ಸಾಗರದ ಹಳೆ ಇಕ್ಕೇರಿಯಲ್ಲಿ ಡಬ್ಬಲ್ ಮರ್ಡರ್! ತಾಯಿ,ಮಗುವಿನ ಮುಂದೆಯೇ ನಡೆಯಿತು ಕೃತ್ಯ.

396

ಶಿವಮೊಗ್ಗ :- ಮನೆಯಲ್ಲಿ ಮಲಗಿದ್ದ ವೇಳೆ ತಾಯಿ – ಮಗನನ್ನು ಚಾಕುವಿನಿಂದ ಇರಿದು ಭೀಕರವಾಗಿ ಕೊಲೆ ಮಾಡಿರುವ ಘಟನೆ ಜಿಲ್ಲೆಯ ಸಾಗರ ತಾಲೂಕಿನ ಹಳೆಇಕ್ಕೇರಿಯ ಕಸೆಕೊಡ್ಲುವಿನಲ್ಲಿ ನಡೆದಿದೆ.

ಬಂಗಾರಮ್ಮ (60), ಪ್ರವೀಣ್ (35) ಕೊಲೆಯಾದ ದುರ್ದೈವಿಗಳು.

ಕೂಲಿ ಕೆಲಸ ಮಾಡಿಕೊಂಡು ಜೀವನ ಸಾಗಿಸುತ್ತಿದ್ದ ಪ್ರವೀಣ್ ಹಳೆ ಇಕ್ಕೇರಿ ಗ್ರಾಮದ ಮನೆಯಲ್ಲಿ ತನ್ನ ತಾಯಿ, ಹೆಂಡತಿ ಹಾಗೂ 10 ತಿಂಗಳ ಮಗುವಿನೊಂದಿಗೆ ವಾಸವಾಗಿದ್ದ.

ಇಂದು ಮುಂಜಾನೆ ನಸುಕಿನ ಜಾವ ತಾಯಿ ಮಗನನ್ನು ಕೊಲೆ ಮಾಡಿರುವ ಶಂಕೆ ವ್ಯಕ್ತವಾಗಿದ್ದು ದುಷ್ಕರ್ಮಿಗಳು ಮೃತ ಪ್ರವೀಣ್ ನ ಪತ್ನಿ ಹಾಗೂ ಆತನ 10 ತಿಂಗಳ ಮಗುವನ್ನು ಮಾತ್ರ ಬಿಟ್ಟು ತೆರಳಿದ್ದಾರೆ.

ಕೊಲೆಗಾರರು ಘಟನೆ ಬಳಿಕ‌ ಮನೆಯಲ್ಲಿ ಯಾವುದೇ ವಸ್ತುವನ್ನು ಸಹ ಮುಟ್ಟದೇ ಮರಳಿರುವುದು ಹಲವು ಅನುಮಾನಕ್ಕೆ ಎಡಮಾಡಿದೆ.

ಘಟನೆ ಸ್ಥಳಕ್ಕೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ.ಎಂ.ಶಾಂತರಾಜ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಘಟನೆ ಕುರಿತಂತೆ ಸಾಗರ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ