BREAKING NEWS
Search

ಸಾಗರ-ಆದಾಯ ತೆರಿಗೆ ಅಧಿಕಾರಿಗಳೆಂದು ವಂಚಿಸಿದ ಮೂವರ ಬಂಧನ.

1350

ಶಿವಮೊಗ್ಗ :-ಶಿವಮೊಗ್ಗ ಜಿಲ್ಲೆಯ ಸಾಗರ ತಾಲೂಕಿನ ಜನ್ನೆಹಕ್ಲುವಿನಲ್ಲಿ ಆದಾಯ ತೆರಿಗೆ ಅಧಿಕಾರಿಗಳೆಂದು ಹೇಳಿಕೊಂಡು ವಿಶ್ವನಾಥ್ ಎಂಬುವವರಿಗೆ ವಂಚಿಸಿ ದರೋಡೆ ಮಾಡುದ ಪ್ರಕರಣಕ್ಕೆ ಸಂಬಂಧಿಸಿದಂತೆ ಮೂವರು ಆರೋಪಿಗಳನ್ನು ಸಾಗರ ಗ್ರಾಮಾಂತರ ಪೋಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಖಚಿತ ಮಾಹಿತಿ ಮೇರೆಗೆ ದಾಳಿ ನಡೆಸಿದ ಪೋಲೀಸರು ಇಂದು ಬೆಳಗ್ಗೆ ಆನಂದಪುರ ಸಮೀಪ ದಾಸಕೊಪ್ಪ ವೃತ್ತದಲ್ಲಿ ಬಂಧಿಸಿದ್ದಾರೆ.

ಸಾಗರ ಡಿವೈಎಸ್ಪಿ ವಿನಾಯಕ್ ಎನ್ ಶೆಟಗೇರಿ ಹಾಗೂ ಗ್ರಾಮಾಂತರ ಸರ್ಕಲ್ ಇನ್ಸ್ ಪೆಕ್ಟರ್ ಸುನೀಲ್ ಕುಮಾರ್ ಅವರ ಮಾರ್ಗದರ್ಶನದಲ್ಲಿ ಪ್ರಕರಣದ ತನಿಖಾಧಿಕಾರಿ
ಪಿ.ಎಸ್.ಐ ಭರತ್ ಕುಮಾರ್ ಹಾಗೂ ಅಪರಾಧ ವಿಭಾಗದ ಸಿಬ್ಬಂದಿಗಳಾದ ಶೇಖ್ ಫೈರೋಜ್,ಅಶೋಕ್,ರವಿ ನೇತೃತ್ವದ ತಂಡ ಆರೋಪಿಗಳಾದ ಭದ್ರಾವತಿ ಮೂಲದ ಚಂದನ್,2 ನವೀನ,ಲತೇಶ್ ಅವರನ್ನು ಬಂಧಿಸಿ ಅವರಿಂದ 1.50 ಲಕ್ಷ ರೂ.ನಗದು ಹಾಗೂ ಕೃತ್ಯಕ್ಕೆ ಬಳಸಿದ ಇಟಿಯಸ್ ಕಾರನ್ನು ವಶಕ್ಕೆ ಪಡೆದಿದ್ದಾರೆ.

ಜೂ.12 ರಂದು ಜನ್ನೆಹಕ್ಲುವಿನ ವಿಶ್ವನಾಥ್ ಎಂಬುವವರ ಮನೆಗೆ ನಾಲ್ವರು ಅಪರಿಚಿತರು ಬಂದು ನಾವು ಆದಾಯ ತೆರಿಗೆ ಇಲಾಖೆಯವರು ಎಂದು ಹೇಳಿಕೊಂಡು,ನಿಮ್ಮ ವ್ಯವಹಾರ ಹಾಗೂ ಬ್ಯಾಂಕಿಗೆ ಸಂಬಂಧಪಟ್ಟ ಸಂಪೂರ್ಣ ಮಾಹಿತಿ ನೀಡುವಂತೆ ಕೇಳಿದ್ದಾರೆ.

ಇಲ್ಲದಿದ್ದರೆ ನಿಮ್ಮ ವಿರುದ್ಧ ಕ್ರಮ ಕೈಗೊಳ್ಳಬೇಕಾಗುತ್ತದೆ ಎಂದು ನಂಬಿಸಿ 2.30 ಲಕ್ಷ ರೂ.ವಂಚಿಸಿದ್ದರು.
ಈ ಕಾರ್ಯಾಚರಣೆಯಲ್ಲಿ ಪಾಲ್ಗೊಂಡ ಅಧಿಕಾರಿ ಮತ್ತು ಸಿಬ್ಬಂದಿಯವರಿಗೆ ಎಸ್ಪಿ ಕೆ.ಎಂ ಶಾಂತರಾಜು ಅಭಿನಂದನೆ ಸಲ್ಲಿಸಿದ್ದಾರೆ.
ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ