BREAKING NEWS
Search

ಗಡಿ ಮೀರಿದ ಗಡಿನಾಡು ಸಿನಿಮಾ ಅತೀ ಶೀಘ್ರದಲ್ಲಿ!

327

ವರದಿ- ಶುಭಶ್ರೀ ಕೆರೆಕೈ.

ಗಡಿನಾಡಿನಲ್ಲಿ ನೆಲ, ಜಲ,ಭಾಷೆಯ ಸಂಘರ್ಷ ಬನ್ನು ಇಟ್ಟುಕೊಂಡು ಅದಕ್ಕೊಂದು ಪ್ರೇಮಕಥೆಯನ್ನು ಬೆಸೆದ ‘ಗಡಿನಾಡು’ ಚಿತ್ರವನ್ನು ನಾಗ್ ಹುಣಸೋದ್‌ ನಿರ್ದೇಶಿಸಿದ್ದು ಚಿತ್ರ ಸದ್ಯದಲ್ಲೇ ತೆರೆಗೆ ಬರಲಿದೆ.

ಸದ್ಯ ಚಿತ್ರ ಡಿಟಿಎಸ್ ಹಂತದಲ್ಲಿದ್ದು
ಚಿತ್ರತಂಡದೊಂದಿಗೆ ನಿರ್ದೇಶಕ ನಾಗ್‌ ಈ ವಿಷಯ ವನ್ನು ಮಾಧ್ಯಮದೊಂದಿಗೆ ಹಂಚಿಕೊಂಡಿದ್ದಾರೆ.

ಸಿನಿಮಾದಲ್ಲೇನಿದೆ!?

ವಿದ್ಯಾಭ್ಯಾಸ ಮುಗಿಸಿ ಕುಂದಾನಗರಿಗೆ ಹೋಗುವ ಹೀರೋ ಅಲ್ಲಿನ ಗಡಿ ಸಮಸ್ಯೆಗಳನ್ನು ಕಂಡು, ಪರಿಹರಿಸಲು ಗಡಿನಾಡ ಸೇನೆ ಕಟ್ಟುತ್ತಾನೆ.

ಇದರ ಮಧ್ಯೆ ಮರಾಠಿ ಚೆಲುವೆಯೊಂದಿಗೆ ಹೀರೋಗೆ ಪ್ರೇಮಾಂಕುರವಾಗುತ್ತದೆ.

ಇದನ್ನು ಸಹಿಸದವರು ಹೀರೋಗೆ ವಿಲನ್ ಆಗಿ ನಿಲ್ಲುತ್ತಾರೆ.

ಚಿತ್ರದಲ್ಲಿ ನಾಲ್ವರು ಖಳನಾಯಕರು ಇರುವುದು ಈ ಚಿತ್ರದ ವಿಶೇಷಗಳಲ್ಲೊಂದು.

ಕನ್ನಡದ ನಾಯಕ– ಮರಾಠಿ ನಾಯಕಿ ಕಷ್ಟಗಳನ್ನು ಎದುರಿಸಿ ಬದುಕಿನಲ್ಲಿ ಒಂದುಗೂಡುತ್ತಾರಾ? ಎನ್ನುವುದೇ ಈ ಚಿತ್ರದ ಕ್ಲಮ್ಯಾಕ್ಸ್.

ಮಹಾಜನ್‌ ವರದಿಯಲ್ಲಿನ ಅಂಶಗಳನ್ನು ಚಿತ್ರಕಥೆಯಲ್ಲಿ ಕಟ್ಟಿಕೊಡಲಾಗಿದೆ.

ನೆಲ, ಜಲ, ಭಾಷೆಯ ಸಂಘರ್ಷಗಳಿಗೂ ಈ ಪ್ರೇಮಕಥೆಯಲ್ಲಿ ಮದ್ದು ಇದೆ.

ಚಿತ್ರಕ್ಕೆ ಯಾವುದೇ ತಂಟೆ ತಕರಾರು ಎದುರಾಗಬಾರದೆಂದು ಎಲ್ಲ ರೀತಿಯ ಮುನ್ನೆಚ್ಚರಿಕೆ ವಹಿಸಿಕೊಂಡೇ ಚಿತ್ರ ಮಾಡಲಾಗಿದೆ’ ಎನ್ನುವ ಮಾತು ನಿರ್ದೇಶಕರದ್ದು.

ಮರಾಠಿ ಹುಡುಗಿಯಾಗಿ ಬಣ್ಣ ಹಚ್ಚಿರುವ ಸಂಚಿತಾ ಪಡುಕೋಣೆಗೆ ಇದು ನಾಯಕಿಯಾಗಿ ನಾಲ್ಕನೇ ಚಿತ್ರವಾಗಿದೆ.

ಸಂಚಿತಾ ಹೇಳೋದು ಹೀಗೆ:-

ಗಡಿ ಪ್ರದೇಶದಲ್ಲಿ ನಡೆಯುವ ಪ್ರೇಮ ಕಥೆ ಇದಾಗಿದೆ. ನಾಯಕ ಬೆಳಗಾವಿಯವನು. ನಾನು ಮಹಾರಾಷ್ಟ್ರದ ಹುಡುಗಿಯಾಗಿ ಕಾಣಿಸಿಕೊಂಡಿದ್ದೇನೆ.

ಕರ್ನಾಟಕದ ಗಡಿ ಪ್ರದೇಶದಲ್ಲಿ ನನ್ನ ಊರು. ನಮ್ಮಿಬ್ಬರ ನಡುವೆ ಪ್ರೀತಿ ಬೆಳೆಯುತ್ತದೆ. ಇದರಿಂದ ಮುಂದೆ ಏನೆಲ್ಲ ಸಮಸ್ಯೆಗಳಾಗುತ್ತವೆ. ಅದನ್ನು ನಾವು ಹೇಗೆ ಎದುರಿಸುತ್ತೇವೆ ಎಂಬುದು ಚಿತ್ರದ ಸಾರಾಂಶ.

ಈ ಸಿನಿಮಾ ಗಡಿ ಪ್ರದೇಶದಲ್ಲಿರುವ ಸಮಸ್ಯೆಗಳ ಬಗೆಗೂ ಬೆಳಕು ಚೆಲ್ಲಲಿದೆ’ ಎನ್ನುತ್ತಾರೆ ಸಂಚಿತಾ.

ನಿರ್ದೇಶಕ ನಾಗ್ ಹುಣಸೋದ್
ಚಿತ್ರದಲ್ಲಿ ನಾಯಕನಾಗಿ ಬಣ್ಣ ಹಚ್ಚಿರುವ ನಟ ಪ್ರಭುಸೂರ್ಯ ಅವರಿಗೆ ಇದು ಎರಡನೇ ಚಿತ್ರ.

ಚರಣ್‍ರಾಜ್, ಶೋಭರಾಜ್, ದೀಪಕ್‍ ಶೆಟ್ಟಿ, ರಘುರಾಜು ಖಳನಾಯಕರಾಗಿ ನಟಿಸಿದ್ದಾರೆ. ‘ಕಾಮಿಡಿ ಕಿಲಾಡಿಗಳು’ ಖ್ಯಾತಿಯ ರಘು ಸೀರುಂಡೆ, ಮಮತಾ, ಪುಷ್ಪಾ ತಾರಾಗಣದಲ್ಲಿದ್ದಾರೆ.

ನಾಗ್‌ ಹುಣಸೋಡು ನಿರ್ದೇಶನದ ಜತೆಗೆ ರಚನೆ, ಚಿತ್ರಕಥೆ, ಸಂಭಾಷಣೆಯ ನೊಗವನ್ನು ಹೊತ್ತಿದ್ದಾರೆ.

ಛಾಯಾಗ್ರಹಣ ಗೌರಿವೆಂಕಟೇಶ್-ರವಿಸುವರ್ಣ ಅವರದ್ದು. ನಾಲ್ಕು ಹಾಡುಗಳಿಗೆ ಎಲ್ವಿನ್‍ ಜೋಶ್ವಾ ಸಂಗೀತ ನೀಡಿದ್ದಾರೆ.

ಕನ್ನಡ ಭಾಷೆ ಕುರಿತ ಗೀತೆಗೆ ಸಂತೋಷ್‍ ನಾಯಕ್ ಸಾಹಿತ್ಯ ರಚಿಸಿದ್ದು, ರಘುದೀಕ್ಷಿತ್ ಕಂಠದಾನ ಮಾಡಿದ್ದಾರೆ.

ನಾಲ್ಕು ಸಾಹಸ ದೃಶ್ಯಗಳಿಗೆ ಥ್ರಿಲ್ಲರ್‌ ಮಂಜು, ಡಿಫರೆಂಟ್ ಡ್ಯಾನಿ ನಿರ್ದೇಶನವಿದೆ. ಸಂಕಲನ ವೆಂಕಿ, ನೃತ್ಯ ಧನಂಜಯ್-ಹರಿಕೃಷ್ಣ ಅವರದ್ದಾಗಿದೆ.

ಬೆಳಗಾವಿಯ ವಸಂತ್‍ಮುರಾರಿ ದಳವಾಯಿ ಅಕ್ಷಯ್ ಫಿಲ್ಮ್ ಮೇಕರ್ಸ್ ಮೂಲಕ ಬಂಡವಾಳ ಹೂಡಿದ್ದು ಸದ್ಯದರಲ್ಲೇ ತೆರೆಕಾಣುವ ನಿರೀಕ್ಷೆ ಇಟ್ಟುಕೊಳ್ಳಲಾಗಿದ್ದು ಹೊಸ ವರ್ಷದ ನಂತರ ಬಿಡುಗಡೆಯಾಗಲಿದೆ.
Leave a Reply

Your email address will not be published. Required fields are marked *