ಬನವಾಸಿ ಪೊಲಿಸರ ಕಾರ್ಯಾಚರಣೆ- 2 ಲಕ್ಷ ಮೌಲ್ಯದ ಶ್ರೀಗಂಧ ವಶ

2596

ಕಾರವಾರ:- ಶ್ರೀಗಂಧ ಕಳ್ಳಸಾಗಣೆ ಮಾಡುತ್ತಿದ್ದ ಇಬ್ಬರನ್ನು ಬಂಧಿಸಿ ಗಂಧದ ತುಂಡುಗಳನ್ನು ವಶಕ್ಕೆ ಪಡೆದ ಘಟನೆ ಉತ್ತರ ಕನ್ನಡ ಜಿಲ್ಲೆಯ ಶಿರಸಿ ತಾಲೂಕಿನ ಬನವಾಸಿಯಲ್ಲಿ ನಡೆದಿದೆ.

ಸೊರಬದಿಂದ ಬನವಾಸಿ ಕಡೆಗೆ ಕಾರ್ ನಲ್ಲಿ ಗಂಧದ ತುಂಡುಗಳನ್ನು ಹಾಕಿಕೊಂಡು ಶಿರಸಿ ಕಡೆಗೆ ಬರಿತಿದ್ದ ನಾಲ್ವರ ಬಗ್ಗೆ ಖಚಿತ ಮಾಹಿತಿ ಪಡೆದ ಬನವಾಸಿ ಪೊಲೀಸರು ಕಾರನ್ನು ತಡೆದು ತಪಾಸಣೆ ಮಾಡಿದ್ದಾರೆ.ಈ ವೇಳೆ ಇಬ್ಬರು ಆರೋಪಿಗಳು ಪರಾರಿಯಾಗಿದ್ದು ಶಿರಸಿಯ ಇಬ್ಬರನ್ನು ಬಂಧಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ.

ಸುಮಾರು 2 ಲಕ್ಷ ರೂಪಾಯಿ ಮೌಲ್ಯದ 6 ಗಂಧದ ತುಂಡುಗಳನ್ನು ಹಾಗೂ ಸಾಗಾಣಿಕೆಗೆ ಬಳಸಿದ ಸ್ವಿಫ್ಟ್ ಕಾರನ್ನು ಸಹ ವಶಪಡೆಯಲಾಗಿದ್ದು
ಮಹೇಶ್ ಗುಡಿಗಾರ(48), ಗಣೇಶ ಗುಡಿಗಾರ(50) ಎಂಬುವವರನ್ನು ಬಂಧಿಸಿದ್ದು ಫೀರ್ ಖಾನ್ ಹಾಗೂ ಶಬಾನಾ ಫೀರ್ ಖಾನ್ ಚಿಕ್ಕಜಂಬೂರು ಮೂಲದ ವ್ಯಕ್ತಿಗಳು ಪರಾರಿಯಾದ ಆರೋಪಿಗಳಾಗಿದ್ದಾರೆ.

ಘಟನೆ ಸಂಬಂಧ ಬನವಾಸಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.
ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ