BREAKING NEWS
Search

ಉತ್ತರ ಕನ್ನಡ ಜಿಲ್ಲೆಯಲ್ಲಿ ನಿಷೇಧಾಜ್ಞೆ ಮುಂದುವರಿಕೆ! ನಾಳೆಯಿಂದ ಏನಿರುತ್ತೆ ಏನು ಇರೋದಿಲ್ಲ ಇಲ್ಲಿದೆ ಮಾಹಿತಿ.

1761

ಕಾರವಾರ:- ರಾಜ್ಯ ಸರ್ಕಾರ ಲಾಕ್ ಡೌನ್ ಸಡಿಲಿಕೆ ಮಾಡುವ ಪ್ರಸ್ತಾಪ ಮಾಡಿದ್ದು ಜನರಿಗೆ ಅನುಕೂಲ ದೃಷ್ಟಿಯಿಂದ ನಾಳೆಯಿಂದ ಒಂದಿಷ್ಟು ಸಡಿಲಿಕೆ ಆಗುವ ನಿರೀಕ್ಷೆಯನ್ನು ಕರ್ನಾಟಕದ ಜನ ನಿರೀಕ್ಷಿಸುತಿದ್ದಾರೆ.

ಆದರೇ ಉತ್ತರ ಕನ್ನಡ ಜಿಲ್ಲೆಯ ಜನರ ಪಾಲಿಗೆ ಈ ನಿರೀಕ್ಷೆ ಗೆ ಅಲ್ಪ ಹಿನ್ನಡೆಯಾಗಿದೆ.

ಉತ್ತರ ಕನ್ನಡ ಜಿಲ್ಲೆಯಲ್ಲಿ ನಿಷೇಧಾಜ್ಞೆ ಮುಂದುವರಿಕೆ ಮಾಡುವುದಾಗಿ ಜಿಲ್ಲಾಧಿಕಾರಿ ಡಾ.ಹರೀಶ್ ಕುಮಾರ್ ಮಾಹಿತಿ ನೀಡಿದ್ದು
ಕರೋನಾ ಸೊಂಕು ಹೆಚ್ವಾದ ಕಾರಣ ನಿಷೇಧಾಜ್ಞೆಯನ್ನು ಮೇ .19 ರವರೆಗೂ ಮುಂದುವರಿಕೆ ಮಾಡುವುದಾಗಿ ತಿಳಿಸಿದ್ದಾರೆ.
ಮೇ20 ರ ನಂತರ ಸರ್ಕಾರದ ಆದೇಶದ ನಂತರ ಅಲ್ಪ ಬದಲಾವಣೆ ಮಾಡುವ ಸಾಧ್ಯತೆಗಳಿವೆ.
ಹಾಗೆಯೇ ಭಟ್ಕಳ ದ ಕಂಟೈನ್ಮೆಂಟ್ ಜೋನ್ ನಲ್ಲಿ ಯಾವುದೇ ಬದಲಾವಣೆ ಇಲ್ಲ ಎಂದು ಮಾಹಿತಿ ನೀಡಿದ್ದಾರೆ.

ಜಿಲ್ಲೆಯಲ್ಲಿ ಬಸ್ ಸಂಚಾರದಲ್ಲಿ ಸಡಿಲಿಕೆಯು ಮೇ.20 ರ ನಂತರ ಕೈಗೊಳ್ಳುವ ಸಾಧ್ಯತೆಗಳಿದ್ದು ರಾಜ್ಯಾಧ್ಯಾಂತ ಸಂಚಾರ ಹಾಗೂ ಜಿಲ್ಲೆಯಲ್ಲಿ ಸಂಚಾರ ಕುರಿತು 20 ರ ನಂತರ ತೀರ್ಮಾನ ಕೈಗೊಳ್ಳಲಾಗುತ್ತದೆ.

ಹೀಗಾಗಿ ಮುಂದಿನ ಆದೇಶದ ವರೆಗೆ ಬಸ್ ಸಂಚಾರ ಸಹ ಬಂದ್ ಇರಲಿದೆ.

ಈಗಿರುವ ಸ್ಥಿತಿ ಮುಂದುವರಿಕೆ!

ಸದ್ಯ ಲಾಕ್ ಡೌನ್ 3.0 ದ ನಿಬಂದನೆಗಳಂತೆ ಅಂಗಡಿ ಮುಂಗಟ್ಟುಗಳು ,ಸಂಚಾರ ವ್ಯವಸ್ಥೆ ಗಳು ಈಗಿರುವ ಸ್ಥಿಯಲ್ಲಿಯೇ ಮುಂದುವರಿಕೆ ಮಾಡಲಿದ್ದಾರೆ.
ಮೇ.20 ರ ನಂತರ ಅಲ್ಪ ಬದಲಾವಣೆ ಮಾಡಲಿದ್ದು ಅಂಗಡಿಗಳ ತೆರೆಯುವಿಕೆ ಸಮಯ ಬದಲಾವಣೆಯಾಗಲಿದೆ.ಜೊತೆಗೆ ಒಂದಿಷ್ಟು ಬದಲಾವಣೆಯನ್ನು ಸಹ ಜಿಲ್ಲಾಡಳಿತ ಮಾಡಲಿದ್ದು ಈಗಿರುವ ಸ್ಥಿತಿ ಮುಂದುವರೆಸುವ ಅಥವಾ ಸಮಯ ಬದಲಾವಣೆ ಮಾಡುವ ಕುರಿತು ಮೇ .20 ರಂದು ತೀರ್ಮಾನ ಕೈಗೊಳ್ಳಲಿದ್ದಾರೆ.
ಹೀಗಾಗಿ ಇಂದಿನ ಯತಾಸ್ಥಿತಿ ಮೇ.20 ರ ವರೆಗೆ ಮುಂದುವರೆಯಲಿದೆ.
ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ