ಪ್ರಧಾನಮಂತ್ರಿಗಳ ಟ್ವಿಟರ್ ಖಾತೆ ಹ್ಯಾಕ್- ಹ್ಯಾಕರ್ ಗಳು ಬೇಡಿಕೆ ಇಟ್ಟಿದ್ದು ಏನು ಗೊತ್ತಾ?

468

ನವದೆಹಲಿ: ಹ್ಯಾಕರ್ ಗಳ ಕಾಟ ರಾಷ್ಟ್ರದ ಪ್ರಧಾನಿಯನ್ನೂ ಬಿಟ್ಟಿಲ್ಲ. ಪ್ರಧಾನಿ ನರೇಂದ್ರ ಮೋದಿ ಅವರ ವೈಯಕ್ತಿಕ ವೆಬ್​ಸೈಟ್​​ಗೆ ಲಿಂಕ್​ ಆಗಿರುವ ಟ್ವಿಟರ್​ ಅಕೌಂಟ್​ ಹ್ಯಾಕ್​ ಮಾಡಲಾಗಿದೆ. ಕೋವಿಡ್​​-19 ಪರಿಹಾರ ನಿಧಿಗೆ ಬಿಟ್​ ಕಾಯಿನ್​ ರೂಪದಲ್ಲಿ ದೇಣಿಗೆ ನೀಡಿ ಎಂದು ಹ್ಯಾಕರ್​ ಟ್ಟೀಟ್ ಮಾಡುವ ಮೂಲಕ ಮನವಿ ಮಾಡಿದ್ದಾನೆ.

ವೈಯಕ್ತಿಕ ವೆಬ್​ಸೈಟ್​​ಗೆ ಲಿಂಕ್​ ಆಗಿರುವ ಟ್ವಿಟರ್​ ಅಕೌಂಟ್​​ನಲ್ಲಿ ಕ್ರಿಪ್ಟೊ ಕರೆನ್ಸಿಗೆ ಸಂಬಂಧಿಸಿದ ಟ್ವೀಟ್​​ಗಳನ್ನು ಹ್ಯಾಕರ್​​ಗಳು ಪೋಸ್ಟ್​ ಮಾಡಿದ್ದಾರೆ.

ಕೋವಿಡ್​-19ಗೆ ಸಂಬಂಧಿಸಿದಂತೆ ರಚಿಸಲಾದ ಪ್ರಧಾನಮಂತ್ರಿಯವರ ಪರಿಹಾರ ನಿಧಿಗೆ ದೇಣಿಗೆ ನೀಡಿ ಎಂದು ನಿಮ್ಮಲ್ಲಿ ಮನವಿ ಮಾಡಿಕೊಳ್ಳುತ್ತಿದ್ದೇನೆ ಎಂದು ಹ್ಯಾಕರ್​ ಟ್ವಿಟರ್​ ಅಕೌಂಟ್​​ನಲ್ಲಿ ಮೆಸೇಜ್​ ಹಾಕಿದ್ದಾರೆ.

ಇನ್ನು ಈ ಖಾತೆಯನ್ನು ಜಾನ್​ ವಿಕ್​​ ಎಂಬಾತ ಹ್ಯಾಕ್​ ಮಾಡಿರುವ ಕುರಿತು ಮಾಹಿತಿ ದೊರೆತಿದೆ.

ಇನ್ನು ನಾವು ಪೇಟಿಮ್​​ ಮಾಲ್​ ಹ್ಯಾಕ್​ ಮಾಡಿಲ್ಲ ಎಂದು ಹ್ಯಾಕರ್​ ಇನ್ನೊಂದು ಟ್ವೀಟ್​​ನಲ್ಲಿ ಬರೆದಿದ್ದಾನೆ. ಈಗ ಈ ಎಲ್ಲಾ ಟ್ವೀಟ್​​ಗಳನ್ನೂ ಡಿಲೀಟ್​ ಮಾಡಲಾಗಿದ್ದು

ಪ್ರಧಾನಿ ನರೇಂದ್ರ ಮೋದಿಯವರ ಪರ್ಸನಲ್​​ ವೆಬ್​ಸೈಟ್​​ಗೆ ಲಿಂಕ್​ ಆಗಿರುವ​​ ಟ್ವಿಟರ್​ ಅಕೌಂಟ್ ​​@narendramodiಗೆ 61 ಮಿಲಿಯನ್​​ ಜನರು ಫಾಲೋವರ್ಸ್​ ಇದ್ದು ವಿಶ್ವದ ಅತೀ ಹೆಚ್ಚು ಫಾಲೂವರ್ಸ್ ಗಳು ಇರುವ ಖಾತೆಗಳಲ್ಲಿ ಪ್ರಧಾನಿಯವರ ಖಾತೆಯೂ ಒಂದಾಗಿದೆ.




Leave a Reply

Your email address will not be published. Required fields are marked *