ಕಾರವಾರ:ಆರ್. ಎಪ್.ಓ ಕಚೇರಿ ಮೇಲೆ ಕಲ್ಲು ತುರಾಟ!

483

ಜೊಯಿಡಾ: ಕಾಳಿ ಹುಲಿ ಸಂರಕ್ಷಿತ ಪ್ರದೇಶದ ಕುಂಬಾರವಾಡಾ ವಲಯದ ವಲಯ ಅರಣ್ಯಾಧಿಕಾರಿ ನಾಲ್ಕು ಜನರಿಗೆ ತಳಿಸಿದ್ದಾರೆ ಎಂದು ಆರೋಪಿಸಿ ಗ್ರಾಮ ಪಂಚಾಯತ ಅಧ್ಯಕ್ಷ ಪುರುಷೊತ್ತಮ ಕಾಮತ ನೇತೃತ್ವದಲ್ಲಿ ನೂರಾರು ಜನರು ವಲಯ ಅರಣ್ಯಾದಿಕಾರಿ ಕಚೇರಿಗೆ ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸಿ ಕಚೇರಿಗೆ ಕಲ್ಲು ತೂರಾಟ ನಡೆಸಿದ ಘಟನೆ ಮಂಗಳವಾರ ರಾತ್ರಿ ನಡೆದಿದ್ದು ತಡವಾಗಿ ಬೆಳಕಿಗೆ ಬಂದಿದೆ.

ಧಾರವಾಡ ಮೂಲದ ಐವರು ಉಳವಿ ಪ್ರವಾಸಕ್ಕೆ ಬಂದವರು ಕುಂಬಾರವಾಡಾ ವಲಯದ ಕಿರವತ್ತಿ ಬಳಿ ಹಳ್ಳದಲ್ಲಿ ಊಟ ಮಾಡಲು ಕುಳಿತಿದ್ದವರನ್ನು ಇಲ್ಲಿನ ಅರ್.ಎಪ್.ಓ ಪ್ರಭುರಾಜ ಪಾಟೀಲ ತಳಿಸಿದ್ದಾರೆ. ಮತ್ತು ಇವರನ್ನು ಕಚೇರಿಗೆ ಕರೆತಂದು ಇವರ ಮೇಲೆ ಪ್ರಕರಣ ದಾಕಖಲಿಸಿದ್ದಾರೆ ಎಂದು ಆರೋಪಿಸಿದ ಜನಪ್ರತಿನಿದಿಗಳು ಮತ್ತು ಜನರು ವಲಯ ಅರಣ್ಯಾಧಿಕಾರಿಗಳು ಕ್ಷಮೆ ಕೇಳಬೇಕು ಎಂದು ಪಟ್ಟು ಹಿಡಿದಿದ್ದರು.

ಸ್ಥಳಕ್ಕೆ ಬಂದ ಜೊಯಿಡಾ ಸಿ.ಪಿ.ಐ ರಮೇಶ ಹೂಗಾರ ಮತ್ತು ಪಿ.ಎಸ್.ಐ ಕಾಂಬಳೆ ಆಕ್ರೋಶಿತ ಜನರನ್ನು ಸಮಾಧಾನ ಪಡಿಸಿದರು.

ಈ ಸಂದರ್ಬದಲ್ಲಿ ಉಳವಿ ಗ್ರಾ.ಪಂ ಅಧ್ಯಕ್ಷ ಮಂಜುನಾಥ ಮುಖಾಶಿ,ಗ್ರಾ.ಪಂ ಸದಸ್ಯರಾದ ದತ್ತಾ ನಾಯ್ಕ,ರತ್ನಾಕರ ದೇಸಾಯಿ, ದಿಗಂಬರ ದೇಸಾಯಿ,ತಾ.ಪಂ ಸದಸ್ಯ ಸುರೇಶ ಬಂಗಾರಿ ಸೇರಿದಂತೆ ನೂರಕ್ಕೂ ಹೆಚ್ಚು ಜನ ಈ ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.

ಅರಣ್ಯದಲ್ಲಿ ಮದ್ಯ ಸೇವಿಸಿದ್ದರು!

ಧಾರವಾಡ ಮೂಲದವರು ಎಂದು ಹೇಳಲಾದ ನಾಲ್ಕು ಜನ ಪ್ರವಾಸಿಗರು ಕಿರುವತ್ತಿಯ ಹಳ್ಳದ ಬಳಿ ಮದ್ಯ ಸೇವಿಸುಲು ತಯಾರಿ ನಡೆಸಿದ್ದು ಊಟ ಮಾಡುತಿದ್ದರು ಎಂದು ಹೇಳಲಾಗಿದ್ದು ಈ ವೇಳೆ ಅಲ್ಲಿಗೆ ಬಂದ ಆರ್ .ಎಫ್ .ಓ ಪ್ರಭುರಾಜ್ ಇದಕ್ಕೆ ಆಕ್ಷೇಪ ವೆಕ್ತಪಡಿಸಿದ್ದರು ,ಈ ವೇಳೆ ಮಾತಿಗೆ ಮಾತು ಬೆಳೆದಿತ್ತು ಎನ್ನಲಾಗಿದ್ದು ನಂತರ ನಾಲ್ಕು ಜನರನ್ನು ಎಳೆದೊಯ್ದಿದ್ದರು ಎಂದು ಹೇಳಲಾಗಿದೆ. ಇದಲ್ಲದೇ ಈ ನಾಲ್ಕು ಜನರಲ್ಲಿ ಉಳವಿ ದೇವಸ್ಥಾನದ ಟ್ರಸ್ಟಿಗಳ ಸಮೀಪ ಸಂಬಂಧಿಯೂ ಇದ್ದು ಇದು ರಾಜಕೀಯ ತಿರುವು ಪಡೆಯಿತು ಎನ್ನಲಾಗಿದೆ.
Leave a Reply

Your email address will not be published. Required fields are marked *

error: Content is protected !!