ಗಂಟಲಲ್ಲಿ ಸಮೋಸ ಸಿಲುಕಿ ಮುಂಡಗೋಡಿನಲ್ಲಿ ಬಿಕ್ಕು ಸಾವು!

3630

ಕಾರವಾರ:- ಸಮೋಸಾ ತಿನ್ನುತ್ತಿರುವಾಗ ಗಂಟಲಲ್ಲಿ ಸಿಲುಕಿ ಉಸಿರಾಡಲು ಆಗದೇ ಬಿಕ್ಕುವೊಬ್ಬರುಸಾವನ್ನಪ್ಪಿದ ಘಟನೆ ಉತ್ತರ ಕನ್ನಡ ಜಿಲ್ಲೆಯ ಮುಂಡಗೋಡಿನ ಟಿಬೇಟಿಯನ್ ಕಾಲೋನಿಯಲ್ಲಿ ನಡೆದಿದೆ‌

ಮಂಗೋಲಿಯಾ ದೇಶದ ಬಿಕ್ಕು ಬಯಾರ್ಜವಖ್ಲನ್ ದಾಶ್ದೋರ್ಜ (18) ಮೃತಪಟ್ಟವರು. ಅವರು ಮುಂಡಗೋಡಿನ ಟಿಬೇಟಿಯನ್ ಕ್ಯಾಂಪ್ ನಂ.2ರ ಗೋಮಾಂಗ್ ವಸತಿ ನಿಲಯದಲ್ಲಿ ವಾಸವಿದ್ದರು. ಸೋಮವಾರ ತನ್ನ ಕೊಠಡಿಯಲ್ಲಿ ಸಮೋಸಾ ತಿನ್ನುವಾಗ ಈ ದುರ್ಘಟನೆ ನಡೆದಿದೆ.

ಬಿಕ್ಕಳಿಕೆ ಬಂದು ಉಸಿರಾಡಲು ತೊಂದರೆ ಪಟ್ಟು ಮೃತಪಟ್ಟಿದ್ದಾರೆ ಎನ್ನಲಾಗಿದೆ. ಈ ಕುರಿತು ಮುಂಡಗೋಡ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ