ಅಂಕೋಲ ಪಿ.ಎಸ್.ಐ ಸಂಪತ್ ನೇತ್ರತ್ವದ ಕಾರ್ಯಾಚರಣೆ- ಕಳ್ಳರ ಬಂಧನ- ಮೂರುಲಕ್ಷ ವಸ್ತುಗಳು ವಶ.

900

ಉತ್ತರ ಕನ್ನಡ ಜಿಲ್ಲೆಯ ಅಂಕೋಲ ಠಾಣೆಯ ಪಿ.ಎಸ್.ಐ ಸಂಪತ್ ನೇತ್ರತ್ವದ ಪೊಲೀಸ್ ತಂಡ ಕಾರ್ಯಾಚರಣೆ ನಡೆಸಿ 3,72,100 ಮೌಲ್ಯದ ಮನೆ ಮತ್ತು ಕೇಬಲ್ ಆಫೀಸ್ ನಲ್ಲಿ ಕಳ್ಳತನ ಮಾಡಿದ್ದ ವಸ್ತುಗಳನ್ನು ಇಂದು ವಶಕ್ಕೆ ಪಡೆದು ನಾಲ್ಕು ಜನರನ್ನು ಬಂಧಿಸಿದ್ದಾರೆ.

ಅಂಕೋಲದ ಹುಲಿದೇವರವಾಡದ ರಾಜು ನಾಯ್ಕ ಎಂಬುವವರ ಟಿವಿ.ಕೇಬಲ್ ಆಫೀಸ್ ಮತ್ತು ಮನೆಯಲ್ಲಿ ಕಳ್ಳತಮಾಡಲಾಗಿತ್ತು.ಕಳ್ಳತನ ನಡೆದ ಕೆಲವೇ ದಿನದಲ್ಲಿ ಹಾವೇರಿ ಮೂಲದ ಇಮ್ರಾನ್,ಮುಬಾರಕ್,ಬಸವರಾಜ್,ಮಲ್ಲಿಕ್ ಜಾನ್ ನನ್ನು ಬಂಧಿಸಿದ್ದು ಇವರಿಂದ ಜಿಯೋ ವೈಫೈ, 20,500 ರು ನಗದು ಹಣ,ಹುಂಡೈ ಕಾರು,ಫೈರ್ ಹೋಲ್ ಮಿಷಿನ್ ಸೇರಿದಂತೆ ಒಟ್ಟು ಮೌಲ್ಯ 3,72,100 ರೂಗಳ ವಸ್ತುಗಳನ್ನು ವಶಕ್ಕೆ ಪಡೆಯಲಾಗಿದ್ದು ಕಾರ್ಯಾಚರಣೆಯಲ್ಲಿ ಎ.ಎಸ್.ಐ ಅಶೋಕ್ ತಳದಪ್ಪನವರ್,ಸಿ.ಪಿಸಿ ಮಂಜುನಾಥ್ ,ಶ್ರೀಕಾಂತ್ ,ಮನೋಜ್.ಡಿ,ಸಂತೋಷ್ ಕುಮಾರ್,ಜಗದೀಶ್ ನಾಯ್ಕ,ಆಸೀಪ್,ಸುರೇಶ್.ಬಿ,ಸಿಹೆಚ್ ಸಿ ಮಹ್ಮದ್ ಶಫಿ ಶೇಖ್ ಯಲ್ಲಾಪುರ ಠಾಣೆ,ಸಿಪಿಸಿ ಕೋಟೇಶ್ ಶಿರಸಿನಗರ ಠಾಣೆ ಸಿಬ್ಬಂಧಿಗಳು ಭಾಗವಹಿಸಿದ್ದು ಅಂಕೋಲ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಉತ್ತರ ಕನ್ನಡ ಜಿಲ್ಲೆಯ ಇಂದಿನ (17/10/2020)ಕರೋನಾ ಪಾಸಿಟಿವ್ ವಿವರ ಇಲ್ಲಿದೆ

ಉತ್ತರ ಕನ್ನಡ ಜಿಲ್ಲೆಯ ಸುದ್ದಿಗಳನ್ನು ಕಳುಹಿಸುವವರು ಈ ಕೆಳಗಿನ ನಂಬರ್ ಗೆ ವಾಟ್ಸ್ ಅಪ್ ಮಾಡಿ:-

9741058799.
Leave a Reply

Your email address will not be published. Required fields are marked *