ಅಂತರ್ ಜಿಲ್ಲೆ ಚೆಕ್ ಫೋಸ್ಟ್ ನಲ್ಲಿ ಇನ್ಮುಂದೆ ಖುಲ್ಲಾಂ ಖುಲ್ಲಾ..!ಹೆಲ್ತ್ ಸ್ಕ್ರೀನಿಂಗ್ ಇನ್ನುಮುಂದೆ ಬಂದ್!

1447

ಬೆಂಗಳೂರು:-ಅಂತರ್ ಜಿಲ್ಲಾ ಚಕ್ ಪೋಸ್ಟ್ ನಲ್ಲಿ ಇನ್ನಯಂದೆ ಯಾವ ತಪಾಸಣೆಯನ್ನೂ ಮಾಡುವುದಿಲ್ಲ. ಹೌದು ಯಾವ ಚೆಕ್ ಪೋಸ್ಟ್ ನಲ್ಲಿಯೂ ಹೆಲ್ತ್ ಸ್ಕ್ರೀನಿಂಗ್ ಮಾಡಲ್ಲ ಖಾಸಗಿ ವಾಹನದವರಿಗೆ ಥರ್ಮಲ್ ಸ್ಕ್ಯಾನಿಂಗ್ ಕೂಡ ಇಲ್ಲ. ಹೆಲ್ತ್ ಸ್ಕ್ರೀನಿಂಗ್ ಕೂಡ ಮಾಡೋದಿಲ್ಲ .ಇನ್ನುಮುಂದೆ ಖುಲ್ಲಂ ಖುಲ್ಲ ಇರಲಿದೆ.
ಹೌದು ಈ ನಿರ್ಧಾರವನ್ನು ರಾಜ್ಯ ಸರ್ಕಾರದ ಆರೋಗ್ಯ ಇಲಾಖೆಯೇ ತಗೆದುಕೊಂಡಿದ್ದು ಈ ಕುರಿತು ಸಂಬಂಧಪಟ್ಟ ಇಲಾಖೆಗೆ ಮಾಹಿತಿ ರವಾನಿಸಿದೆ.

ಸರ್ಕಾರಿ ಸಾರಿಗೆ, ರೈಲು ಖಾಸಗಿ ಬಸ್ ನಲ್ಲಿ ಬರುವ ಪ್ರಯಾಣಿಕರಿಗೆ ಆಯಾಯ ಇಲಾಖೆ ಯೇ ಆರೋಗ್ಯ ತಪಾಸಣೆಯನ್ನು ವಹಿಸಿಕೊಳ್ಳಬೇಕು,
ಆರೋಗ್ಯ ಇಲಾಖೆಯಿಂದ ಪ್ರತ್ಯೇಕ ಹೆಲ್ತ್ ಸ್ಕ್ರೀನಿಂಗ್ ಇರುವುದಿಲ್ಲ ಎಂದು ತಿಳಿಸಿದೆ.

ಹೊರ ಜಿಲ್ಲೆಗೆ ಬಸ್ ನಲ್ಲಿ ಪ್ರಯಾಣಿಸಿದರೆ ಸಂಬಂಧಪಟ್ಟ ಇಲಾಖೆ ತಪಾಸಣೆಯನ್ನು ಮಾಡಬೇಕು ಹಾಗೂ ಸೊಂಕಿನ ಲಕ್ಷಣಗಳಿದ್ದರೆ ಮಾತ್ರ ಫೀವರ್ ಕ್ಲೀನಿಕ್ ನಲ್ಲಿ ತಪಾಸಣೆ ನಡೆಸಲಾಗುತ್ತದೆ.

ಇನ್ನು ವಾಹನ ತಪಾಸಣೆ ಸಹ ಇರುವುದಿಲ್ಲ.ಒಟ್ಟಿನಲ್ಲಿ ರಾಜ್ಯ ಸರ್ಕಾರದ ಇಂದಿನ ನಿರ್ಧಾರಗಳು ಟೀಕೆ ಪ್ರತಿ ಟೀಕೆಗೆ ಒಳಗಾಗುವ ಸಾಧ್ಯತೆಗಳಿದ್ದು ಮುಂದೆ ಈ ನಿಯಮ ಬದಲಾಗುತ್ತಾ ಅಂತ ಕಾಯ್ದು ನೋಡಬೇಕಿದೆ.
ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ