BREAKING NEWS
Search

ಜೋಯಿಡಾ|ಕಾಡಿನಲ್ಲಿ ಸಿಕ್ತು ಪಿಸ್ತೂಲು ಆ ಎರಡು ಚೀಲಗಳು?

646

ಜೊಯಿಡಾ: ಜೋಯಿಡಾ ತಾಲ್ಲೂಕಿನ ಕ್ಯಾಸಲ್ ರಾಕ್ ಸಮೀಪದ ಕುಣಗಿಣಿ ಚೆಕ್ ಪೋಸ್ಟ್ ಹತ್ತಿರದ ಕಾಡಿನಲ್ಲಿ ಯಾರೋ ಎಸೆದಿರುವ ಎರಡು ಚೀಲಗಳು ಮತ್ತು ಪಿಸ್ತೂಲು ಮಾದರಿಯ ಏರ್ ಗನ್ ಅರಣ್ಯ ದಲ್ಲಿ ಭಾನುವಾರ ಕಂಡುಬಂದಿದೆ.

ಸ್ಥಳಕ್ಕೆ ಅರಣ್ಯ ಇಲಾಖೆಯ ಅಧಿಕಾರಿಗಳು ಮತ್ತು ಪೊಲೀಸ್ ಇಲಾಖೆಯ ಅಧಿಕಾರಿಗಳು ಭೇಟಿ ತನಿಖೆ ಕೈಗೊಂಡಿದ್ದಾರೆ.

ಕಾಳಿ ಹುಲಿ ಸಂರಕ್ಷಿತ ಪ್ರದೇಶದ ವ್ಯಾಪ್ತಿಗೆ ಬರುವ ಕ್ಯಾಸಲ್ ರಾಕ್ ವನ್ಯಜೀವಿ ವಲಯದಲ್ಲಿ ಈ ಪ್ರದೇಶವಿದೆ.

ಅರಣ್ಯದಲ್ಲಿ ಭೇಟೆ ಆಡಲು ಅಥವಾ ಇನ್ಯಾವುದೋ ಕೃತ್ಯಕ್ಕೆ ಇದನ್ನು ಬಳಸಲು ತಂದಿರಬಹುದೇ ಎಂಬ ಅನುಮಾನ ಮೂಡಿದೆ.

ಸದ್ಯ ಈ ಏರ್ ಗನ್ ಅನ್ನು ತಂದವರು ಯಾರು, ಯಾಕೆ ತಂದಿ‌ದ್ದರು, ಚೀಲದಲ್ಲಿ ಏನಿದೆ ಎಂಬ ಬಗ್ಗೆ ಈ ವರೆಗೂ ಮಾಹಿತಿ ತಿಳಿದುಬಂದಿಲ್ಲ. ಅರಣ್ಯ ಇಲಾಖೆ ಅಧಿಕಾರಿಗಳು ತನಿಖೆ ಕೈಗೊಂಡಿದ್ದು ನಂತರ ತಿಳಿದುಬರಬೇಕಿದೆ.




ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ