add

GoodNews|ಎಟಿಎಂ ಕಾರ್ಡ್ ವಿತ್ ಡ್ರಾ ಮಿತಿ 1 ಲಕ್ಷ ರೂ.ಗಳಿಗೆ ಹೆಚ್ಚಳ..!

589

ದೆಹಲಿ:- ದೇಶದ ಅತಿದೊಡ್ಡ ಬ್ಯಾಂಕ್ ಗಳಲ್ಲಿ ಒಂದಾದ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ತನ್ನ ಗ್ರಾಹಕರಿಗೆ ಏಳು ಬಗೆಯ ಎಟಿಎಂ ಕಮ್ ಡೆಬಿಟ್ ಕಾರ್ಡ್ʼಗಳನ್ನು ನೀಡುವುದಾಗಿ ಘೋಷಿಸಿದೆ.

ವಿವಿಧ ಕಾರ್ಡ್ ನ ಪ್ರಕಾರಗಳಂತೆ ದಿನಕ್ಕೆ ನಗದು ವಿತ್ ಡ್ರಾ ಮಿತಿಗಳು 20,000 ರೂ.ಗಳಿಂದ 1 ಲಕ್ಷ ರೂಪಾಯಿಗಳಿಗೆ ಹೆಚ್ಚಿಸಿದೆ.ಜುಲೈ 1ರಿಂದ ಎಸ್ ಬಿಐ ತನ್ನ ಎಟಿಎಂ ವಿತ್ ಡ್ರಾ ನಿಯಮಗಳನ್ನ ಪರಿಷ್ಕರಿಸಿದೆ.

ತನ್ನ ಅಧಿಕೃತ ವೆಬ್ ಸೈಟ್ sbi.co.in ನಲ್ಲಿ ನೀಡಿರುವ ಮಾಹಿತಿಯಂತೆ ಎಸ್ ಬಿಐ ತನ್ನ ನಿಯಮಿತ ಉಳಿತಾಯ ಖಾತೆದಾರರಿಗೆ ಒಂದು ತಿಂಗಳಲ್ಲಿ 8 ಉಚಿತ ವಹಿವಾಟುಗಳನ್ನ ಮಾಡಲು ಅವಕಾಶ ನೀಡುತ್ತಿದೆ. ನಂತರ, ಪ್ರತಿ ವಹಿವಾಟಿನ ಮೇಲೆ ಗ್ರಾಹಕರಿಗೆ ಪ್ರತ್ತೇಕ ಶುಲ್ಕ ವಿಧಿಸಲಿದೆ.

ಯಾವ ಯಾವ ಕಾರ್ಡ ಗೆ ಎಷ್ಟು ನಗದು ಯೆಗೆಯಬಹುದು ವಿವರ ಈ ಕೆಳಗಿನಂತಿದೆ.

1) ಎನ್.ಬಿ.ಐ ಕ್ಲಾಸಿಕ್ ಕಾರ್ಡ

ಎಟಿಎಂ ವಿತ್ ಡ್ರಾ ಮಿತಿ: ₹ 20,000

2) ಎಸ್ ಬಿಐ ಗ್ಲೋಬಲ್ ಇಂಟರ್ ನ್ಯಾಷನಲ್ ಡೆಬಿಟ್ ಕಾರ್ಡ್

ಎಟಿಎಂನಿಂದ ವಿತ್ ಡ್ರಾ ಮಿತಿ: ₹ 40,000 .

3) ಎಸ್ ಬಿಐ ಗೋಲ್ಡ್ ಇಂಟರ್ ನ್ಯಾಷನಲ್ ಡೆಬಿಟ್ ಕಾರ್ಡ್

ಎಟಿಎಂ ವಿತ್ ಡ್ರಾ ಮಿತಿ: ₹ 50,000

4) ಎಸ್ ಬಿಐ ಪ್ಲಾಟಿನಂ ಇಂಟರ್ ನ್ಯಾಷನಲ್ ಡೆಬಿಟ್ ಕಾರ್ಡ್

ಎಟಿಎಂ ವಿತ್ ಡ್ರಾ ಮಿತಿ: ₹ 1,00,000

5) ಎಸ್ ಬಿಐ ಇನ್ ಟಚ್ ಟ್ಯಾಪ್ ಮತ್ತು ಗೋ ಡೆಬಿಟ್ ಕಾರ್ಡ್

ಎಟಿಎಂನಿಂದ ವಿತ್ ಡ್ರಾ ಮಿತಿ: ₹ 40,000 .

6) ಎಸ್ ಬಿಐ ಮುಂಬೈ ಮೆಟ್ರೋ ಕಾಂಬೋ ಕಾರ್ಡ್

ಎಟಿಎಂನಿಂದ ವಿತ್ ಡ್ರಾ ಮಿತಿ: ₹ 40,000 .

7) ಎಸ್ ಬಿಐ ಮೈ ಕಾರ್ಡ್ ಇಂಟರ್ ನ್ಯಾಷನಲ್ ಡೆಬಿಟ್ ಕಾರ್ಡ್

ಎಟಿಎಂನಿಂದ ವಿತ್ ಡ್ರಾ ಮಿತಿ: ₹ 40,000 .

ಎಸ್ ಬಿಐ ಓಟಿಪಿ ಪಾಸ್ ವರ್ಡ!

ಸೆಪ್ಟೆಂಬರ್ 18ರಿಂದ ಎಸ್ ಬಿಐ ದೇಶದ ಎಲ್ಲ ಎಟಿಎಂಗಳಲ್ಲಿ ಒನ್ ಟೈಮ್ ಪಾಸ್ ವರ್ಡ್ ಅಂದರೆ ಒಟಿಪಿ ಆಧಾರಿತ ಸೌಲಭ್ಯವನ್ನ ಆರಂಭಿಸಿದೆ.

ದಿನಕ್ಕೆ 10 ಸಾವಿರ ರೂಪಾಯಿಗಿಂತ ಹೆಚ್ಚು ಹಣ ಡ್ರಾ ಮಾಡಲು ಒಟಿಪಿ ಬರಲಿದೆ. ಇದಕ್ಕಾಗಿ ಬ್ಯಾಂಕ್ ಕಳುಹಿಸಿದ ಒಟಿಪಿಯನ್ನ ನಿಮ್ಮ ನೋಂದಾಯಿತ ಮೊಬೈಲ್ ಸಂಖ್ಯೆಗೆ ನಮೂದಿಸಬೇಕು. ನೀವು ಹಾಗೆ ಮಾಡಲು ವಿಫಲವಾದರೆ, ವ್ಯವಹಾರವನ್ನ ರದ್ದುಮಾಡಲಾಗುತ್ತದೆ.

ಎಸ್ .ಬಿ.ಐ ಟ್ವೀಟ್ ಮಾಡಿದ್ದು, “ಎಸ್ ಬಿಐನ ಎಟಿಎಂನಲ್ಲಿ ನಿಮ್ಮ ವಹಿವಾಟು ಹಿಂದೆಂದಿಗಿಂತಲೂ ಈಗ ಹೆಚ್ಚು ಸುರಕ್ಷಿತವಾಗಿದೆ.

ಎಸ್ ಬಿಐ 18.09.2020 ರಿಂದ 24×7 ರೂ.ಗಳಿಗೆ ಒಟಿಪಿ ಆಧಾರಿತ ನಗದು ಹಿಂತೆಗೆಯುವ ಸೌಲಭ್ಯವನ್ನ 10,000 ಮತ್ತು ಅದಕ್ಕಿಂತ ಹೆಚ್ಚಿನ ಮೊತ್ತಕ್ಕೆ ವಿಸ್ತರಿಸಿದೆ ಎಂದಿದೆ.

ಇದರಿಂದಾಗಿ ಗ್ರಾಹಕರು ವಂಚನೆಗೊಳಗಾಗುವುದು ತಪ್ಪಲಿದೆ.

ಪ್ರತಿ ದಿನ ಪ್ರಮುಖ ಸುದ್ದಿಗಳನ್ನು ತಿಳಿಯಲು ನಮ್ಮ ವಾಟ್ಸ್ ಅಪ್ ಗ್ರೂಪ್ ಗೆ ಸೇರಲು ಕೆಳಗಿನ ಲಿಂಕ್ ಗೆ ಕ್ಲಿಕ್ ಮಾಡಿ:-

https://chat.whatsapp.com/D3LnZxBFA8pAMiJqfy72or




ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ