ಕೋವಿಡ್ ವೈರಾಣು ಕೊಲ್ಲಲು ಬಂತು ಪಾಲಿಮಾರ್ ಶೀಟ್! ಶಿವಮೊಗ್ಗ ಯುವ ವಿಜ್ಞಾನಿಗಳ ತಂಡದಿಂದ ಅವಿಷ್ಕಾರ!

1121

ಶಿವಮೊಗ್ಗ: ಮನುಕುಲಕ್ಕೆ ಮಾರಕವಾದ ಕೊರೊನಾ ಸಾಂಕ್ರಾಮಿಕ ವೈರಾಣುಗಳ ಹರ ಡುವಿಕೆಯನ್ನು ನಿಯಂತ್ರಿಸುವ ನಿಟ್ಟಿನಲ್ಲಿ ಹೋರಾಡುತ್ತಾ ಬಸ ವಳಿಯುತ್ತಿರುವ
ಸರ್ಕಾರ-ಸಾರ್ವಜನಿಕರಿಗೆ ಆಶಾ ದಾಯ ಕವಾದ ಪರಿಹಾರ ವೊಂದನ್ನು ಶಿವಮೊಗ್ಗದ ಉತ್ಸಾಹಿ
ವಿಜ್ಞಾನಿ ಗಳ ತಂಡವೊಂದು ಸಂಶೋಧನೆ ಮೂಲಕ ಅಭಿವೃದ್ಧಿಪಡಿಸಿರು ವುದು ವೈದ್ಯಕೀಯ
ಲೋಕದಲ್ಲಿ ಕುತೂಹಲ ಮೂಡಿಸಿದೆ.

 ಶಿವಮೊಗ್ಗದಲ್ಲಿರುವ ಬಾಲಜಿ ಪೊಲಿ ಪ್ಯಾಕ್ ಎಂಬ ಸಂಸ್ಥೆಯು ಆಡ್ ನ್ಯಾನೊ
ಟೆಕ್ನೊಲೊಜಿಸ ಪ್ರೈವೇಟ್ ಲಿಮಿಟೆಡ್ ಎಂಬ ಸಂಸ್ಥೆಯ ಸಹಯೋಗದಲ್ಲಿ ಈ ಸಂಶೋಧನೆಯನ್ನು ಕೈಗೆತ್ತಿಕೊಂಡು ಫಲಶೃತಿ ಕಂಡಿವೆ.

ಸಾಮಾನ್ಯ ವಾಗಿ ಸರ್ಕಾರದ ಈಗಿನ ವೈದ್ಯಕೀಯ
ಕ್ಷೇತ್ರದ ಪ್ರಕಾರ ಯಾವುದಾದರೂ ವಸ್ತುಗಳ ಮೇಲ್ಮೈ ಮೇಲೆ ಕೊರೊನಾ ವೈರಸ್ ಅಂಟಿಕೊಂಡರೆ ಅದರ ಆಯಸ್ಸು ಸುದೀರ್ಘ ಮೂರು ದಿನಗಳ ವರೆಗೆ ಇರುತ್ತದೆ.

ಆದರೆ ತಾವು ಸಂಶೋ ಧನೆಯ ಮೂಲಕ ಕಂಡುಹಿಡಿದ ಈ ಪೋಲಿಮರ್ ಇಥೆಲಿನ್ ಶೀಟ್ ಮೇಲೆ ಅಂಟಿಕೊಂಡಿ ರುವ ಕೊರೊನಾ ವೈರಾಣು ಕೇವಲ ೨ ಗಂಟೆ ೫೪ ನಿಮಿಷ ದಲ್ಲಿ ಸತ್ತುಹೋಗುತ್ತವೆ.

ಬೇರೆಯವರಿಗೆ ಹರಡುವುದನ್ನು ತಪ್ಪಿಸುತ್ತವೆ ಎಂದು ಬಾಲಾಜಿ ಪಾಲಿ ಪ್ಯಾಕ್‌ನ ಸಿ.ಇ.ಒ. ವಿನಯ್ ಜಿ. ಹಾಗೂ ಯ್ಯಡ್ ನ್ಯಾನೊ ಟಕ್ನಾಲಜಿಸ್ ಪೈವೇಟ್
ಲಿಮಿಟೆಡ್‌ನ ವ್ಯವಸ್ಥಾಪಕ ನಿದೇಶಕರಾದ ಅದ್ನಾನ್ ಜಾವಿದ್ ಅವರ ಅಂಬೋಣವಾಗಿದೆ.

ವರದಿಯೊಂದರ ಪ್ರಕಾರ ಕೊವಿಡ್-೧೯ ವೈರಾಣುಗಳು ವಿವಿಧ ವಸ್ತುಗಳ ಮೇಲ್ಮೈಯಲ್ಲಿ ಒಂದರಿಂದ ಮೂರು ದಿವಸಗಳ ವರೆಗೆ ಜೀವಂತವಾಗಿರುತ್ತವೆ. ಇದರಿಂದ ಪಾರಾಗುವುದು ವೈದ್ಯ ಲೋಕಕ್ಕೆ ಒಂದು ದೊಡ್ಡ ಸವಾಲೇ ಆಗಿದೆ.

ಈ ಸಂಧಿಗ್ದತೆ ಯಿಂದ ಪಾರಾಗಲು ತಾವು ಕಂಡು
ಹಿಡಿದಿರುವುದೇ ಅತ್ಯಂತ ಕಡಿಮೆ ಅವಧಿಯಲ್ಲಿ ಈ ವೈರಾ ಣುಗಳನ್ನು ನಾಶಮಾಡುವ ಪಾಲಿಮರ್
ಇಥೆಲಿನೆ ಶೀಟ್ ಇದಾಗಿದೆ ಎಂದು  ತಿಳಿಸಿದ್ದಾರೆ.

ಕೊವಿಡ್-೧೯ ವೈರಾಣು ಗಳನ್ನು ಅತಿ ಕಡಿಮೆ ಅವಧಿ ಯಲ್ಲಿ ಸಾಯಿಸುವ ಈ ಪಾಲಿ ಥಿನ್ ಹಾಳೆಯ ಅಧಿಕೃತತೆಗೆ ಸಂಬಂಧಿಸಿದಂತೆ ಮಾತ ನಾಡಿದ ಅವರು ಭಾರತೀಯ ವೈದ್ಯ ಕೀಯ ಸಂಶೋಧನಾಸಂಸ್ಥೆ (ಐಸಿಎಂಆರ್)ಗೆ ಈ ಹೊಸ ಸಂಶೋಧನೆ ಕುರಿತು ಮಾಹಿತಿ ನೀಡಲಾಗಿತ್ತು. ಅದರ ಸಲಹೆಯಂತೆ ತಮಿಳುನಾಡಿನ ಕೊಯಿಮತ್ತೂರಿನಲ್ಲಿರುವ ಕೊಲ್ಕತ್ತಾ ಮೂಲಕ ಟೆಕ್ನಿಕಲ್ ಯ್ಯಂಡ್ಇನ್ನೊವೇಶನ್  ಟೆಕ್ಸ್‌ಟೈಲ್ಸ್ ಸೊಲ್ಯೂಶನ್ ಕೇಂದ್ರ (ಟಿಐಟಿಎಸ್‌ಸಿ)ದಲ್ಲಿ ಈ
ಸಂಶೋಧನೆಯ ಕುರಿತು ಸ್ಯಾಂಪಲ್ ಪರೀಕ್ಷೆ ಮಾಡಿಸ ಲಾಗಿದೆ.

ಈ ಕೇಂದ್ರವು ಆಂಟಿ ವೈರಲ್ ಚಟುವಟಿಕೆಗಳ ಕುರಿತ ರಾಷ್ಟ್ರೀಯ ಪರಿಕ್ಷೆ ಮತ್ತು ಕೆಲಿಬ ರೇಶನ್ ಪ್ರಯೋಗಾಲಯದ ಮಂಡಳಿಯಾಗಿದ್ದು (ಎನ್.ಎ. ಬಿ.ಎಲ್) ಸಾರ್ಸ್ (ಎಸ್.ಎ. ಆರ್.ಎಸ್.) ಕೊವಿಡ್-೨ ಚಟುವಟಿಕೆಗಳ ಹಿನ್ನೆಲೆಯಲ್ಲಿ ಸದರಿ ಸಂಶೋಧನೆಗೆ ಪ್ರಮಾಣ ಪತ್ರ ಲಭಿಸಿದೆ ಎಂದು ಅವರುಹೇಳಿದ್ದಾರೆ.

 ಈ ವರದಿಯ ಪ್ರಕಾರ ಈ ಬಾಲಾಜಿ ಪಾಲಿ ಪ್ಯಾಕ್ ಸಂಸ್ಥೆ ಯವರು ಸಿದ್ಧಪಡಿಸಿದ ಪಾಲಿ ಮರ್
ಇಥೆಲಿನ್ ಹಾಳೆಯ ಮೇಲೆ ಅಂಟಿಕೊಳ್ಳುವ ಕೊರೊ ನಾ ವೈರಾಣುಗಳು ಅತ್ಯಂತ ಕಡಿಮೆ ಸಮಯದಲ್ಲಿ ಅಂದರೆ ಕೇವಲ ೨ ಗಂಟೆ ೫೪ ನಿಮಿಷ ಗಳಲ್ಲಿ ಸಂಪೂರ್ಣ ಸತ್ತು ಹೋಗುತ್ತವೆ. ಈ ಸಾಯುವಿಕೆಯ ಪ್ರಮಾಣ ಶೇ.೯೯.೯೯ ರಷ್ಟಿರುತ್ತದೆ ಎಂದು ಆ ವರದಿ ತಿಳಿಸಿದೆ ಎಂದು ಅವರು ಮಾಹಿತಿ ನೀಡಿದರು.

 ಈ ಸಂಶೋಧನೆಗೆ ಟಿ.ಐ.ಟಿ.ಎಸ್.ಸಿ. ಪ್ರಯೋ ಗಾಲಯವು ಐ.ಎಸ್.ಒ.೨೧೭೦೨ ಅಡಿಯಲ್ಲಿ
ಪ್ರಯೋಗಕ್ಕೆ ಒ ಪಡಿಸಿದ ಪರಿಣಾಮೇ ಈ ಅಧಿಕೃತ ಪ್ರಮಾಣಪತ್ರ ಲಭಿಸಲು ಕಾರಣ ಎಂದು ಅವರುಸ್ಪಷ್ಟಪಡಿಸಿದ್ದಾರೆ.

ಈ ಆಂಟಿ ವೈರಸ್ ಹಾಳೆಯ ಕಾರ್ಯ ವಿಧಾನದ ಬಗ್ಗೆ ಮಾಹಿತಿ ನೀಡಿದ ಅವರು, ಈ ಹಾಳೆಯ
ಮೇಲ್ಮೈ ಮೇಲೆ ಯೇ ಕೊವಿಡ್ ವಿರೋಧಿ ಅಂಶ ಇರುತ್ತಿದ್ದು ಇದು ಕೊವಿಡ್ ಸೋಂಕು ಹರಡುವಿ
ಕೆಯನ್ನು ತಡೆಯುತ್ತದೆ ಅಥವಾ ನಿಯಂತ್ರಿಸುತ್ತದೆ ಎಂದು ವಿವರಿಸಿದರು.

ಅತ್ಯಂತ ಕ್ಲಿಷ್ಟಕರ ಸನ್ನಿವೇಶದಲ್ಲಿ ಜೀವದ ಹಂಗು ತೊರೆದು ಕೊವಿಡ್-೧೯ ವಿರುದ್ಧ ಹೋರಾ
ಡುತ್ತಿರುವ ಯೋಧರಿಗೆ  ಇದು ಶ್ರೀ ರಕ್ಷೆಯಂತಿದ್ದು, ಆರೋಗ್ಯ ಕಾರ್ಯಕರ್ತರಿಗೆ ಸ್ವಚ್ಛ
ಪರಿಸರ ದಲ್ಲಿ ಸುರಕ್ಷಿತವಾಗಿ, ಅತಿ ಕಡಿಮೆ ಅಪಾಯ ಹೊಂದುವುದಲ್ಲದೆ  ಸೋಂಕು
ತಪ್ಪಿಸಿಕೊಳ್ಳಲು ಸಹಕಾರಿಯಾಗಲಿದೆ ಎಂದು ವಿವರಿಸಿದರು.

 ತಾವು ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ ಯಾವುದೇ ವಸ್ತುಗಳ ಮೇಲ್ಮೈ ಮೇಲೆ
ಕೊವಿಡ್-೧೯ ವೈರಾಣುಗಳು ಇದ್ದರೆ ಅವುಗಳನ್ನು ಕೇವಲ ಹತ್ತೇ ನಿಮಿಷಗಳಲ್ಲಿ ಸಾಯಿಸುವ
ತಂತ್ರಜ್ಞಾನವನ್ನು ಅಭಿವೃದ್ಧಿಪ ಡಿಸಿರು ವುದಾಗಿ ತಿಳಿಸಿದ ಅವರು, ಸರ್ಕಾರ,ಸಂಬಂಧಿಸಿದವರು ಸಹಕಾರ ನೀಡಿದರೆ ಅದನ್ನೂ ಮಾರುಕಟ್ಟೆಗೆ ಬಿಡುಗಡೆ ಮಾಡಲು ಸಿದ್ಧವಿರುವುದಾಗಿ ವಿವರಿಸಿದರು.

ನೂತನವಾಗಿ ಸಿದ್ಧಪಡಿಸಿದ ಈ ಪಾಲಿಮರ್ ಹಾಳೆಗಳನ್ನು ಕೊವಿಡ್ ಆಸ್ಪತ್ರೆಗಳಲ್ಲಿ,
ಧಾರ್ಮಿಕ ಸ್ಥಳಗಳಲ್ಲಿ, ಸಾರ್ವ ಜನಿಕ ಸ್ಥಳಗಳಲ್ಲಿ, ಟ್ರಾನ್ಸ್ ಪೋರ್ಟ್ ಸಂಸ್ಥೆಗಳಲ್ಲಿ, ನೆಲ ಹಾಸುವಾಗಿ, ಪಿಪಿಇ ಕಿಟ್‌ಗಳಿಗೆ ಮತ್ತು ಗೋಡೆ ಮುಚ್ಚುವ
ಹಾಳೆಗಳನ್ನಾಗಿ, ಸೀಟ್ ಕವರು ಗಳನ್ನಾಗಿ ಉಪಯೋಗಿ ಸಬಹುದು ಎಂದು  ಮಾಹಿತಿ ನೀಡಿದರು.

 ಉಪಯೋಗಿಸಿದ ಈ ಪಾಲಿಮರ್ ಹಾಳೆಗಳನ್ನು ವಿಲೇವಾರಿ ಮಾಡುವುದೂ ಸುಲಭವಾಗಿದ್ದು ಯಾವುದೇತೊಂದರೆ, ಅಪಾಯವಿಲ್ಲದೆ ಸೋಂಕು ತಗುಲದಂತೆ ವಿಲೇವಾರಿ ಮಾಡಬಹುದು ಎಂದೂ ಅವರುತಿಳಿಸಿದರು.

ಕೋವಿಡ್-೧೯ ನಿಯಂತ್ರ ಣಕ್ಕೆ ತಾವು ಅಭಿವೃದ್ಧಿಪಡಿಸಿದ ತಂತ್ರಜ್ಞಾನವು ಅತ್ಯಂತ ಕೈಗೆಟುಕುವ ಬೆಲೆಗೆ ಲಭ್ಯವಿದ್ದು ಸರ್ಕಾರ-ವೈದ್ಯಕೀಯ ಕ್ಷೇತ್ರವು ಅದರ ಸದುಪಯೋಗಕ್ಕೆಮುಂದಾಗಿ ತಮ್ಮಂತಹ ಯುವ ಪ್ರತಿಭೆಗಳಿಗೆ ಪ್ರೋತ್ಸಾಹ ನೀಡ ಬೇಕು ಎಂದು ಅವರು ವಿನಂತಿಸಿದ್ದಾರೆ.
Leave a Reply

Your email address will not be published. Required fields are marked *