‘ದಮಯಂತಿ’: ಸಿನಿಮಾ ರಿಲೀಸ್ ಆದ್ಮೇಲೆ ನನ್ನ ಮಗಳೇ ನನ್ನ ಹತ್ರ ಬರಲ್ಲ ಎಂದ್ರು ರಾಧಿಕಾ-ಹೇಗಿದೆ ಗೊತ್ತಾ ಅವರ ಲುಕ್ !

214


ಶ್ರೀ ಲಕ್ಷ್ಮೀವೃಷಾದ್ರಿ ಪ್ರೊಡಕ್ಷನ್ಸ್ ಲಾಂಛನದಲ್ಲಿ ನವರಸನ್ ಅವರು ನಿರ್ಮಿಸಿರುವ, ರಾಧಿಕಾ ಕುಮಾರಸ್ವಾಮಿ ಪ್ರಧಾನ ಪಾತ್ರದಲ್ಲಿ ಅಭಿನಯಿಸಿರುವ ‘ದಮಯಂತಿ’ ಚಿತ್ರದ ಟೀಸರ್ ಬಿಡುಗಡೆಯಾಗಿದ್ದು, ಟೀಸರಿನಲ್ಲಿ ರಾಧಿಕಾರ ಅವರ ರೌದ್ರಾವತಾರದ ಸಣ್ಣ ಝಲಕ್ ಸಖತ್ ಅಟ್ರಾಕ್ಟಿವ್ ಆಗಿದೆ.

ಟೀಸರ್ ಬಿಡುಗಡೆ ವೇಳೆ ಮಾತನಾಡಿದ ನಟಿ ರಾಧಿಕಾ ಅವರು, ಚಿತ್ರದ ಕಥೆ ಕೇಳಿದ ಸಂದರ್ಭದಲ್ಲಿ ನಿರ್ದೇಶಕರು ಹೇಳಿದ್ದ ರೀತಿಗಿಂತ ಉತ್ತಮವಾಗಿ ಸಿನಿಮಾ ಮೂಡಿ ಬಂದಿದೆ. ಸಿನಿಮಾ ಬಿಡುಗಡೆಯಾದ ಮೇಲೆ ನನ್ನನ್ನು ನೋಡಿದರೆ ನನ್ನ ಮಗಳು, ಅಣ್ಣನ ಮಕ್ಕಳು ನನ್ನ ಬಳಿ ಬರಲ್ಲ ಎಂದರು.

ಸಿನಿಮಾ ಅತ್ಯುತ್ತಮವಾಗಿ ಮೂಡಿ ಬಂದಿದ್ದು, ನನ್ನ ಸಿನಿಮಾ ಮಾಡುತ್ತಿದ್ದ ಸಂದರ್ಭದಲ್ಲಿ ಈ ಸಿನಿಮಾದ ಆಫರ್ ಸಿಕ್ತು. ನನ್ನ ಸಿನಿಮಾದೊಂದಿಗೆ ದಮಯಂತಿಗೂ ಓಕೆ ಹೇಳಿದ್ದೆ. ಬ್ಯುಸಿ ಇದ್ದರು ಸಿನಿಮಾ ಒಪ್ಪಿಕೊಳ್ಳಲು ‘ದಮಯಂತಿ’ ಟೈಟಲ್ ಕೂಡ ಕಾರಣ. ನನ್ನೊಂದಿಗೆ ಹಲವು ಕಲಾವಿದರು ಸಿನಿಮಾದಲ್ಲಿ ನಟಿಸಿದ್ದು, ಚಿತ್ರತಂಡ ಅತ್ಯುತ್ತಮವಾಗಿತ್ತು ಎಂದರು.

ಚಿತ್ರ ಟೀಸರ್ ನೋಡಿದರೆ ಟಾಲಿವುಡ್‍ನಲ್ಲಿ ಮೂಡಿ ಬಂದಿದ್ದ, ಭಾಗಮತಿ ಹಾಗೂ ಅರುಂಧತಿ ಸಿನಿಮಾ ಕೆಲ ದೃಶ್ಯಗಳು ಕಣ್ಣ ಮುಂದೆ ಬರುತ್ತವೆ. ನವರಸನ್ ರಚನೆ ಹಾಗೂ ನಿರ್ದೇಶನದ ಈ ಚಿತ್ರ ಕನ್ನಡ, ತಮಿಳು, ತೆಲುಗು, ಮಲೆಯಾಳಂ ಹಾಗೂ ಹಿಂದಿ ಭಾಷೆ ಸೇರಿ ಐದು ಭಾಷೆಗಳಲ್ಲಿ ನಿರ್ಮಾಣವಾಗುತ್ತಿದೆ.

ಹಾರರ್, ಥ್ರಿಲ್ಲರ್ ಹಾಗೂ ಕಾಮಿಡಿ ಕಥಾಹಂದರ ಹೊಂದಿರುವ ಈ ಚಿತ್ರದ ಚಿತ್ರೀಕರಣ ಈಗಾಗಲೇ ಪೂರ್ಣವಾಗಿದೆ. ಬೆಂಗಳೂರು, ಮೈಸೂರು, ಹೈದರಾಬಾದ್ ಮುಂತಾದ ಕಡೆ 67 ದಿನಗಳ ಚಿತ್ರೀಕರಣ ನಡೆಸಲಾಗಿದೆ.

ಆರ್.ಎಸ್.ಗಣೇಶ್ ನಾರಾಯಣ್ ಸಂಗೀತ ನಿರ್ದೇಶನವಿರುವ ಈ ಚಿತ್ರಕ್ಕೆ ಪಿ.ಕೆ.ಎಚ್ ದಾಸ್ ಅವರ ಛಾಯಾಗ್ರಹಣವಿದೆ. ಮಹೇಶ್ ರೆಡ್ಡಿ ಸಂಕಲನ ಹಾಗೂ ವಿನೋದ್ ಅವರ ಸಾಹಸ ನಿರ್ದೇಶನವಿರುವ ಈ ಚಿತ್ರದ ತಾರಾಬಳಗದಲ್ಲಿ ರಾಧಿಕಾ ಕುಮಾರಸ್ವಾಮಿ, ಭಜರಂಗಿ ಲೋಕಿ, ಸಾಧು ಕೋಕಿಲ, ತಬಲನಾಣಿ, ಮಿತ್ರ, ನವೀನ್ ಕೃಷ್ಣ, ಹೊನ್ನವಳ್ಳಿ ಕೃಷ್ನ, ರವಿಗೌಡ, ಬಲರಾಜವಾಡಿ, ವೀಣಾಸುಂದರ್, ಕೆಂಪೇಗೌಡ ಮುಂತಾದವರು ಈ ಚಿತ್ರದ ತಾರಾಬಳಗದಲ್ಲಿದ್ದಾರೆ.
Leave a Reply

Your email address will not be published. Required fields are marked *