದುರಾಗಬಹುದು.

ಏಕೆಂದರೆ ರಿಸರ್ವ್ ಬ್ಯಾಂಕ್ ನ Additional Factor Authentication (AFA) ಗಾಗಿ ಹೊಸ ಮಾರ್ಗಸೂಚಿಗಳನ್ನು ಜಾರಿಗೆ ತರಲು ಇಂದು ಕೊನೆಯ ದಿನ .

ಏಪ್ರಿಲ್ ಒಂದರಿಂದ ಆಟೋ ಡೆಬಿಟ್ ಸಂಬಂಧಪಟ್ಟಂತೆ ಹೊಸ ನಿಯಮಗಳು ಜಾರಿಗೆ ಬರಲಿವೆ.

ಏಪ್ರಿಲ್ 1 ರಿಂದ, ಬಿಲ್ ಪಾವತಿಯಲ್ಲಿ ಆಟೋ ಡೆಬಿಟ್ ನಲ್ಲಿ ಸಮಸ್ಯೆ ಎದುರಾಗಲಿದೆ.

ಈ ಮಾರ್ಗಸೂಚಿಗಳು ಡೆಬಿಟ್ (Debit card) ಅಥವಾ ಕ್ರೆಡಿಟ್ ಕಾರ್ಡ್ ಮೂಲಕ ಮಾಡಲಾಗುವ ರಿಕರಿಂಗ್ ಪೇಮೆಂಟ್ ಗೆ ಅನ್ವಯವಾಗುತ್ತದೆ.

ಅಲ್ಲದೆ ಓಟಿಟಿ ಚಂದಾದಾರಿಕೆಗಳು ಮತ್ತು ಡಿಜಿಟಲ್ ಸುದ್ದಿ ಚಂದಾದಾರಿಕೆಗಳ ಆಟೋ ಡೆಬಿಟ್ ಗೂ ಅನ್ವಯವಾಗುತ್ತದೆ.

ಆರ್‌ಬಿಐನ ಈ ನಿರ್ಧಾರದ ಪರಿಣಾಮ ಲಕ್ಷಾಂತರ ಚಂದಾದಾರರ ಮೇಲೆ ಪರಿಣಾಮ ಬೀರಲಿದೆ.

ಏಕೆಂದರೆ ಏಪ್ರಿಲ್ 1 ರಿಂದ ಬಿಲ್‌ಗಳು ಮತ್ತು ಸಬ್ಸ್ಕ್ರಿಪ್ಶನ್ ಆಟೋ ಡೆಬಿಟ್ ಸಂಪೂರ್ಣ ಸ್ಥಗಿತವಾಗಲಿದೆ.

ಆರ್‌ಬಿಐ ಮಾರ್ಗಸೂಚಿಗಳನ್ನು ಅನುಸರಿಸದ ಬ್ಯಾಂಕುಗಳು!

ಆರ್.ಬಿ.ಐ ನ ಹೊಸ ನಿಯಮದಂತೆ ಗ್ರಾಹಕರ ಬಿಲ್ ಪಾವತಿ ಏಪ್ರಿಲ್ 1 ರ ನಂತರ ವಿಫಲವಾಗಬಹುದು ಎಂದು ಇಂಟರ್ನೆಟ್ ಮತ್ತು ಮೊಬೈಲ್ ಅಸೋಸಿಯೇಷನ್ ​​ಆಫ್ ಇಂಡಿಯಾ (IAMAI) ಗ್ರಾಹಕರಿಗೆ ಎಚ್ಚರಿಸಿದೆ.

ಅನೇಕ ಬ್ಯಾಂಕುಗಳು ಇನ್ನು ಕೂಡಾ ಆರ್‌ಬಿಐ ಮಾರ್ಗಸೂಚಿಗಳನ್ನು ಪಾಲನೆ ಮಾಡಿಲ್ಲ.

ಆರ್‌ಬಿಐ (RBI) ಮಾರ್ಗಸೂಚಿಗಳ ಪ್ರಕಾರ ನೋಂದಣಿ, ಟ್ರ್ಯಾಕಿಂಗ್, ಮೋಡಿಫಿಕಶನ್ ಮತ್ತು ವಿತ್ ಡ್ರಾ ಮಾಡಲು ಯಾವುದೇ ಕ್ರಮ ಕೈಗೊಂಡಿಲ್ಲ.

2000 ಕೋಟಿ ರೂಪಾಯಿಗಳ ಪಾವತಿಯ ಮೇಲೆ ಪರಿಣಾಮ!

ಏಪ್ರಿಲ್‌ನಲ್ಲಿ 2000 ಕೋಟಿ ರೂ.ಗಳವರೆಗೆ ಪಾವತಿ ಮೇಲ ಇದು ಪರಿಣಾಮ ಬೀರಬಹುದು ಎಂದು ಅಂದಾಜಿಸಲಾಗಿದೆ.

ಇದು ಕಾರ್ಡ್‌ಗಳು, ಯುಟಿಲಿಟಿ ಬಿಲ್‌ಗಳು,(Utility bill) ಒಟಿಟಿ ಮತ್ತು ಮಾಧ್ಯಮ ಚಂದಾದಾರಿಕೆಗಳು ಮತ್ತು ಎಂಎಸ್‌ಎಂಇಗಳು, ಕಾರ್ಪೊರೇಟ್‌ಗಳಂತಹ ಎಲ್ಲಾ ಕ್ಷೇತ್ರಗಳನ್ನು ಒಳಗೊಂಡಿದೆ.

e-mandates ಪ್ರಕ್ರಿಯೆ ಪೂರ್ಣಗೊಳಿಸಲು, ಬ್ಯಾಂಕುಗಳಿಗೆ ಆರ್‌ಬಿಐ ಎರಡು ಸುತ್ತೋಲೆಗಳನ್ನು ನೀಡಿದೆ. ಈ ಪ್ರಕ್ರಿಯೆ ಪೂರ್ಣಗೊಳಿಸಲು ಇಂದು ಕೊನೆಯದಿನ. ನಾಳೆಯ ಗಡುವು ನೀಡಲಾಗಿದೆ.

ಹೊಸ ಆರ್‌ಬಿಐ ನಿಯಮಗಳ ಪ್ರಕಾರ, ಬ್ಯಾಂಕುಗಳು ಪಾವತಿ ದಿನಾಂಕಕ್ಕೆ 5 ದಿನಗಳ ಮೊದಲು ನೋಟಿಫಿಕೇಶನ್ ಕಳುಹಿಸಬೇಕಾಗುತ್ತದೆ.

ಗ್ರಾಹಕರು ಅದನ್ನು ಅನುಮೋದಿಸಿದಾಗ ಮಾತ್ರ ಪಾವತಿಯನ್ನು ಸ್ವೀಕರಿಸಲಾಗುತ್ತದೆ. ಒಂದು ವೇಳೆ ಪಾವತಿ 5000 ರೂ.ಗಿಂತ ಹೆಚ್ಚಿದ್ದರೆ, ಬ್ಯಾಂಕುಗಳು ಗ್ರಾಹಕರಿಗೆ ಒಟಿಪಿ (OTP) ಕಳುಹಿಸಬೇಕಾಗುತ್ತದೆ. ಗ್ರಾಹಕರ ಸುರಕ್ಷತೆಯ ದೃಷ್ಟಿಯಿಂದ ಆರ್‌ಬಿಐ ಈ ಕ್ರಮ ಕೈಗೊಂಡಿದೆ.

ಪಾವತಿಯ ಇತರ ಕೆಲವು ವಿಧಾನಗಳನ್ನು ಅಳವಡಿಸಿಕೊಳ್ಳಬೇಕಾಗಿದೆ :

ಬ್ಯಾಂಕುಗಳು ಮತ್ತು ವ್ಯಾಪಾರಿಗಳು ಪರ್ಯಾಯವನ್ನು ಕಂಡುಕೊಳ್ಳುವವರೆಗೆ, ಗ್ರಾಹಕರು ವ್ಯಾಪಾರಿಗಳ ಪೇಮೆಂಟ್ ಪೇಜ್ ಗೆ ಹೋಗಿ ಪಾವತಿ ಮಾಡಬೇಕಾಗುತ್ತದೆ. ಇನ್ನೊಂದುವಿಚಾರ ಎಂದರೆ, UPI’s AutoPay ಮೂಲಕ ಪಾವತಿಯ ಮೇಲೆ ಯಾವುದೇ ಪರಿಣಾಮ ಬೀರುವುದಿಲ್ಲ.

ಎಚ್‌ಡಿಎಫ್‌ಸಿ ಬ್ಯಾಂಕ್, ಐಸಿಐಸಿಐ ಬ್ಯಾಂಕ್, ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದಂತಹ ಪ್ರಮುಖ ಬ್ಯಾಂಕುಗಳು ತಮ್ಮ ನೆಟ್‌ವರ್ಕ್ ಪಾಲುದಾರರಿಗೆ ರೆಕರಿಂಗ್ ಪೇಮೆಂಟ್ ಪ್ರಕ್ರಿಯೆಯ ಸೂಚನೆಗಳನ್ನು ಅನುಸರಿಸುವಂತೆ ಈಗಾಗಲೇ ಸೂಚಿಸಿವೆ.

ಆರ್.ಬಿ.ಐ ಕ್ರಮ ಕೈಗೊಳ್ಳಲು ಕಾರಣವೇನು?

ಈ ಹಿಂದೆ, ರಿಸರ್ವ್ ಬ್ಯಾಂಕ್ ಎಲ್ಲಾ ಬ್ಯಾಂಕುಗಳು, ಪೇಮೆಂಟ್ ಗೇಟ್‌ವೇಗಳು ಮತ್ತು ಇತರ ಸೇವಾ ಪೂರೈಕೆದಾರರಿಗೆ ತಮ್ಮ ಕಾರ್ಡ್ ವಿವರಗಳನ್ನು ಶಾಶ್ವತವಾಗಿ ಸ್ಟೋರ್ ಮಾಡದಂತೆ ಸೂಚಿಸಿತ್ತು. ಇದರಿಂದ ರೆಕರಿಂಗ್ ಪೇಮೆಂಟ್ ಇನ್ನಷ್ಟು ಕಷ್ಟವಾಗಲಿದೆ. Juspay ಮತ್ತು ನಿಯೋ ಬ್ಯಾಂಕಿಂಗ್ ಸ್ಟಾರ್ಟ್ಅಪ್ ಚಕ್ ಬುಕ್ ನಲ್ಲಿ ಡೇಟಾ ಸೋರಿಕೆಯ ಘಟನೆಗಳು ಸಂಭವಿಸಿದ ನಂತರ ಆರ್ ಬಿಐ ಈ ಕ್ರಮಗಳನ್ನು ಕೈಗೊಂಡಿದೆ.




ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ