BREAKING NEWS
Search

ಸಕ್ರೆಬೈಲು ಆನೆಗಳಿಗೆ ಹರ್ಪಿಸ್ ವೈರಸ್ !ಸರಣಿ ಸಾವು ಕಾಣ್ತಿವೆ ಆನೆಗಳು?

304

ಶಿವಮೊಗ್ಗ:- ಆನೆಗಳ ಸರಣಿ ಸಾವಿಗೆ ಕಾರಣವಾಗುತ್ತಿರುವ ಹರ್ಪಿಸ್ ಎಂಬ ವೈರಸ್, ಶಿವಮೊಗ್ಗ ಜಿಲ್ಲೆಯ ಪ್ರಸಿದ್ದ ಸಕ್ರೆಬೈಲ್ ಆನೆ ಬಿಡಾರದಲ್ಲಿಯೂ ಕೂಡಕೂಡ ಕಾಣಿಸಿಕೊಂಡಿದೆ.

ಜಿಲ್ಲೆಯ ಆನೆ ಬಿಡಾರ ದಲ್ಲಿ ಪದೇ ಪದೇ ಆನೆಗಳು ಸಾಯುತ್ತಿರುವ ಬೆನ್ನಲ್ಲೇ ಇದೀಗ ಇಲ್ಲಿನ ಅರಣ್ಯಾಧಿಕಾರಿಗಳು ಇವುಗಳ ಮೂಲ ಹುಡುಕಿದ್ದಾರೆ.

Photo courtesy Google

ಶಿವಮೊಗ್ಗ ಜಿಲ್ಲೆಯ ಸಕ್ರೆಬೈಲು ಆನೆ ಬಿಡಾರ ಕಾಡಾನೆಗಳ ತರಬೇತಿಯಲ್ಲಿ ರಾಜ್ಯದಲ್ಲಿಯೇ ಎರಡನೇ ಶ್ರೇಯಾಂಕದಲ್ಲಿತ್ತು.

ಉತ್ತಮ ತರಬೇತಿ ಆನೆಗಳ ರಕ್ಷಣೆಗೆ ತನ್ನದೇ ಆದ ಹೆಸರು ಮಾಡುವ ಮೂಲಕ ಇಡೀ ರಾಜ್ಯದಲ್ಲೇ ಹೆಸರು ಮಾಡಿತ್ತು.

ಶಿವಮೊಗ್ಗದ ಸಮೀಪದಲ್ಲಿರುವ, ಗಾಜನೂರು ಜಲಾಶಯದ ಪಕ್ಕದಲ್ಲಿರುವ ತುಂಗಾನದಿ ತೀರದಲ್ಲಿನ ಸುಂದರ ಪ್ರದೇಶ ಪ್ರವಾಸಿಗರ ಅಚ್ಚುಮೆಚ್ಚಿನ ತಾಣವಾಗಿ ಮಾರ್ಪಡುವ ಮೂಲಕ ಪ್ರವಾಸಿಗರ ಅಚ್ಚು ಮೆಚ್ಚಿನ ತಾಣವಾಗಿ ಆರ್ಥಿಕ ಮೂಲವಾಗಿ ಸಹ ಇಲಾಖೆಗೆ ಲಾಭ ತಂದಿತ್ತು.

ಸಕ್ರೆಬೈಲು ಮಲೆನಾಡಿನ ಮಡಿಲಿನಲ್ಲಿ ಇರುವುದರಿಂದ ಸುತ್ತಲಿನ ಕಾಡಾನೆಗಳನ್ನು ಓಡಿಸಲು ಹಾಗೂ ಸೆರೆಹಿಡಿದ ಆನೆಗಳನ್ನು ತಂದು ಪಳಗಿಸಲು ಎಲ್ಲಾ ರೀತಿಯ ಪ್ರಕೃತಿದತ್ತ ವಾತಾವಾರಣ ಇದೆ. ಹೀಗಾಗಿಯೇ ಇಲ್ಲಿ ಈಗ ಇಪ್ಪತ್ತಕ್ಕೂ ಹೆಚ್ಚು ಆನೆಗಳನ್ನು ಇರಿಸಲಾಗಿದೆ. ಆದರೆ ಸೆರೆಹಿಡಿದು ತಂದ ಆನೆಗಳು ಸಾವು ಕಾಣುತ್ತಿರುವುದು , ಕಳೆದ 2 ವರ್ಷಕ್ಕೆ ಎಂಟು ಆನೆಗಳು ಮೃತವಾದ ಬಳಿಕ ಬಹುತೇಕ ಆನೆಗಳ ಸಾವಿಗೆ ಈ ಡೆಡ್ಲಿ ಹರ್ಪಿಸ್ ವೈರಸ್ (DEADLY ACUTES FATAL DISEASE) ಕಾರಣ ಆಗಿರಬಹುದು ಎಂದು ಹೇಳಲಾಗುತ್ತಿದೆ.

ಇನ್ನೊಂದು ಆಘಾತಕಾರಿ ವಿಷಯ ಎಂದರೆ 2 ತಿಂಗಳ ಹಿಂದೆ ಮೃತಪಟ್ಟ ಆನೆ ನಾಗಣ್ಣ ಕೂಡ ಇದೇ ವೈರಸ್ ಸೋಂಕಿಗೆ ಗುರಿಯಾಗಿದ್ದು ಮರಣೋತ್ತರ ಪರೀಕ್ಷೆಯಿಂದ ದೃಡಪಟ್ಟಿದೆ.

ಬಿಡಾರದಲ್ಲಿನ ಕೆಲವು ಆನೆಗಳಿಗೆ ಈ ಸೋಂಕು ತಗುಲಿರುವ ಸಾಧ್ಯತೆಯನ್ನು ಸ್ವತಃ ಡಿಎಫ್ಓ ಚಂದ್ರಶೇಖರ್ ರವರು ಮಾಹಿತಿ ನೀಡಿದ್ದಾರೆ.

ಶಿವಮೊಗ್ಗ ವೈಲ್ಡ್ ಲೈಫ್ ವ್ಯಾಪ್ತಿಯಲ್ಲಿ ಒಂದು ಕಾಡಾನೆ ಮಾತ್ರ ಇದೆ . ಉಳಿದೆಲ್ಲಾ ಆನೆಗಳು ಬಿಡಾರದೊಳಗೆ ಬಿಡಲಾಗಿದೆ.

ಪ್ರತೀ ವರ್ಷ ಮೂರ್ನಾಲ್ಕು ಆನೆಗಳು ಮೃತಪಟ್ಟರೆ ಮುಂದೊಂದು ದಿನ ಬಿಡಾರವೇ ಖಾಲಿಯಾಗಬಹುದು ಎಂಬ ಆತಂಕ ಇದೀಗ ಇಲಾಖೆ ಅಧಿಕಾರಿಗಳನ್ನು ಕಾಡ ತೊಡಗಿದೆ.

ಈಗ ದೇಶಾದ್ಯಂತ ಎಂಡೋಥೆಲಿಯೋಟ್ರೋಪಿಕ್ ವೈರಸ್ ದಾಳಿಯಾಗಿರುವುದು ಆನೆಗಳ ಸಂತತಿಗೆ ಮಾರಕವಾಗಿದೆ.

ಒಂದೇ ತಿಂಗಳಲ್ಲಿ ಕನಿಷ್ಟ 20 ಆನೆಗಳು ಈ ವೈರಸ್ ಗೆ ಮೃತಪಟ್ಟಿವೆ ಎಂದು ಹೆಳಲಾಗುತ್ತಿದೆ.

ಒಡಿಶಾದ ನಂದನ್ ಕಣನ್ ಜಿಯಾಲಜಿಕಲ್ ಪಾರ್ಕ್ ನಲ್ಲಿ ಒಂದೇ ವಾರದಲ್ಲಿ ಎಂಡೋಥೆಲಿಯೋಟ್ರೋಪಿಕ್ ವೈರಸ್ ದಾಳಿಗೆ ನಾಲ್ಕು ಆನೆಗಳು ಬಲಿಯಾಗಿದ್ದು, ಅಂತರರಾಷ್ಟ್ರೀಯ ಪರಿಣಿತರ ತಂಡವೂ ಸಾಕಷ್ಟು ಶ್ರಮವಹಿಸಿ ಉಳಿದ ಆನೆಗಳಿಗೆ ವೈರಸ್ ಹರಡದಂತೆ ನೋಡಿಕೊಳ್ಳಲು ಹರಸಾಹಸ ಪಡುತ್ತಿದ್ದಾರೆ.

ಅದೇ ವೈರಸ್ ಸಕ್ರೆಬೈಲು ಬಿಡಾರದ ಆನೆಗಳಿಗೂ ಬಾಧಿಸಿದೆ ಎಂದು ಹೇಳಲಾಗುತ್ತಿದೆ. ಇದೀಗ ಸಕ್ರೆಬೈಲು ಬಿಡಾರದಲ್ಲಿರುವ 3 ಆನೆಗಳ ಮೇಲೆ ನಿಗಾ ಇಡಲು ಬಿಡಾರದ ಸಿಬ್ಬಂದಿಗೆ ನಿರ್ದೇಶನ ಕೂಡ ನೀಡಲಾಗಿದೆ.

ವೈದ್ಯಾಧಿಕಾರಿಗಳು, ಪ್ರತಿದಿನ ಅವುಗಳ ಚಲನವಲನಗಳ ಮೇಲೆ ನಿಗಾ ವಹಿಸಲಾಗಿದೆ.

ಪ್ರಾಣಿ ಪ್ರಿಯರ ಆಕ್ರೋಶ!


ಇನ್ನು ನಿರಂತರ ಆನೆಗಳ ಸಾವಿಗೆ ಪ್ರಾಣಿ ಪ್ರಿಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ದಸರ ಸಂದರ್ಭದಲ್ಲಿ ಆನೆ ಅಸ್ವಸ್ಥತೆ ಗೊಂಡಿತ್ತು ಇದರ ಚಿಕಿತ್ಸೆ ಮಾಡಲಾಗುತ್ತಿದೆ ಆದರೇ ಸಕ್ರೆಬೈಲ್ ಆನೆಗಳನ್ನು ಸರ್ಕಸ್ ಆನೆಗಳನ್ನಾಗಿ ಅಧಿಕಾರಿಗಳ ಮಾರ್ಪಡಿಸಿದ್ದಾರೆ , ವನ್ಯಜೀವಿ ಸಪ್ತಾಹದಲ್ಲಿ ಆಟೋಟಗಳನ್ನು ಮಾಡಿಸಿ ಜನರನ್ನು ರಂಜಿಸುವುದನ್ನು ನಿಷೇಧಿಸಬೇಕು ಮನುಷ್ಯನ ಮನೋರಂಜನೆಗೆ ಬಳಸದಂತೆ ಆಗ್ರಹ ಕೇಳಿಬಂದಿದೆ.

ಒಟ್ಟಿನಲ್ಲ ಹರ್ಪಿಸ್ ಎಂಬ ಡೇಂಜರಸ್ ವೈರಸ್ ಗೆ ಇಲ್ಲಿನ ಆನೆಗಳು ಬಲಿಯಾಗಿರುವುದು ಖಾತರಿಯಾಗಿದ್ದು, ಸದ್ಯ ಬಿಡಾರದಲ್ಲಿರುವ ಉಳಿದ ಆನೆಗಳನ್ನಾದರೂ, ಉಳಿಸಲಿ ಎಂಬುದೇ, ವನ್ಯಜೀವಿ ಪ್ರಿಯರ ಹಾಗೂ ನಾಗರೀಕರ ಆಗ್ರಹವಾಗಿದೆ.
Leave a Reply

Your email address will not be published. Required fields are marked *