ಕಾಡಾನೆ ದಾಳಿಗೆ ಸಕ್ರೆಬೈಲಿನ ಸಾಕಾನೆ ರಂಗ ಸಾವು!

80

ಶಿವಮೊಗ್ಗ :-ಕಾಡಾನೆ ದಾಳಿಗೆ ತುತ್ತಾಗಿ ಸಕ್ರೆಬೈಲಿನ ಸಾಕಾನೆ ರಂಗ (35) ಮೃತಪಟ್ಟಿದೆ. ಕಾಡಿನಲ್ಲಿದ್ದ ವೇಳೆ ರಂಗನ ಮೇಲೆ ಕಾಡಾನೆ ದಾಳಿಯಾಗಿದ್ದು, ಸ್ಥಳದಲ್ಲೇ ಸಾವನ್ನಪ್ಪಿದೆ.

ಉಳಿದ ಆನೆಗಳಂತೆ ರಾತ್ರಿ ರಂಗನನ್ನು ಕಾಡಿಗೆ ಬಿಡಲಾಗಿತ್ತು. ಈ ವೇಳೆ ಕಾಡಾನೆಗಳು ದಾಳಿಯಾಗಿದೆ. ರಂಗನಿಗೆ ಸರಪಳಿಯಿಂದ ಕಟ್ಟಲಾಗಿತ್ತು. ಹಾಗಾಗಿ ದಾಳಿಯಿಂದ ತಪ್ಪಿಸಿಕೊಳ್ಳಲು ಸಾದ್ಯವಾಗಿಲ್ಲ ಎಂದು ಹೇಳಲಾಗುತ್ತಿದೆ.

ಬೆಳಗ್ಗೆ ಮಾವುತನು ಆನೆ ಬಿಡಾರಕ್ಕೆ ಕರೆತರುವ ವೇಳೆ ಘಟನೆ ಬೆಳಕಿಗೆ ಬಂದಿದೆ. ಸಕ್ರೆಬೈಲಿನಲ್ಲಿ ಗೀತಾ ಆನೆಗೆ ರಂಗ ಆನೆ ಜನಿಸಿದ್ದು 35 ವರ್ಷದಿಂದ ಕ್ಯಾಂಪನಲ್ಲಿ ಇದ್ದ ಇದು ತನ್ನ ದೇಹದ ಮಾಟದಿಂದ ಎಲ್ಲರ ಮೆಚ್ಚುಗೆಯ ಆನೆಯಾಗಿತ್ತು.

ಇನ್ನು ರಂಗನ ಸಾವಿಗೆ ಹಲವರ ವಿರೋಧ ಕೇಳಿಬಂದಿದ್ದು ಆನೆಯನ್ನು ಕಟ್ಟಿದ್ದರಿಂದ ಸಾವು ಕಾಣುವಂತಾಗಿದೆ,ಇದಕ್ಕೆ ಅರಣ್ಯ ಇಲಾಖೆಯ ನಿರ್ಲಕ್ಷವೇ ಕಾರಣ ಎಂದು ಆರೋಪಿಸಲಾಗಿದೆ.




Leave a Reply

Your email address will not be published. Required fields are marked *