ಉಗ್ರರೊಂದಿಗೆ ಶಿರಸಿಯ ವ್ಯಕ್ತಿಗಳ ಸಂಪರ್ಕ ಎನ್.ಐ.ಎ ತನಿಖಾ ತಂಡ ದಿಂದ ತನಿಖೆ

2618

ಕಾರವಾರ :- ದೇಶದ ವಿವಿಧ ಭಾಗದಲ್ಲಿ ಬಂಧನಕ್ಕೊಳಗಾದ 9 ಜನಉಗ್ರ ರನ್ನು ತನಿಖೆ ನಡೆಸುತ್ತಿರುವ ಎನ್.ಐ.ಎ ತಂಡ ಬಂಧಿತ ಉಗ್ರರೊಂದಿಗೆ ಸಂಪರ್ಕ ಹೊಂದಿರುವ ಸಂಶಯದ ಹಿನ್ನಲೆಯಲ್ಲಿ ಉತ್ತರ ಕನ್ನಡ ಜಿಲ್ಲೆಯ ಶಿರಸಿ ತಾಲೂಕಿನ ಅರೆಕೊಪ್ಪಕ್ಕೆ ಶನಿವಾರ ರಾತ್ರಿ ಭೇಟಿ ನೀಡಿ ವ್ಯಕ್ತಿಯೋರ್ವನನ್ನು ತನಿಖೆ ನೆಡೆಸಿ ತೆರಳಿದ್ದಾರೆ.

ಇಬ್ಬರು ಅಧಿಕಾರಿಗಳು ಹಾಗೂ ಓರ್ವ ಸಹಾಯಕನೊಂದಿಗೆ ಆಗಮಿಸಿದ್ದ ತಂಡ ಅರೆಕೊಪ್ಪ ಕ್ಕೆ ಆಗಮಿಸಿ ವ್ಯಕ್ತಿಯೋರ್ವನನ್ನು ಮೂರು ಘಂಟೆಗಳ ಕಾಲ ಸುದೀರ್ಘ ವಿಚಾರಣೆ ನಡೆಸಿದೆ ಎಂದು ಮೂಲಗಳಿಂದ ತಿಳಿದುಬಂದಿದೆ.

ಎನ್.ಐ.ಎ. ಕಳೆದ ಎರಡು ವಾರದ ಹಿಂದಷ್ಟೇ ದೇಶದ ವಿವಿಧ ಕಡೆಗಳಲ್ಲಿ 9 ಉಗ್ರರನ್ನು ಬಂಧಿಸಿತ್ತು.

ಬಂಧಿತರೊಂದಿಗೆ ಸಂಪರ್ಕ ಹಿನ್ನಲೆಯಲ್ಲಿ ಶಿರಸಿಗೆ ಭೇಟಿ ನೀಡಿದ ಬೆಳವಣಿಗೆ ನಡೆದಿದ್ದು,ಭಯೋತ್ಪಾದನಾ ಚಟುವಟಿಕೆಗೆ ಸಂಬಂಧಿಸಿದಂತೆ ಸಿಮ್ ಬಳಕೆಯಾದ ಹಿನ್ನೆಲೆಯಲ್ಲಿ ಅದರ ಕುರಿತು ಇಲ್ಲಿನ ವ್ಯಕ್ತಿಯ ವಿಚಾರಣೆ ನಡೆಸಲಾಗಿದೆ.

ಇದೇ ತಿಂಗಳು ಬನವಾಸಿ ಮೂಲದ ಮೌಲ್ವಿ ಮತಿನ್ ಎಂಬುವವನನ್ನು ಉಗ್ರರಿಗೆ ತನ್ನ ಹೆಸರಿನಲ್ಲಿ ಸಿಮ್ ಕೊಡಿಸಿದ ಆಧಾರದಲ್ಲಿ ತನಿಖೆ ನಡೆಸಿದ್ದರು. ಇದೇ ಪ್ರಕರಣಕ್ಕೆ ಸಂಬಂಧಿಸಿದಂತೆ ಅರೆಕೊಪ್ಪದ ವ್ಯಕ್ತಿಯನ್ನು ಸಹ ವಿಚಾರಣೆ ನೆಡೆಸಲಾಗಿದೆ. ಆದರೇ ಕೇವಲ ಈತನ ಬಳಿ ಮಾಹಿತಿ ಪಡೆದು ತೆರಳಿದ್ದಾಗಿ ತಿಳಿದುಬಂದಿದ್ದು ಯಾರನ್ನೂ ಸಹ ಬಂಧಿಸಿಲ್ಲ ಎನ್ನಲಾಗಿದೆ.
Leave a Reply

Your email address will not be published. Required fields are marked *