ಕಿರು ತೆರೆಯಲ್ಲಿ ವಿಶ್ವದಾಖಲೆ ಸೃಷ್ಟಿಸಿದ ರಾಮಾನಂದ ಸಾಗರ್ ನಿರ್ಮಾಣದ ರಾಮಾಯಣ ಧಾರವಾಹಿ!

508

ಬೆಂಗಳೂರು :- 1987-88ರ ಅವಧಿಯಲ್ಲಿ ‘ರಾಮಾಯಣ’ ಧಾರವಾಹಿ ದೂರದರ್ಶನದಲ್ಲಿ ಪ್ರಸಾರಗೊಂಡು ಹೊಸ ಅಲೆ ಸೃಷ್ಟಿಸಿತ್ತು. ಈ ಧಾರಾವಾಹಿ ಲಾಕ್ ಡೌನ್ ಸಂದರ್ಭದಲ್ಲಿ ಈಗ ಮರು ಪ್ರಸಾರಗೊಂಡಿದ್ದು ವಿಶ್ವ ದಾಖಲೆಯನ್ನೇ ಬರೆಯುವ ಮೂಲಕ ಹೊಸ ದಾಖಲೆ ಸೃಷ್ಟಿಸಿದೆ.

ದೂರದರ್ಶನದಲ್ಲಿ ಏಪ್ರಿಲ್​ 16ರಂದು ಪ್ರಸಾರವಾದ ‘ರಾಮಾಯಣ’ ಎಪಿಸೋಡ್​ ಬರೋಬ್ಬರಿ 7.7 ಕೋಟಿ ಬಾರಿ ವೀಕ್ಷಣೆ ಕಂಡಿದೆ. ಈ ಮೂಲಕ ಒಂದೇ ದಿನದಲ್ಲಿ ಅತಿ ಹೆಚ್ಚು ವೀಕ್ಷಣೆ ಕಂಡ ಧಾರಾವಾಹಿ ಎನ್ನುವ ಖ್ಯಾತಿಗೆ ರಾಮಾಯಣ ಪಾತ್ರವಾಗಿದೆ.

ಲಾಕ್​ಡೌನ್​ ಆದೇಶ ಬಂದ ನಂತರ ‘ರಾಮಾಯಣ’ ಮರು ಪ್ರಸಾರಗೊಳ್ಳಬೇಕು ಎಂದು ಸಾರ್ವಜನಿಕರು ಒತ್ತಾಯಿಸಿದ್ದರು. ಅಲ್ಲದೆ, ಸಾಮಾಜಿಕ ಜಾಲತಾಣದಲ್ಲಿ ಈ ಬಗ್ಗೆ ಕ್ಯಾಂಪೇನ್​ಗಳು ಕೂಡ ನಡೆದವು. ಈ ಹಿನ್ನೆಲೆಯಲ್ಲಿ ಡಿಡಿ ೯ ಮಾರ್ಚ್​ 28ರಂದು ರಾಮಾಯಣ ಮರು ಪ್ರಸಾರ ಆರಂಭಿಸಿತ್ತು.

ವಾಲ್ಮೀಕಿ ‘ರಾಮಾಯಣ’ ಹಾಗೂ ತುಳಸಿದಾಸ್​ ಅವರ ‘ರಾಮಚರಿತ ಮಾನಸ’ವನ್ನು ಆಧರಿಸಿ ರಮಾನಂದ್ ಸಾಗರ್​ 78 ಎಪಿಸೋಡ್​ಗಳನ್ನು ಮಾಡಿದ್ದರು. 1987, ಜನವರಿ 25ರಿಂದ 1988 ಜುಲೈ 31ರವರೆಗೆ ರಾಮಾಯಾಣ ಪ್ರಸಾರಗೊಂಡಿತ್ತು.

ಅಂದಿನ ಕಾಲದಲ್ಲಿ ರಾಮಾಯಣ ನೋಡುವುದು ಒಂದು ಅದ್ಭುತವಾಗಿತ್ತು. ಎಷ್ಟೋ ಜನರು ಧಾರಾವಾಹಿಯಲ್ಲಿ ನಿಜವಾದ ಶ್ರೀರಾಮನನ್ನೇ ನೋಡುತ್ತಿದ್ದೆನೇನೋ ಎನ್ನುವ ಭಾವನೆಯಲ್ಲಿ ಕಾಣುತ್ತಿದ್ದರು. ಅತಿ ಹೆಚ್ಚು ವೀಕ್ಷಣೆ ಕಂಡ ಪೌರಾಣಿಕ ಧಾರಾವಾಹಿ ಎನ್ನುವ ಖ್ಯಾತಿಯೂ ರಾಮಾಯಣಕ್ಕೆ ಇದೆ.

1987-88ರ ಅವಧಿಯಲ್ಲಿ ‘ರಾಮಾಯಣ’ ಧಾರವಾಹಿ ದೂರದರ್ಶನದಲ್ಲಿ ಪ್ರಸಾರಗೊಂಡು ಹೊಸ ಅಲೆ ಸೃಷ್ಟಿಸಿತ್ತು. ಈ ಧಾರಾವಾಹಿ 2020 ರಲ್ಲೂ ಮರು ಪ್ರಸಾರಗೊಂಡಿದ್ದು ವಿಶ್ವ ದಾಖಲೆಯನ್ನೇ ಬರೆದಿದ್ದು ಇದರ ಮಹತ್ವ ಎಷ್ಟಿದೆ ಹಾಗೂ ಕಥೆ ಯಲ್ಲಿ ಸಾರ ವಿದ್ದರೆ ಪ್ರಸ್ತುತ ಎನ್ನುವುದನ್ನು ತೋರಿಸಿ ಕೊಟ್ಟಿದೆ.
Leave a Reply

Your email address will not be published. Required fields are marked *