BREAKING NEWS
Search

ಪಂಚಮಸಾಲಿ ಹೋರಾಟಕ್ಕೆ ಹಿಂದುಳಿದ ವರ್ಗಗಳಿಂದ ವಿರೋಧ!22 ಕ್ಕೆ ಭಟ್ಕಳದಲ್ಲಿ ಬೃಹತ್ ಪ್ರತಿಭಟನೆ.

826

ಭಟ್ಕಳ :- ಹಿಂದುಳಿದ ವರ್ಗ ಸೇರ್ಪಡಿಸದಂತೆ ಭಟಕ್ಕಳದಲ್ಲಿ 22 ರಂದು ಬೃಹತ್ ಪ್ರತಿಭಟನೆ-ಬ್ರಹ್ಮಾನಂದ ಸರಸ್ವತಿ ಸ್ವಾಮೀಜಿhttps://kannadavani.news/daily-horoscope-kannada-astrology-kannada-up-to-date-news/.

ಕಾರವಾರ :- ಹಿಂದುಳಿದ ವರ್ಗ 2A ನಲ್ಲಿ ಬರುವ ಜನಾಂಗಕ್ಕೆ ಈಗಿರುವ ಸ್ಥಿತಿಯನ್ನೇ ಮುಂದುವರೆಸಬೇಕು ಇಲ್ಲವೇ ಮೀಸಲಾತಿ ಪ್ರಮಾಣ ಹೆಚ್ಚಿಸಬೇಕು ಹಾಗೂ ಯಾವುದೇ ಕಾರಣಕ್ಕೆ ಲಿಂಗಾಯಿತ ಪಂಚಮಸಾಲಿ ಜನಾಂಗವನ್ನು ಹಿಂದುಳಿದ ವರ್ಗದ 2A ಗೆ ಸೇರಿಸಬಾರದೆಂದು ಶ್ರೀರಾಮಕ್ಷೇತ್ರ ಪೀಠ ಧರ್ಮಸ್ಥಳ ಬ್ರಹ್ಮಾನಂದ ಸರಸ್ವತಿ ಸ್ವಾಮೀಜಿ ಆಗ್ರಹಿಸಿದ್ದಾರೆ.

ಇಂದು ಭಟ್ಕಳದ ನಿಶ್ಚಲಮಕ್ಕಿ ವೆಂಕಟರಮಣ ದೇವಸ್ಥಾನದ ಸಭಾ ಭವನದಲ್ಲಿ ಭಟ್ಕಳ ತಾಲೂಕು ಹಿಂದುಳಿದ ವರ್ಗಗಳ ಹಿತರಕ್ಷಣಾ ವೇದಿಕೆ ಸಭೆ ನಡೆಸಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು ಪಂಚಮಸಾಲಿ ಜನಾಂಗವನ್ನು ಹಿಂದುಳಿದ ಜನಾಂಗದ 2A ಗೆ ಸೇರ್ಪಡಿಸುವುದನ್ನು ಖಂಡಿಸಿ ಇದೇ ತಿಂಗಳು 22 ರಂದು ಹಿಂದುಳಿದ ವರ್ಗಕ್ಕೆ ಸೇರಿದ ಎಲ್ಲಾ ಜನಾಂಗದ ಮುಖಂಡರು ಹಾಗೂ ಶಾಸಕ ನೇತ್ರತ್ವದಲ್ಲಿ ಬೃಹತ್ ಪ್ರತಿಭಟನೆ ನಡೆಸಲಾಗುವುದು ಎಂದರು.

ಹೆಚ್ಚು ಸಂಖ್ಯೆಯಲ್ಲಿ ಇರುವ ಪಂಚಮಸಾಲಿಗಳನ್ನು ಹಿಂದುಳಿದ 2A ಗೆ ಸೇರ್ಪಡೆ ಮಾಡಿದರೆ ಚಿಕ್ಕ ಜನಾಂಗಗಳಿಗೆ ಶಿಕ್ಷಣ,ಉದ್ಯೋಗದಲ್ಲಿ ಅನ್ಯಾಯ ಮಾಡಿದಂತೆ ಆಗುತ್ತದೆ. ಇದು ಸರಿಯಲ್ಲ.

ಈ ಜನಾಂಗಗಳಿಗೆ ಅನ್ಯಾಯವಾಗಬಾರದು ಅವರ ಹೋರಾಟಕ್ಕೆ ಮಾರ್ಗದರ್ಶಕನಾಗಿ ನಾನು ಇರುತ್ತೇನೆ ಎಂದರು.

ಇದೇ ಸಂದರ್ಭದಲ್ಲಿ ನಾಯಕ ಜನಾಂಗದ ಮುಂಖಂಡ ಕೃಷ್ಣ ನಾಯ್ಕ ಮಾತನಾಡಿ ಪಂಚಮಸಾಲಿಗಳನ್ನು 2A ಗೆ ಸೇರಿಸುವುದಾದರೆ ನಮ್ಮ ಜನಾಂಗವನ್ನು ಎಸ್.ಸಿ ಎಸ್.ಟಿ ಗೆ ಸೇರಿಸಬೇಕು ಎಂದು ಆಗ್ರಹಿಸಿದ್ದಾರೆ.

ಸಭೆಯಲ್ಲಿನಾಮದಾರಿ,ಗಾಣಿಗ,ಮಹಾಲೆ,ವೈಶ್ಯ,ದೈವಜ್ಞ,ದೇವಾಡಿಗ ,ವಿಶ್ವಕರ್ಮ ಜನಾಂಗ ಪ್ರಮುಖ ಮುಖಂಡರು ಭಾಗವಹಿಸಿದ್ದರು.




ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

error: Content is protected !!