BREAKING NEWS
Search

ಕನ್ನಡಕೊಬ್ಬ ಖಡಕ್ ವಿಲನ್ ಪತ್ರಕರ್ತ!

351

ಬೆಂಗಳೂರು:- ಸ್ಯಾಂಡಲ್‍ವುಡ್‍ಗೆ ಹಲವಾರು ಕ್ಷೇತ್ರಗಳಿಂದ ಬಂದು ಇಲ್ಲಿ ನೆಲೆನಿಂತು ತಮ್ಮದೇ ಆದ ಛಾಪು ಮೂಡಿಸಿದವರು ಸಾಕಷ್ಟು ಜನರಿದ್ದಾರೆ.

ಈಗ, ಇದೇ ಹಾದಿಯಲ್ಲಿ ತಮ್ಮನ್ನು ತಾವು ನಟನಾಗಿ ಕೂಡ ಸೈ ಅನ್ನಿಸಿಕೊಳ್ಳುಲು ಬರುತ್ತಿದ್ದಾರೆ ಚಕ್ರವರ್ತಿ ಚಂದ್ರಚೂಡ್. ಚಂದ್ರಚೂಡ್ ಪ್ರಕರ್ತರಾಗಿ, ಸಿನಿಮಾ ಬರಹಗಾರರಾಗಿ ಈಗಾಗಲೇ ಗುರುತಿಸಿಕೊಂಡವರು, ಆದರೆ ಈವರೆಗೆ ತೆರೆಯೆ ಹಿಂದೆಯಷ್ಟೇ ಇದ್ದವರುವರು ಈಗ ಬಿ.ನವೀನ್‍ಕೃಷ್ಣ ನಿರ್ದೇಶದ, ರಾಷ್ಟ್ರಪ್ರಶಸ್ತಿ ವಿಜೇತ ನಟ ಸಂಚಾರಿವಿಜಯ್ ಅಭಿನಯದ `ಮೇಲೊಬ್ಬ ಮಾಯಾವಿ’ ಚಿತ್ರದ ಮೂಲಕ ಪ್ರಮುಖ ಖಳನಾಯಕನಾಗಿ ಎಂಟ್ರಿಕೊಡ್ತಿದ್ದಾರೆ.

ಈಗಾಗಲೇ ಚಿತ್ರದ ಟೀಸರ್ ಬಿಡುಗಡಯಾಗಿದ್ದು, ಅದರಲ್ಲಿನ ಇವರ ಖಡಕ್‍ಲುಕ್ ಸಿನಿಪ್ರಿಯರನ್ನು ಮೆಚ್ಚಿಸಿದೆ. ಚಿತ್ರದಲ್ಲಿ ಚಂದ್ರಚೂಡ್ ಅವರದ್ದು ಸುಲೈಮಾನ್ ಅನ್ನುವ ಹೆಸರಿನ ಪಾತ್ರ.

ಸುಲೈಮಾನ್ ಪಾತ್ರ ಟೀಸರ್ ಮೂಲಕ ಅನಾವರಣಗೊಂಡಿದ್ದೇ, ಚಂದ್ರಚೂಡ್ ಈಗ ಹಲವು ಚಿತ್ರಗಳಿಗೆ ಖಳನಾಯಕನಾಗಿ ಅಭಿನಯಿಸುತ್ತಿದ್ದಾರೆ. ಅವುಗಳಲ್ಲಿ ಪ್ರಮುಖವಾದುವು ಡೆಮೋಪೀಸ್ ಮತ್ತು ರಂಗನಾಯಕಿ. ಇದಿಷ್ಟೇ ಇಲ್ಲದೇ `ಮೇಲೊಬ್ಬ ಮಾಯಾವಿ’ಯ ಸುಲೈಮಾನ್ ಪಾತ್ರ, ಚಂದ್ರಚೂಡ್ ಅವರನ್ನು ಮಲಯಾಳಂನ `ಫುಟ್ಬಾಲ್ ಮರಿಯಮ್ಮನ್’ ಅನ್ನುವ ಬಿಗ್ ಬಜೆಟ್‍ನ ಚಿತ್ರಕ್ಕೂ ದಾರಿಮಾಡಿಕೊಟ್ಟಿದೆ. ಇಲ್ಲಿವರೆಗೆ ಬೆಳ್ಳಿತೆರೆಯ ಹಿಂದೆ ಸಿನಿಮಾದ ನಾನಾ ವಿಭಾಗಗಳಲ್ಲಿ ತೊಡಿಗಿಸಿಕೊಂಡಿದ್ದ ಚಂದ್ರಚೂಡ್, `ಮೇಲೊಬ್ಬ ಮಾಯಾವಿ’ಯ ಮೂಲಕ ತೆರೆಯ ಮೇಲೆ ಮಿಂಚುತ್ತಾರಾ ಕಾದುನೋಡಬೇಕು




Leave a Reply

Your email address will not be published. Required fields are marked *