ಹಳಿಯಾಳದಲ್ಲಿ ಜೂಜಾಟ 17 ಜನರ ಬಂಧನ-ಲಕ್ಷಕ್ಕೂ ಹೆಚ್ಚು ಹಣ ವಶ

1023

ಕಾರವಾರ :-ಉತ್ತರ ಕನ್ನಡ ಜಿಲ್ಲೆಯ ಹಳಿಯಾಳದ ದುಸಗಿ ಬ್ರಿಡ್ಜ್ ನ ಕೆಳಭಾಗದಲ್ಲಿ ಇಸ್ಪೀಟ್ ಜೂಜಾಟ ಆಡುತಿದ್ದ 17 ಜನರನ್ನು ಕಾರವಾರದ ಡಿ.ಸಿ.ಐ.ಬಿ ಅಧೀಕ್ಷಕ ನಿಶ್ಚಲ್ ಕುಮಾರ್ ನೇತ್ರತ್ವದ ತಂಡ ದಾಳಿ ನಡೆಸಿ 1,43,650 ರುಪಾಯಿಯನ್ನು ಹಾಗೂ ಇಸ್ಪೀಟ್ ಪಡಿಕರವನ್ನು ವಶಕ್ಕೆ ಪಡೆದು ಬಂಧಿಸಿದೆ.

ಜಿಲ್ಲೆಯ ಹಳಿಯಾಳದಲ್ಲಿ ಹಲವು ದಿನಗಳಿಂದ ಇಸ್ಪೀಟ್ ಜೂಜಾಟ ಆಡುತಿದ್ದ ಬಗ್ಗೆ ಮಾಹಿತಿ ಪಡೆದ ಡಿ.ಸಿ.ಐ.ಬಿ ತಂಡ ದಾಳಿ ನಡೆಸಿದ್ದು ಈ ವೇಳೆ ಹಳಿಯಾಳದ ಕರಿಯಪ್ಪ,ಶ್ರೀಕಾಂತ್ ,ನಾಸಿರ್,ಶಿವಾನಂದ,ಅಲ್ಬನ್,ಮಂಜುನಾಥ್,ಮೋಹನ್ ,ಪರಶುರಾಮ್,ರಿಯಾಜ್ ,ಗೌರೀಶ್,ಮುಕ್ತುಮ್ ,ಆನಂದ್ ,ತಾನಾಜಿ,ಶಿವಾಜಿ,ವಾಸೀಂ,ರಸೂಲ್,ಬಸೀರ್ ಖಾನ್,ಎಂಬುವವರನ್ನು ಬಂಧಿಸಿದ್ದು ಪ್ರಕರಣ ದಾಖಲಿಸಿದೆ.
ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ