ಧೋನಿಯೇ ನನ್ನ ಫೇವರಿಟ್‌, ಸಚಿನ್ ನಂಗೆ ಮಾಡೆಲ್‌, ದ್ರಾವಿಡೇ ಐಡಲ್‌!- ಪ್ರಿಯಮ್ ಗರ್ಗ್ ಹೇಳಿದ್ದೇನು ಗೊತ್ತಾ?

335

ಕನ್ನಡವಾಣಿ ನ್ಯೂಸ್ ಡೆಸ್ಕ್ :- ಧೋನಿಯೇ ನನ್ನ ಫೇವರೆಟ್ ,ಸಚಿನ್ ನನ್ನ ಮಾಡಲ್ ,ದ್ರಾವಿಡ್ ಐಡಲ್ ಹೀಗೆಂದು ಹೇಳಿದವರು ಟೀಮ್‌ ಇಂಡಿಯಾದ ಅಂಡರ್‌-19 ನಾಯಕ ಪ್ರಿಯಮ್‌ ಗರ್ಗ್‌.

ಹೌದು Helo ಲೈವ್‌ನಲ್ಲಿ ಮಾತನಾಡಿದ ಪ್ರಿಯಮ್‌ ಗರ್ಗ್‌, ಹಾಲಿ ಕ್ರಿಕೆಟರ್‌ಗಳಲ್ಲಿ ಕ್ಯಾಪ್ಟನ್‌ ಕೂಲ್‌ ಎಂಎಸ್‌ ಧೋನಿ ನನ್ನ ಫೇವರಿಟ್‌.

ಧೋನಿಯ ಶಾಂತಚಿತ್ತತೆ ಹಾಗೂ ಪ್ರತಿ ಸಂದರ್ಭವನ್ನು ಕೂಡಲೇ ಅರ್ಥೈಸಿ ನಿಭಾಯಿಸುವ ವೈಖರಿ ಇಷ್ಟ ಎಂದು ಗರ್ಗ್‌ ಹೇಳಿದ್ದಾರೆ.

ಆದರೆ ನನ್ನ ಕ್ರಿಕೆಟಿಗೆ ಸಚಿನ್‌ ಕಾರಣ. ಕ್ರಿಕೆಟ್‌ ಕಲಿಕೆಗೆ ಸಚಿನ್‌ ಮಾದರಿ, ಅವರ ಬ್ಯಾಟಿಂಗ್‌ನ್ನು ಟಿವಿಯಲ್ಲಿ ನೋಡಿ ಪ್ರ್ಯಾಕ್ಟೀಸ್‌ ಮಾಡುತ್ತಿದ್ದೆ.

ಇದಾದ ಬಳಿಕ ರಾಹುಲ್‌ ದ್ರಾವಿಡ್‌ ಜೊತೆಯಲ್ಲಿನ ತರಬೇತಿ ನನ್ನನ್ನು ಬದಲಿಸಿತು. ದ್ರಾವಿಡ್‌ ನನಗೆ ಆದರ್ಶಪ್ರಾಯರು ಅನಿಸಲು ಆರಂಭಿಸಿತು.

ನನ್ನ ಕ್ರಿಕೆಟ್‌ ಹಾಗೂ ವೈಯಕ್ತಿಕ ಜೀವನಕ್ಕೆ ಶಿಸ್ತು ತಂದುಕೊಟ್ಟ ವ್ಯಕ್ತಿ ದ್ರಾವಿಡ್‌ ಎಂದು ಗರ್ಗ್‌ ಹೇಳಿದ್ದಾರೆ.

ದ್ರಾವಿಡ್‌ ರೀತಿಯ ಆಟಗಾರರು ಡ್ರೆಸ್ಸಿಂಗ್‌ ರೂಮಿನಲ್ಲಿದ್ದಾಗ ಸಾಕಷ್ಟು ಬದಲಾವಣೆ ಆಗುತ್ತದೆ. ದ್ರಾವಿಡ್‌ ಅವರಲ್ಲಿ ಇಂದಿಗೂ ಅದೇ ಹಳೆಯ ನಿಷ್ಠೆ, ಕ್ರಿಕೆಟ್‌ ಪ್ರೀತಿ ಹಾಗೂ ಶಿಸ್ತಿದೆ. ಎಂದಿಗೂ ಅವರು ರಾಜಿಯಾಗುವುದಿಲ್ಲ. ಇದು ಯುವ ಕ್ರಿಕೆಟಿಗರಿಗೆ ಅದ್ಭುತ ಪಾಠ ಎಂದು ಗರ್ಗ್‌ ಅಭಿಪ್ರಾಯಪಟ್ಟಿದ್ದಾರೆ.

ನಾಲ್ಕನೆ ಕ್ರಮಾಂಕ ನನಗಿಷ್ಟ!

ಅಂಡರ್‌-19 ತಂಡದಲ್ಲಿ ನಾನು 4ನೇ ಕ್ರಮಾಂಕದಲ್ಲಿ ಆಡುತ್ತಿದ್ದೆ. ಅದು ನನ್ನಿಷ್ಟದ ಕ್ರಮಾಂಕ. ಆದರೆ ತಂಡದ ಅಗತ್ಯಕ್ಕೆ ತಕ್ಕಂತೆ ಯಾವುದೇ ಕ್ರಮಾಂಕದಲ್ಲಿ ಆಡಲೂ ಸಿದ್ಧ. ತಂಡದ ಅಗತ್ಯಕ್ಕೆ ತಕ್ಕಂತೆ ನಾವು ಬದಲಾಗಬೇಕು. ಇಲ್ಲದಿದ್ದರೆ ಉತ್ತಮ ಕ್ರಿಕೆಟರ್‌ ಆಗಲು ಸಾಧ್ಯವಿಲ್ಲ ಎನ್ನುವುದು ಪ್ರಿಯಮ್‌ ವಾದವಾಗಿದೆ.

ಲೈವ್‌ನಲ್ಲಿ ಗರ್ಗ್‌ ಹೇಳಿದ್ದಿಷ್ಟು;

ಕುಟುಂಬದ ಜತೆಗಿದ್ದಾಗ ಡಯಟ್‌ ಬಗ್ಗೆ ಗಮನ ನೀಡಬೇಕು. ಹಾಗಿದ್ದಾಗ ಮಾತ್ರ ನಾವು ಫಿಟ್‌ ಆಗಿರಲು ಸಾಧ್ಯ.

ಜಿಮ್‌ ಇಲ್ಲದ ಹಿನ್ನೆಲೆಯಲ್ಲಿ ಮನೆಯಲ್ಲಿಯೇ ಸಣ್ಣಪುಟ್ಟ ವರ್ಕೌಟ್‌, ಬ್ಯಾಡ್ಮಿಂಟನ್‌ ಆಟ, ಯೋಗ, ಧ್ಯಾನ, ನಮ್ಮ ಕೋಚ್‌ ಹೇಳಿದ ಟಾಸ್ಕ್‌ ಜತೆಗೆ ಮಧ್ಯಾಹ್ನ ಒಂದು ತಾಸು ನಿದ್ದೆ ನನ್ನ ದಿನಚರಿಯಾಗಿದೆ. ಸಮಯ ಸಿಕ್ಕಾಗ ಸ್ನೇಹಿತರ ಜತೆಗೆ ಚಾಟಿಂಗ್‌ ಹಾಗೂ ಸಾಮಾಜಿಕ ಜಾಲತಾಣಗಳಲ್ಲಿ ಕಣ್ಣು ಹಾಯಿಸುತ್ತೇನೆ.

ಬೌಲರ್‌ ಯಾರೆಂದು ನೋಡಿಕೊಂಡು ಬ್ಯಾಟ್‌ ಮಾಡಲಾಗುವುದಿಲ್ಲ. ಯಾರೇ ಬೌಲರ್‌ ಇದ್ದರೂ ನನ್ನ ನೈಜ ಆಟ ಆಡುವುದು ನನ್ನ ಕ್ರಿಕೆಟ್‌ ನಿಯಮವಾಗಿದೆ.

ಒಂದು ತಂಡದ ಪರ ಆಡುವಾಗ ನಾನು ಯಾವುದೇ ದಾಖಲೆ ಮುರಿಯಬೇಕು ಎಂದು ಆಡುವುದಿಲ್ಲ. ತಂಡದ ಗೆಲುವಿಗೆ ನನ್ನನ್ನು ಸಮರ್ಪಿಸಿಕೊಳ್ಳುತ್ತೇನೆ. ತಂಡಕ್ಕೆ ನನ್ನ ಬೆಸ್ಟ್‌ ನೀಡುವುದೇ ನನ್ನ ಗುರಿಯಾಗಿರುತ್ತದೆ.

ಭಾರತದ ವೇಗದ ಬೌಲರ್‌ ಜಸ್ಪ್ರೀತ್‌ ಬುಮ್ರಾ ಬೌಲಿಂಗ್‌ನ್ನು ಎದುರಿಸಿ, ಕ್ರಿಕೆಟ್‌ ಪಾಠ ಕಲಿಯಲು ಉತ್ಸುಕನಾಗಿದ್ದೇನೆ.

ಬುಮ್ರಾ ತಮ್ಮ ಸಾಮರ್ಥ್ಯದ ಮೇಲೆ ನಂಬಿಕೆ ಇಟ್ಟು ಡೆತ್‌ ಓವರ್‌ ಮಾಡುವುದನ್ನು ನೋಡಲು ಇಷ್ಟ. ಸ್ಲಾಗ್‌ ಓವರ್‌ಗಳಲ್ಲಿ ಅವರ ಬೌಲಿಂಗ್‌ ನೋಡಲೇ ಚೆಂದ.

ಭಾರತದ ಯುವ ಆಟಗಾರರ ಪೈಕಿ ನನಗೆ ಶುಬ್ಮನ್‌ ಗಿಲ್‌ ಭವಿಷ್ಯದಲ್ಲಿ ಸಾಕಷ್ಟು ಮಿಂಚಬಲ್ಲ ಆಟಗಾರ ಎನಿಸುತ್ತದೆ ಎಂದ ಅವರು

ಫಟಾಫಟ್‌ ಪ್ರಶ್ನೆಗೆ ಪ್ರಿಯಮ್‌ ಉತ್ತರಿಸಿದ್ದು ಹೀಗೆ :-

ಫೇವರಿಟ್‌ ಬಾಲಿವುಡ್‌ ಹೀರೋ: ಅಕ್ಷಯ್‌ ಕುಮಾರ್‌
ಕೊಹ್ಲಿ ಅಥವಾ ಧೋನಿಯಲ್ಲಿ ನಿಮ್ಮ ಆಯ್ಕೆ: ಧೋನಿ
ಚೈನೀಸ್‌, ಇಟಾಲಿಯನ್‌ ಅಥವಾ ಭಾರತೀಯ ಖಾದ್ಯಗಳಲ್ಲಿ ಯಾವುದಿಷ್ಟ: ಮನೆಯೂಟ
ಹಣ ಅಥವಾ ಗೌರವದಲ್ಲಿ ನಿಮ್ಮ ಆಯ್ಕೆ: ಹಣ ಎಂದು ಉತ್ತರಿಸಿದರು.
ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ