BREAKING NEWS
Search

ಸಾಗರ ಮಾರಿಕಾಂಬೆ ಜಾತ್ರೆಗೆ ಕ್ಷಣಗಣನೆ-ಅಂಕೆ ಹಾಕುವ ಶಾಸ್ತ್ರ ಸಂಪನ್ನ.

242

ಶಿವಮೊಗ್ಗ :- ಸಾಗರದ ಪ್ರಸಿದ್ಧ ಮಾರಿಕಾಂಬ ದೇವಿಯ ಜಾತ್ರೆ ಮಹೋತ್ಸವದ ಪೂರ್ವದಲ್ಲಿ ಅಂಕೆ ಹಾಕುವ ಶಾಸ್ತ್ರಕ್ಕೆ ನಿನ್ನೆ ರಾತ್ರಿ ಚಾಲನೆ ನೀಡುವ ಮೂಲಕ ಶ್ರೀ ಮಾರಿಕಾಂಬಾ ಜಾತ್ರೆಯ ಧಾರ್ಮಿಕ ಕಾರ್ಯಗಳಿಗೆ ಚಾಲನೆ ನೀಡಲಾಯಿತು.

ಈ ಧಾರ್ಮಿಕ ಪದ್ಧತಿಯು ಜಾತ್ರೆಯ ಅಧಿಕೃತ ಆಮಂತ್ರಣವಿದ್ದಂತೆ. ಆಸಾದಿ ಪಂಗಡದವರು ಜಾತ್ರೆಯನ್ನು ಯಶಸ್ವಿಯಾಗಿ ನಡೆಸಿಕೊಡುತ್ತೇವೆ ಎಂದು ಮಾರಿಕಾಂಬೆಯ ಮುಂದೆ ಮಂಡಲ ಬರೆದು ಕಂಕಣ ಕಟ್ಟಿಕೊಂಡು ಪ್ರಮಾಣ ಮಾಡುವ ಪದ್ಧತಿ. (ಆಸಾದಿ ಎಂದರೆ ಧಾರ್ಮಿಕ ವೃತ್ತಿಗಾಯಕ ಪರಂಪರೆಗೆ ಸೇರಿದ ಮಾರಮ್ಮನ ಆರಾಧಕರು. ಮಾರಮ್ಮನಿಗೆ ಸಂಬಂಧಿಸಿದ ಹಾಡುಗಳನ್ನೇ ಹೆಚ್ಚಾಗಿ ಹಾಡುವವರು. ಆಕೆ ಮೆರೆದ ಪವಾಡ ಹಾಗೂ ಮಹಿಮೆಗಳನ್ನು ಭಕ್ತ ಸಮೂಹಕ್ಕೆ ತಿಳಿಸುತ್ತ ಅವರಲ್ಲಿ ಭಯ ಭಕ್ತಿ, ಧರ್ಮ ಶ್ರದ್ಧೆಗಳನ್ನು ಮೂಡಿಸುವುದೇ ಇವರ ಕಾಯಕ.)

ನಿನ್ನೆ ರಾತ್ರಿ 8ಕ್ಕೆ ಪೋತರಾಜನಿಂದ ಚಾಟಿಸೇವೆ ಯಾದ ಬಳಿಕ ಅಂಕೆಹಾಕಿ ಮಾರಿ ಕೋಣವನ್ನು ಆಸಾದಿ ಪಂಗಡದವರಿಗೆ ಹಸ್ತಾಂತರಿಸಲಾಗುತ್ತದೆ. ನಂತರ ಆ ಕೋಣವನ್ನು ಊರಿನಲ್ಲಿ ಬೀದಿಗಳಲ್ಲಿ ಸುತ್ತಾಡಿಸಿ ಎಣ್ಣೆ ಹಚ್ಚುವ ಕಾರ್ಯಕ್ರಮವಿರುತ್ತದೆ.

ಹಿಂದಿನ ಕಾಲದಲ್ಲಿ ಮಾರಿಜಾತ್ರೆ ಶೂನ್ಯ ಮಾಸದಲ್ಲಿ ಜರಗುತ್ತಿತ್ತು. ಆಗ ಸಾಂಕ್ರಾಮಿಕ ರೋಗಗಳು ಅಧಿಕವಾಗಿದ್ದವು ಆದ ಕಾರಣದಿಂದಲೇ ಜನರು ಪರ ಊರಿಗೆ ಹೋಗಿ ಅಲ್ಲಿರುವ ರೋಗದ ಸೋಂಕನ್ನು ತರಬಾರದು ಎಂಬ ವೈಜ್ಞಾನಿಕ ಕಾರಣದಿಂದಲೇ ಅಂಕೆಹಾಕಿ ಬೇರೆ ಊರಿಗೆ ಹೋಗುವುದನ್ನು ನಿರ್ಬಂಧಿಸುತ್ತಿದ್ದರು.
Leave a Reply

Your email address will not be published. Required fields are marked *