ಜೂನ್​​ 14ರಿಂದ ಅಯ್ಯಪ್ಪನ ದರ್ಶನ ನಿರ್ಭಂಧ!

373

ಕನ್ನಡವಾಣಿ ಡೆಸ್ಕ್ : ಕೊರೊನಾ ವೈರಸ್ ಹರಡುವ ಭೀತಿ ಹಿನ್ನಲೆ ಶಬರಿಮಲೈ ಅಯ್ಯಪ್ಪ ಸ್ವಾಮಿ ದೇವಸ್ಥಾನವನ್ನು ಸದ್ಯ ತೆರೆಯದಿರಲು ನಿರ್ಧರಿಸಿದೆ. ಇಂದು ನಡೆದ ಮಹತ್ವದ ಸಭೆ ಬಳಿಕ ಈ ನಿರ್ಧಾರವನ್ನು ಕೇರಳದ ದೇವಸ್ವಂ ಖಾತೆ ಸಚಿವ ಕಡಕಂಪಲ್ಲಿ ಸುರೇಂದ್ರನ್ ಪ್ರಕಟಿಸಿದ್ದಾರೆ.

ಜೂನ್ 14ರಿಂದ ಮಾಸಿಕ ಪೂಜೆ ಆರಂಭವಾಗಬೇಕಿದ್ದು ದೇವಸ್ಥಾನ ತೆರೆಯುವ ಸಂಬಂಧ ತಿರುವಾಂಕೂರು ದೇವಸ್ವಂ ಮಂಡಳಿ ಸಭೆ ನಡೆಸಿತು. ಈ ಸಭೆಯಲ್ಲಿ ಕೇರಳದ ದೇವಸ್ವಂ ಖಾತೆ ಸಚಿವ ಕಡಕಂಪಲ್ಲಿ ಸುರೇಂದ್ರನ್ ಸೇರಿದಂತೆ ಎಲ್ಲ ಅರ್ಚಕರು ಭಾಗಿಯಾಗಿದ್ದರು.

ಭಾರತ ಅನ್ಲಾಕ್‌ ಬಳಿಕ ಧಾರ್ಮಿಕ ಕ್ಷೇತ್ರಗಳನ್ನು ತೆರೆಯಲು ಷರತ್ತುಗಳೊಂದಿಗೆ ಅವಕಾಶ ನೀಡಿತ್ತು. ಈ ಹಿನ್ನಲೆ ಅಯ್ಯಪ್ಪ ಸ್ವಾಮಿ ದೇವಸ್ಥಾನ ತೆರೆಯುವ ಸಂಬಂಧ ಚರ್ಚೆ ನಡೆಸಲಾಯಿತು. ಜೂನ್ 14ರಿಂದ ಶಬರಿಮಲೆಯಲ್ಲಿ ಮಾಸಿಕ ಪೂಜೆ ನಡೆಸಬೇಕಿತ್ತು. ಈ ಪೂಜೆ ನಡೆದರೆ ಕೇವಲ ಕೇರಳ ಮಾತ್ರವಲ್ಲದೆ ದೇಶದ ಹಲವು ಭಾಗಗಳಿಂದ ಭಕ್ತಾಧಿಗಳು ಆಗಮಿಸುತ್ತಾರೆ. ಶಬರಿಮಲೈ ದೇವಸ್ಥಾನದಲ್ಲಿ ಮಾರ್ಗಸೂಚಿಗಳ ಪಾಲನೆ ಕಷ್ಟ ಇದರಿಂದ ಸೋಂಕು ಹರಡುವ ಸಾಧ್ಯತೆ ಇದೆ ಎಂದು ಆತಂಕ ವ್ಯಕ್ತಪಡಿಸಲಾಯಿತು.

ಈ ಹಿನ್ನಲೆಯಲ್ಲಿ ಶಬರಿಮಲೈ ದೇವಸ್ಥಾನ ತೆರೆಯದಿರಲು ಮತ್ತು ತಿಂಗಳ ಪೂಜೆಗೆ ಭಕ್ತಾದಿಗಳಿಗೆ ಅವಕಾಶ ನೀಡದರಿಲು ಸಭೆಯಲ್ಲಿ ನಿರ್ಧರಿಸಲಾಯಿತು. ಇದರ ಜೊತೆಗೆ ದೇವಸ್ಥಾನ ಉತ್ಸವ ರದ್ದು ಮಾಡಲು ಕೂಡಾ ಒಮ್ಮತದ ತಿರ್ಮಾನ ತೆಗೆದುಕೊಳ್ಳಲಾಗಿದೆ.




ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ