ಲಿಂಗನಮಕ್ಕಿ ಜಲಾಶಯ ಭರ್ತಿಗೆ ಏಳು ಅಡಿ ಬಾಕಿ- ನದಿ ಪಾತ್ರದ ಜನರಿಗೆ ಪ್ರವಾಹದ ಭೀತಿ!

1364

ಶಿವಮೊಗ್ಗ/ಉತ್ತರ ಕನ್ನಡ:-ಶಿವಮೊಗ್ಗ ಜಿಲ್ಲೆಯಿಂದ ಉತ್ತರ ಕನ್ನಡ ಜಿಲ್ಲೆಯ ಮೂಲಕ ಅರಬ್ಬಿ ಸಮುದ್ರಕ್ಕೆ ಸೇರುವ ಶರಾವತಿ ನದಿಯಲ್ಲಿ ಕಳೆದ ನಾಲ್ಕು ದಿನದಿಂದ ನೀರು ಭರ್ತಿಯಾಗುತ್ತಿದೆ.
ಶಿವಮೊಗ್ಗ ಹಾಗೂ ಉತ್ತರ ಕನ್ನಡ ಜಿಲ್ಲೆಯ ಮಲೆನಾಡು ಭಾಗದಲ್ಲಿ ಹೆಚ್ಚು ಮಳೆಯಾಗುತ್ತಿದೆ ಹೀಗಾಗಿ ಶರಾವತಿ ನದಿ ತುಂಬಿ ಹರಿಯುತಿದ್ದು ತಗ್ಗು ಪ್ರದೇಶದ ವಸತಿ ಪ್ರದೇಶಕ್ಕೆ ನೀರು ನುಗ್ಗುತ್ತಿದೆ.

ಶಿವಮೊಗ್ಗ ಜಿಲ್ಲೆ ಸಾಗರ ತಾಲೂಕಿನ ಲಿಂಗನಮಕ್ಕಿ ಜಲಾಶಯ ಭರ್ತಿಗೆ ಇನ್ನು ಕೇವಲ 7 ಅಡಿ ಬಾಕಿ ಉಳಿದಿದೆ.

ಜಲಾಶಯದ ಗರಿಷ್ಟ ನೀರಿನ ಮಟ್ಟ 1819 ಅಡಿ ಇದ್ದು ಜಲಾಶಯದ ಇಂದಿನ‌ ನೀರಿನ ಮಟ್ಟ 1812.30 ಅಡಿಯಾಗಿದೆ.

ಜಲಾಶಯದ ಒಳ ಹರಿವು 44367 ಕ್ಯೂಸೆಕ್ ಇದ್ದು ಜಲಾಶಯ ಯಾವುದೇ ಸಂದರ್ಭದಲ್ಲಿ ಭರ್ತಿಯಾಗುವ ಹಿನ್ನೆಲೆಯಲ್ಲಿ ಜಲಾಶಯದ ನದಿಪಾತ್ರದ ಜನತೆ ಎಚ್ಚರಿಕೆಯಿಂದ ಇರುವಂತೆ ಜಲಾಶಯದ ಕಾರ್ಯ ನಿರ್ವಾಹಕ ಇಂಜಿನಿಯರ್ ಶ್ರೀ ಲಕ್ಷ್ಮಿ ವಿ. ಶಂಕರ್ ಸೂಚನೆ ನೀಡಿದ್ದಾರೆ.

ಇದಲ್ಲದೇ ಜಲಾಶಯ ಭರ್ತಿಯಾಗಿ ನೀರು ಬಿಟ್ಟಲ್ಲಿ ಹೊನ್ನಾವರ ಭಾಗದ ಗೇರುಸೊಪ್ಪ ,ಗುಂಡ್ಲಬಾಳ,ಭಾಸ್ಕೇರಿ ಭಾಗದಲ್ಲಿ ಮತ್ತೆ ಪ್ರವಾಹ ಉಂಟಾಗಲಿದೆ.

ಹೊನ್ನಾವರದ ಭಾಸ್ಕೇರಿ ಬಳಿ ಮನೆ ಜಲಾವೃತವಾಗಿರುವುದು .

ಈಗಾಗಲೇ ಗುಂಡ್ಲಬಾಳ,ಭಾಸ್ಕೇರಿ ಭಾಗದಲ್ಲಿ ಹಲವು ಮನೆಗಳಿಗೆ ನೀರು ನುಗ್ಗಿದ್ದು ಕೃಷಿ ಜಮೀನುಗಳು ಜಲಾವೃತವಾಗಿದೆ.

ಭಾರಿ ಮಳೆಗೆ ಜೋಗದಲ್ಲಿ ಕೆಪಿಸಿ ವಸತಿ ಗೃಹದ ತಡೆಗೋಡೆ ಕುಸಿತ.

Kpc ವಸತಿ ಗೃಹದ ಬಳಿ ಕುಸಿತ

ಶಿವಮೊಗ್ಗ ಜಿಲ್ಲೆಯ ಸಾಗರ ತಾಲೂಕಿನ ಜೋಗ ಸುತ್ತಮುತ್ತ ಕಳೆದ ಎರಡು ದಿನಗಳಿಂದ ಭಾರಿ ಮಳೆಯಾಗುತ್ತಿದೆ. ಮಳೆಯಿಂದಾಗಿ ಜೋಗದ ಎಸ್ ವಿ ಪಿ ಕಾಲೋನಿಯ ಕೆಪಿಸಿ ವಸತಿ ಗೃಹಗಳ ಮುಂದಿನ ತಡೆಗೋಡೆ ಕುಸಿತವಾಗಿದೆ.

ಉತ್ತರ ಕನ್ನಡ ಜಿಲ್ಲೆಯಲ್ಲಿ ಕಳೆದ 24 ಘಂಟೆಯಲ್ಲಿ ಸುರಿದ ಮಳೆಯ ವಿವರ ಇಲ್ಲಿದೆ:-

Kannadavani

ಉತ್ತರ ಕನ್ನಡ ಜಿಲ್ಲೆಯ ಜಲಾಶಯದ ಇಂದಿನ ನೀರಿನ ಮಟ್ಟ ಈ ಕೆಳಗಿನಂತಿದೆ:-

#linganamakki #Dam #shivamogga #uttarakannada
ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ