ಶಿವಮೊಗ್ಗ :- ನೀರು ಸೇದುತ್ತಿರುವಾಗ ನರ್ಸಿಂಗ್ ವಿದ್ಯಾರ್ಥಿನಿಯೊಬ್ಬಳು ಬಾವಿಗೆ ಬಿದ್ದು ಮೃತಪಟ್ಟ ಘಟನೆ ಸಾಗರ ತಾಲೂಕಿನ ತ್ಯಾಗರ್ತಿ ಗ್ರಾಮದಲ್ಲಿ ನಡೆದಿದೆ.
ಅಂಜಲಿ (19) ಮೃತ ದುರ್ದೈವಿ ಯಾಗಿದ್ದು ಬಿಎಸ್ಸಿ ನರ್ಸಿಂಗ್ ಓದುತ್ತಿದ್ದ ಈಕೆ ದನಗಳಿಗೆ ಕುಡಿಸಲು ಬಾವಿಯಿಂದ ನೀರು ಸೇದಲು ತನ್ನ ಸಂಬಂಧಿಯ ಮನೆ ಬಳಿಗೆ ಬಂದಿದ್ದಳು.
ಬಾವಿಯಿಂದ ನೀರು ಸೇದುತ್ತಿದ್ದಾಗ ಆಯಾತಪ್ಪಿ ಬಿದ್ದಿರುವ ಸಾಧ್ಯತೆ ಇದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ. ಇನ್ನು ಅವರ ಸಂಬಂಧಿಗಳು ಬಾವಿ ಬಳಿಗೆ ಬಂದು ನೋಡಿದಾಗ, ಅಂಜಲಿ ಮೃತಪಟ್ಟಿರುವುದು ಬೆಳಕಿಗೆ ಬಂದಿದೆ.
ಘಟನೆ ಸಂಬಂಧ ಸಾಗರ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.