ರಮಣ್ ಗೆ ವಿಚ್ಚೇದನ ನೀಡಿದ ಶ್ವೇತ ಪ್ರಸಾದ್ ! ರಾಧಾಳ ಸ್ಥಾನ ತುಂಬಲಿದ್ದಾಳೆ ಎರಡನೇ ಹೆಂಡತಿ ಕಾವ್ಯ ಗೌಡ!

415

ಬೆಂಗಳೂರು: ಖಾಸಗಿ ವಾಹಿನಿಯಲ್ಲಿ ಸಿಕ್ಕಾಪಟ್ಟೆ ಸದ್ದು ಮಾಡುತ್ತಿರುವ ಗೃಹಿಣಿಯರ ಅಚ್ಚುಮೆಚ್ಚಿನ ‘ರಾಧಾ ರಮಣ’ ಧಾರಾವಾಹಿಗೆ ಕಿರುತೆರೆ ನಟಿ ಕಾವ್ಯ ಗೌಡ ಅವರು ರಾಧಾ ಮಿಸ್ ಆಗಿ ಎಂಟ್ರಿ ಕೊಡುತ್ತಿದ್ದಾರೆ.

ರಾಧಾ ಪಾತ್ರಧಾರಿಯ ನಟಿ ಶ್ವೇತಾ ಪ್ರಸಾದ್ ಅಗ್ರಿಮೆಂಟ್ ಮುಗಿದಿದ್ದು ಸಿನಿಮಾದಲ್ಲಿ ಬಿಸಿಯಾಗಿರುವ ಕಾರಣ ಧಾರಾವಾಹಿಯಿಂದ ಹೊರ ನಡೆದಿದ್ದಾರೆ.

ಈಗ ಅವರ ಪಾತ್ರವನ್ನು ಜ್ಯೂನಿಯರ್ ರಾಧಿಕಾ ಪಂಡಿತ್ ಎಂದೇ ಬಣ್ಣಿಸುವ ಕಿರುತೆರೆ ನಟಿ ಕಾವ್ಯ ಗೌಡ ನಿರ್ವಹಿಸಲಿದ್ದಾರೆ.

ಈಗಾಗಲೇ ಕಾವ್ಯ ಗೌಡ ಕೆಲವು ಕಂತುಗಳ ರೆಕಾರ್ಡಿಂಗ್ ನಲ್ಲಿ ಬಿಸಿಯಾಗಿದ್ದಾರೆ .

ಮುಂದಿನ ಸಂಚಿಕೆಗಳಲ್ಲಿ ಧಾರಾವಾಹಿಯಲ್ಲಿ ಶ್ವೇತಾ ಅವರ ಬದಲು ಕಾವ್ಯ ಪ್ರೇಕ್ಷಕರ ಮುಂದೆ ಬರಲಿದ್ದು ಪ್ರೇಕ್ಷಕರು ಬದಲಾಗಬೇಕಿದೆ.

ಕಾವ್ಯ ಗೌಡ ಖಾಸಗಿ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ ‘ಪ್ಯಾಟೆ ಮಂದಿ ಕಾಡಿಗೆ ಬಂದ್ರು’ ರಿಯಾಲಿಟಿ ಶೋ ಮೂಲಕ ಕಿರುತೆರೆಗೆ ಎಂಟ್ರಿ ಕೊಟ್ಟಿದ್ದರು. ನಂತರ ತನ್ನ ಮೈಮಾಟ ,ಸುಂದತ ರೂಪದಿಂದ ಕಿರುತೆರೆ ನಿರ್ದೇಶಕರ ಕಣ್ಣು ಕುಕ್ಕಿದ್ದು ‘ಶುಭ ವಿವಾಹ’, ‘ಮೀರಾ ಮಾಧವ’ ಹಾಗೂ ‘ಗಾಂಧಾರಿ’ ಧಾರಾವಾಹಿಯಲ್ಲಿ ನಟಿಸಿದ್ದರು.

ಬಡ್ತಿ ಪಡೆದ ಶ್ವೇತ !

ಧಾರಾವಾಹಿಗಾಗಿ ನಟಿ ಶ್ವೇತಾ ಅವರು ಒಂದು ವರ್ಷಗಳ ಕಾಲ ಒಪ್ಪಂದಕ್ಕೆ ಸಹಿ ಹಾಕಿದ್ದರು. ಆದರೆ ಆ ಒಪ್ಪಂದ ಮುಗಿದು ವರ್ಷವೇ ಆಗಿತ್ತು. ಹೀಗಾಗಿ ಅವರು ಸೀರಿಯಲ್‍ನಿಂದ ಹೊರಬಂದಿದ್ದಾರೆ. ಶ್ವೇತಾ ಧಾರಾವಾಹಿ ಮಾತ್ರವಲ್ಲದೇ ಕೆಲವು ಸಿನಿಮಾಗಳಲ್ಲೂ ಅಭಿನಯಿಸಿದ್ದಾರೆ.
ಹೀಗಾಗಿ ಸಿನಿಮಾದಲ್ಲಿ ಹೆಚ್ಚು ಅವಕಾಶಕ್ಕಾಗಿ ಅಗ್ರಿಮೆಂಟ್ ಮುಗಿದಿದ್ದರೂ ನಡಿಸುತಿದ್ದ ಶ್ವೇತ ಈಗ ಮನಸ್ಸು ಬದಲಿಸಿದ್ದಾರೆ.

ಇನ್ನು ರಾಧಾ ರಮಣ ಧಾರವಾಹಿಯಲ್ಲಿ ರಮಣ ಪಾತ್ರಧಾರಿಗೆ ಪತ್ನಿಯಾಗಿ ಶಾಂತ ಸ್ವಭಾವದ ಗೃಹಿಣಿಯಾಗಿ ನಟಿಸಿದ್ದರು. ಇದರಿಂದ ಅಪಾರ ಪ್ರೇಕ್ಷಕರು ಇವರನ್ನು ಮೆಚ್ಚಿಕೊಂಡಿದ್ದರು. ಸದ್ಯಕ್ಕೆ ನಟಿ ಶ್ವೇತಾ ಪ್ರಸಾದ್ ಅವರು ಸಿನಿಮಾದಲ್ಲಿ ಬಿಸಿಯಾಗಿದ್ದು ಸೋಮಾರಿ ಪೆಟ್ಟಿಗೆಯಿಂದ ಹಿರಿ ಪರೆದೆಗೆ ಹಾರಿದ್ದಾರೆ.
ಚಿತ್ರ ವರದಿ -ಶುಭ ಕೆರೆಕೈ .ಸಾಗರ.
Leave a Reply

Your email address will not be published. Required fields are marked *

error: Content is protected !!