ಸಿಹಿ ಕಹಿ ಚಂದ್ರು ಮಗಳ ನಿಶ್ಚಿತಾರ್ಥ!ಸ್ಯಾಂಡಲ್ ವುಡ್ ನಲ್ಲಿ ಮದುವೆ ಪರ್ವ

125

ಬೆಂಗಳೂರು: ಸ್ಯಾಂಡಲ್ ವುಡ್ ಖ್ಯಾತ ಹಾಸ್ಯನಟ ಸಿಹಿ ಕಹಿ ಚಂದ್ರ ಹಾಗೂ ಗೀತಾ ಅವರ ಪುತ್ರಿ ಹಿತಾ ಚಂದ್ರಶೇಖರ್ ಮತ್ತು ಅವರ ಧೀರ್ಘಕಾಲದ ಗೆಳೆಯ ಹಾಗೇ ಸುಮ್ಮನೆ ಚಿತ್ರದ ನಾಯಕ ನಟ ಕಿರಣ್ ಶ್ರೀನಿವಾಸ್ ಅವರ ನಿಶ್ಚಿತಾರ್ಥ ನಡೆಯಿತು.

ದಿನಗಳ ಹಿಂದೆಯೇ ಈ ಜೋಡಿ ಹಸೆಮಣೆ ಏರುವ ಸುದ್ದಿ ಗಾಂಧಿನಗರದಲ್ಲೆಡೆ ಹರಡಿತ್ತು.

ಇಂದು ಈ ಜೋಡಿ ಬೆಂಗಳೂರಿನಲ್ಲಿ ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ. ಕಿರಣ್ ಹಾಗೂ ಹಿತಾ ಕಳೆದ ಮೂರ್ನಾಲ್ಕು ವರ್ಷಗಳಿಂದ ಪರಸ್ಪರ ಇಷ್ಟಪಟ್ಟಿದ್ದರು. ಇವರಿಬ್ಬರೂ ಕುಟುಂಬದವರ ಒಪ್ಪಿಗೆ ಮೇರೆಗೆ ಇಂದು ಉಂಗುರ ಬದಲಿಸಿಕೊಂಡಿದ್ದಾರೆ.

ಕಿರಣ್ 2008ರಲ್ಲಿ ಬಿಡುಗಡೆಯಾದ “ಹಾಗೆ ಸುಮ್ಮನೆ” ಚಿತ್ರದ ಮೂಲಕ ಬೆಳ್ಳಿತೆರೆ ಪ್ರವೇಶಿಸುವ ಮೂಲಕ ಹಲವಾರು ಸಿನಿಮಾ, ಕಿರುತೆರೆ ಧಾರವಾಹಿ ಮತ್ತು ರಿಯಾಲಿಟಿ ಶೋಗಳಲ್ಲಿ ನಟಿಸಿದ್ದಾರೆ.

ಹಿತಾ ಚಂದ್ರಶೇಖರ್ ಬಹಳಷ್ಟು ಚಿತ್ರಗಳಲ್ಲಿ ಕಾಣಿಸಿಕೊಂಡಿದ್ದು ಇತ್ತೀಚೆಗೆ ಬಿಡುಗಡೆಯಾದ ಜಗ್ಗೇಶ್ ಅಭಿನಯದ “ಪ್ರೀಮಿಯರ್ ಪದ್ಮಿನಿ” ಚಿತ್ರದಲ್ಲಿ ಮುಖ್ಯ ಪಾತ್ರದಲ್ಲಿ ಅಭಿನಯಿಸಿದ್ದಾರೆ.

ಈ ತಾರಾ ಜೋಡಿ ಬುಧವಾರ ನಿಶ್ಚಿತಾರ್ಥ ಮಾಡಿಕೊಂಡಿದ್ದು, ಮದುವೆ ದಿನಾಂಕ ಇನ್ನೂ ನಿಗದಿಯಾಗಬೇಕಿದೆ.
Leave a Reply

Your email address will not be published. Required fields are marked *

error: Content is protected !!