ಜಾಂಡಿಸ್ ಗುಣಪಡಿಸಿತ್ತೆ ಈ ಆನಂಗಿ ಗಿಡ:ಉಪಯೋಗ ತಿಳಿಯಿರಿ

511

” ಆನಂಗಿ (ತಿಗಡೆ) / Oroxylum indicum – Bignoniaceae”

ಮಲೆನಾಡಿನ ಒಡಲಲ್ಲಿ ಔಷಧೀಯ ಗುಣವುಳ್ಳ ಸಾವಿರಾರು ಸಸ್ಯ ರಾಶಿಗಳಿವೆ. ಅವುಗಳ ಬಗ್ಗೆ ನಮಗೆ ಅರಿವಿಲ್ಲದೇ ಅವುಗಳು ಅವಸಾನದ ಅಂಚು ತಲುಪಿವೆ. ಇವುಗಳ ರಕ್ಷಣೆ ,ಅವುಗಳ ಉಪಯೋಗದ ಕುರಿತು ಮಾಹಿತಿ ನೀಡುವುದೇ ಈ ಲೇಖನದ ಉದ್ದೇಶ .

ಇಂದಿನ ಲೇಖನದಲ್ಲಿ ಆನಂಗಿ ಅಥವಾ ತಿಗಡೆ ಎಂದು ಕರೆಯಲ್ಪಡುವ ಸಸ್ಯದ ಕುರಿತು ಮಾಹಿತಿ ಹಾಗೂ ಅದರ ಉಪಯೋಗವೇನು ಎಂಬುದನ್ನು ನಿಮ್ಮಮುಂದಿಡುತಿದ್ದೇವೆ.

ಆನಂಗಿ ಮರ ಸುಮಾರು ಮೂವತ್ತು ನಲವತ್ತು ಅಡಿ ಎತ್ತರದ ವರೆಗೂ ಬೆಳೆಯುವ ಸಣ್ಣ ಕಾಂಡವುಳ್ಳ ಮರ. ಎಲೆಗಳು ಸಂಯುಕ್ತ ವಾಗಿದ್ದು ಮೂರರಿಂದ ಐದು ಅಡಿ ಉದ್ದವಾಗಿರುತ್ತದೆ.

ವಿಶೇಷವಾಗಿ ಪಶ್ಚಿಮ ಘಟ್ಟಗಳ ಪ್ರದೇಶದಲ್ಲಿ ಕಂಡು ಬರುತ್ತವೆ. ಕೆಂಪು ಮಿಶ್ರಿತ ತಿಳಿ ನೇರಳೆ ಬಣ್ಣದ ಹೂವಾಗಿ ಕತ್ತಿಯಂತೆ ಉದ್ದವಾದ ಚಪ್ಪಟೆ ಕಾಯಿ ಬಿಡುತ್ತದೆ.

ಬೀಜ ತೆಳುವಾದ ಚಿಪ್ಸ್ ತರಹ ಇದ್ದು ಬಿಳಿ ಬಣ್ಣದಿಂದ ಕೂಡಿರುತ್ತದೆ.

ಇದರ ಉಪಯೋಗ ಹಾಗೂ ಚಿಕಿತ್ಸೆ:-

ಕಮಾಲೆ (ಜಾಂಡೀಸ್) ಗೆ ಮರದ ತೊಗಟೆಯನ್ನು ಗೋಮೂತ್ರದಲ್ಲಿ ತೇಯ್ದು ಒಂದು ಚಮಚ ಗಂಧ ತಯಾರಿಸಿ ಹತ್ತು ಚಮಚ ನೀರು ಸೇರಿಸಿ ಖಾಲಿ ಹೊಟ್ಟೆಯಲ್ಲಿ ಮೂರು ದಿನ ಸೇವಿಸುವುದು. ಕಮಾಲೆ ರೋಗ ನಿಯಂತ್ರಣಕ್ಕೆ ಬರುತ್ತದೆ.

Oroxylum indicum - Bignoniaceae

ಬೀಜ

ಬೀಗಿಗೆ (ಬಾತುಕೊಂಡಿರುವುದು) :-

ಸಂದು ನೋವು ಗಂಟು ನೋವಿನಿಂದ ಬೀಗಿದ್ದರೆ ತೊಗಟೆ ಕಷಾಯವನ್ನು ಮಾಡಿಟ್ಟುಕೊಂಡು ಆಗಾಗ್ಯೆ ಲೇಪನ ಮಾಡುತ್ತಿರಬೇಕು.

ಚವಿ (ಗರ್ಭಸ್ಥ) ದೋಷ :-
ಎರಡಿಂಚು ಅಗಲ ಒಂದುವರೆ ಇಂಚು ಉದ್ದದ ತೊಗಟೆಯನ್ನು ನೂರು ಎಂ.ಎಲ್.ನೀರಿನಲ್ಲಿ ಹಾಕಿ, ಅದಕ್ಕೆ ಐದು ಗ್ರಾಂ.ನಷ್ಟು ಜೀರಿಗೆ ಕೊತ್ತಂಬರಿ ಪುಡಿಯನ್ನು ಹಾಕಿ ಚೆನ್ನಾಗಿ ಕುದಿಸಿ ಒಂದು ವಾರ ಸೇವಿಸುವುದು.

Oroxylum indicum - Bignoniaceae

ಆನಂಗಿ ಗಿಡದ ಹೂ

ಜಾನುವಾರುಗಳು ಚವಿ ದೋಷದಿಂದ ಗರ್ಭ ದರಿಸದಿದ್ದರೆ ಅಂಗೈ ಅಗಲದ ತೊಗಟೆಯನ್ನು ಒಂದು ಬಕೆಟ್ ನೀರಿನಲ್ಲಿ ಸಂಜೆ ನೆನಸಿಟ್ಟು ಮೂರು ದಿನ ಬೆಳಗ್ಗೆ ಕುಡಿಯಲು ಕೊಡುವುದು.

” ತಜ್ಞ ವೈದ್ಯಕೀಯ ಮಾರ್ಗದರ್ಶನದಲ್ಲಿ ಚಿಕಿತ್ಸೆ ಸೂಕ್ತ. “

ಲೇಕನ :- ಆನೆಗುಳಿ ಸುಬ್ಬರಾವ್, ಜನಪದ ವೈದ್ಯ ಹಾಗೂ ಪರಿಸರ ಹೋರಾಟಗಾರರು.

  • ಔಷಧಿ ಸಸ್ಯಗಳ ಬಗ್ಗೆ ಮಾಹಿತಿ ತಿಳಿದುಕೊಳ್ಳುವ ಅಥವಾ ಔಷಧಿ ಗಿಡಗಳನ್ನು ಬೆಳಸುವ ಆಸಕ್ತಿ ಇದ್ದಲ್ಲಿ ಈ ಕೆಳಗಿನ ನಂಬರ್ ಗೆ ಸಂಪರ್ಕಿಸಬಹುದು .ಉಚಿತವಾಗಿ ಸಸ್ಯಗಳನ್ನು ನೀಡಲಾಗುವುದು:-9480023939

# ಪಶ್ಚಿಮಘಟ್ಟ ಉಳಿದರೆ ಔಷಧೀಯ ಸಸ್ಯಗಳು ಉಳಿದಾವು #
Leave a Reply

Your email address will not be published. Required fields are marked *

error: Content is protected !!