BREAKING NEWS
Search

“ಸೆಲ್ಫಿ ವಿತ್ ಗಣೇಶ”ಸ್ಪರ್ಧೆ ವಿಜೇತರಿಗೆ ಬಹುಮಾನ ವಿತರಣೆ

260

ಕಾರವಾರ : ಗಣೇಶ ಹಬ್ಬದ ಪ್ರಯುಕ್ತ ಎನ್‌ಡಿಸಿಟಿಪ್ಲಸ್ ವಾಹಿನಿ ಆಯೋಜಿಸಿದ್ದ ಸೆಲ್ಫಿ ವಿತ್ ಗಣೇಶ ಸ್ಪರ್ಧೆಯ ಫಲಿತಾಂಶ ಹೊರಬಿದ್ದಿದೆ.

ಆನ್‌ಲೈನ್‌ನಲ್ಲಿ ಹಮ್ಮಿಕೊಂಡಿದ್ದ ಈ ಸ್ಪರ್ಧೆಯಲ್ಲಿ ಜಿಲ್ಲೆ ಹಾಗೂ ಹೊರಜಿಲ್ಲೆಯ ನೂರಕ್ಕೂ ಹೆಚ್ಚು ಸ್ಪರ್ಧಿಗಳು ಪಾಲ್ಗೊಂಡಿದ್ದರು. ಇಲ್ಲಿಯ ಮಹಾಲಕ್ಷ್ಮೀ ಎಲೆಕ್ಟ್ರಾನಿಕ್ಸ್ ನಲ್ಲಿ ಬಹುಮಾನ ವಿತರಣೆ ಸಮಾರಂಭವನ್ನು ಹಮ್ಮಿಕೊಳ್ಳಲಾಗಿತ್ತು.

ಮೊದಲ ಬಹುಮಾನವನ್ನು ಕೋಡಿಭಾಗದ ರಾಘವೇಂದ್ರ ಮಹಾಲೆ ಗೆದ್ದರೆ ಎರಡನೇ ಬಹುಮಾನವನ್ನು ಸಂದೀಪ ಶೇಟ್ ಹಾಗೂ ಫ್ಯಾಮಿಲಿ ಪಡೆದುಕೊಂಡಿತು.

ಮೂರನೇ ಬಹುಮಾನವನ್ನು ಬಿಣಗಾದ ಉಷಾ ಗಣೇಶ ನಾಯ್ಕ ತಮ್ಮದಾಗಿಸಿಕೊಂಡರು.

ಮಾಜಾಳಿಯ ಮನೋಜ್ ಹರ್ಷಿತಾ ಜೋಡಿ ಹಾಗೂ ಬೆಂಗಳೂರಿನ ಅಜಿತ್ ಗಾಂವ್ಕರ್ ಕುಟುಂಬ ಕ್ರಮವಾಗಿ ನಾಲ್ಕು ಮತ್ತು ೫ನೇ ಬಹುಮಾನವನ್ನು ಪಡೆದುಕೊಂಡರು.

ಮಹಾಲಕ್ಷ್ಮೀ ಎಲೆಕ್ಟ್ರಾನಿಕ್ಸ್ ಹಾಗೂ ಪ್ರಕೃತಿ ಮೆಡಿಕಲ್ಸ್ ಕಾರ್ಯಕ್ರಮದ ಪ್ರಾಯೋಜಕತ್ವವನ್ನು ವಹಿಸಿಕೊಂಡು ಕಾರ್ಯಕ್ರಮದಲ್ಲಿ ಎಲ್ಲರನ್ನ ಸ್ವಾಗತಿಸಿದ ವಾಹಿನಿಯ ಉಪಸಂಪಾದಕ ಹಾಗೂ ಉತ್ತರಕನ್ನಡ ಶಾರ್ಟ್ ಮೂವಿ ಕ್ಲಬ್‌ನ ಅಧ್ಯಕ್ಷ ವಿನಾಯಕ ಬ್ರಹ್ಮೂರು ಮಾತನಾಡಿ ವಾಹಿನಿ ಆಯೋಜಿಸಿದ ಸ್ಪರ್ಧೆಯಲ್ಲಿ ಪಾಲ್ಗೊಂಡಿರುವ ಎಲ್ಲಾ ಸ್ಪರ್ಧಿಗಳಿಗೆ ಅಭಿನಂದನೆಗಳನ್ನು ಸಲ್ಲಿಸಿ ವಿಜೇತರಿಗೆ ಶುಭ ಹಾರೈಸಿದರು

ಇನ್ನಷ್ಟು ಸದಭಿರುಚಿಯ ಕಾರ್ಯಕ್ರಮಗಳನ್ನು ವಾಹಿನಿ ಆಯೋಜಿಸಲಿದ್ದು ಜಿಲ್ಲೆಗರ ಪ್ರೊತ್ಸಾಹ ಬೆಂಬಲ ನಮ್ಮ ಜೊತೆಗಿರಲಿ ಎಂದರು.

ಮ್ಯಾನೇಜಿಂಗ್ ಡೈರೆಕ್ಟರ್ ಎನ್. ದತ್ತಾ ಸರ್ವರಿಗೂ ಅಭಿನಂದನೆ ಸಲ್ಲಿಸಿ ಬಹುಮಾನ ವಿತರಣೆಯಲ್ಲಿ ಭಾಗಿಯಾದರು.
Leave a Reply

Your email address will not be published. Required fields are marked *