add

Big breaking| ಪಿಯುಸಿ ಪರೀಕ್ಷೆ ವೇಳಪಟ್ಟಿ ಪ್ರಕಟ-ಶಾಲೆಗಳ ಹೆಚ್ವುವರಿ ಫೀಸ್ ಗೆ ಬ್ರೇಕ್:ಶಿಕ್ಷಣ ಸಚಿವ.

1078

ಬೆಂಗಳೂರು:- ಪಿಯುಸಿ ಪರೀಕ್ಷೆ ವೇಳಾಪಟ್ಟಿಯನ್ನು ಇಂದು ಪ್ರಕಟಿಸಲಾಗಿದ್ದು ಮೇ 24 ರಿಂದ ಜೂನ್ 10 ವರೆಗೆ ದ್ವೀತಿಯ ಪಿಯುಸಿ‌ ಪರೀಕ್ಷೆ ನಡೆಯಲಿದೆ ಎಂದು ಶಿಕ್ಷಣ ಸಚಿವ ಸುರೇಶ್ ಕುಮಾರ್ ಹೇಳಿದ್ದಾರೆ.

ಮಾಧ್ಯಮ ಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಅವರು ಮೇ 24- ಭೌತಶಾಸ್ತ್ರ, ಇತಿಹಾಸ ಮೇ 25- ಮೈನಾರಿಟಿ ವಿಷಯಗಳು
26- ಭೂಗರ್ಭ ಶಾಸ್ತ್ರ, ಲಾಜಿಕ್, ಬೇಸಿಕ್ ಗಣಿತ, ಹೋಂ ಸೈನ್ಸ್,27- ಆಪ್ಶನಲ್ ಕನ್ನಡ, ಅಕೌಂಟೆನ್ಸಿ, ಗಣಿತ, 28- ಉರ್ದು, ಸಂಸ್ಕೃತ,29- ರಾಜ್ಯಶಾಸ್ತ್ರ,31- ರಸಾಯನಶಾಸ್ತ್ರ, ಬಿಸನೆಸ್ ಸ್ಟಡೀಸ್, ಎಜುಕೇಶನ್, ಜೂನ್ 1- ಕರ್ನಾಟಕ ಮ್ಯೂಸಿಕ್,ಹಿಂದುಸ್ಥಾನಿ ಮ್ಯೂಸಿಕ್ ಪರೀಕ್ಷೆ ನಡೆಯಲಿದೆ ಎಂದರು.

ಇನ್ನು ಜನವರಿ 1 ರಿಂದ ಶಾಲಾ ಕಾಲೇಜುಗಳು ಪ್ರಾರಂಭ ಆಗಿದ್ದು ಹಿಂದೆ ಇದ್ದ ಆರ್ಥಿಕ ಪರಿಸ್ಥಿತಿ ಈಗ ಇಲ್ಲ, ಕೊರೊನಾದಿಂದ ಆರ್ಥಿಕವಾಗಿ ಜನ ಸಂಕಷ್ಟಕ್ಕೆ ಒಳಗಾಗಿದ್ದಾರೆ. ರಾಜ್ಯದ ಎಲ್ಲಾ ಶಾಲೆಗಳು ಕಳೆದ ಬಾರಿ ತೆಗೆದುಕೊಂಡಿದ್ದು ಶಾಲೆಗಳಲ್ಲಿ ಬೋಧನಾ ಶುಲ್ಕದಲ್ಲಿ 70% ಮಾತ್ರ ಪಡೆಯಬೇಕು.ಬೋಧನಾ ಶುಲ್ಕ ಮಾತ್ರ ಪಡೆಯಬೇಕು ಅಭಿವೃದ್ಧಿ ಶುಲ್ಕ ಪಡೆಯಬಾರದು
ಯಾವುದೇ ಶಿಕ್ಷಣ ಸಂಸ್ಥೆ ಇದಕ್ಕಿಂತ ಕಡಿಮೆ ಮಾಡುತ್ತೆ ಅಂದ್ರೆ ಸಂತೋಷ. ಕಳೆದ ವರ್ಷದ ಬೋಧನಾ ಶುಲ್ಕದಲ್ಲಿ 70% ಮಾತ್ರ ಪಡೆಯಬೇಕು ಈಗ ಕಟ್ಟಬೇಕಾದ ಶುಲ್ಕ 2-3 ಕಂತಿನಲ್ಲಿ ಕಟ್ಟಲು ಅವಕಾಶ ಪೋಷಕರಿಗೆ ಸಂಸ್ಥೆಗಳು ಕೊಡಬೇಕು.

ಯಾವುದೇ ತಕರಾರು ಬಂದರೆ ಜಿಲ್ಲಾ ಹಂತದಲ್ಲಿ ಸಮಿತಿ ರಚನೆ ಮಾಡಿ ಕ್ರಮಕ್ಕೆ ನಿರ್ಧಾರ ಮಾಡಲಾಗಿದೆ. ಫೀಸ್ ಜಾಸ್ತಿ ಕಟ್ಟಿದ್ರೆ ಹೆಚ್ಚುವರಿ ಫೀಸನ್ನ ಮುಂದಿನ ವರ್ಷದ ಫೀಸ್ ಗೆ ಸರಿದೂಗಿಸಿಕೊಳ್ಳಬೇಕು. ಕೇವಲ ಬೋಧನಾ ಶುಲ್ಕ ಮಾತ್ರ ಪಡೆಯಬೇಕು. ಹಾಗೆಯೇ ರಾಜ್ಯದ ಎಲ್ಲಾ ಶಾಲೆಗಳಿಗೂ ನಿಯಮ ಅನ್ವಯಿಸುತ್ತದೆ.

ಇನ್ನು ಸಿಬಿಎಸ್ಸಿ, ಐಸಿಎಸ್ಸಿ, ಸ್ಟೇಟ್ ಸಿಲಬಸ್ ಎಲ್ಲರಿಗೂ ಅನ್ವಯವಾಗಲಿದೆ.

ಹೆಚ್ಚುವರಿ ಶುಲ್ಕಕ್ಕೆ ಬ್ರೇಕ್!

ಕಂಪ್ಯೂಟರ್, ಸ್ವಿಮ್ಮಿಂಗ್ ಫುಲ್ ಸೇರಿದಂತೆ ಹೆಚ್ಚಿನ ಚಟುವಟಿಕೆ ಶುಲ್ಕವೂ ಪಡೆಯೋ ಹಾಗಿಲ್ಲ. ಐಚ್ಚಕ ಶುಲ್ಕ,ಆನ್ ಲೈನ್ ಕ್ಲಾಸ್ ಗೂ ಹೆಚ್ಚುವರಿ ಫೀಸ್ ಪಡೆಯೋ ಆಗಿಲ್ಲ, 30% ಶುಲ್ಕ‌ಕಡಿತ ಮಾಡಲಾಗಿದೆ.

ಕಳೆದ ವರ್ಷದ ಬೋಧನಾ ಶುಲ್ಕದಲ್ಲಿ 70% ಮಾತ್ರ ಪಡೆಯಬೇಕು ಈಗ ಕಟ್ಟಬೇಕಾದ ಶುಲ್ಕ 2-3 ಕಂತಿನಲ್ಲಿ ಕಟ್ಟಲು ಅವಕಾಶ ಪೋಷಕರಿಗೆ ಕೊಡಬೇಕು. ಯಾವುದೇ ತಕರಾರು ಬಂದರೆ ಜಿಲ್ಲಾ ಹಂತದಲ್ಲಿ ಸಮಿತಿ ಕ್ರಮ ಜರುಗಿಸಲಿದೆ.
ಫೀಸ್ ಜಾಸ್ತಿ ಕಟ್ಟಿದ್ರೆ ಹೆಚ್ಚುವರಿ ಫೀಸನ್ನ ಮುಂದಿನ ವರ್ಷದ ಫೀಸ್ ಗೆ ಸರಿದೂಗಿಸಿಕೊಳ್ಳಬೇಕು,ಕೇವಲ ಬೋಧನಾ ಶುಲ್ಕ ಮಾತ್ರ ಪಡೆಯಬೇಕ, ರಾಜ್ಯದ ಎಲ್ಲಾ ಶಾಲೆಗಳಿಗೂ ನಿಯಮ ಅನ್ವಯ ಆಗಲಿದೆ.
ಕಂಪ್ಯೂಟರ್, ಸ್ವಿಮ್ಮಿಂಗ್ ಫುಲ್ ಸೇರಿದಂತೆ ಹೆಚ್ಚಿನ ಚಟುವಟಿಕೆ ಶುಲ್ಕವೂ ಪಡೆಯೋ ಹಾಗಿಲ್ಲ.ಆನ್ ಲೈನ್ ಕ್ಲಾಸ್ ಗೂ ಹೆಚ್ಚುವರಿ ಫೀಸ್ ,ಆನ್ ಲೈನ್ ಕ್ಲಾಸ್ ಗೂ ಹೆಚ್ವಿನ ಹಣ ಪೇಯುವಂತಿಲ್ಲ. ಇದರ ಜೊತೆಗೆ ಸ್ಕೂಲ್ ವಾನ್ ಶುಲ್ಕ ಪಡೆಯೋ ಆಗಿಲ್ಲ ಎಂದು ಶಿಕ್ಷಣ ಸಚಿವರು ತಿಳಿಸಿದ್ದಾರೆ.




ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ