BREAKING NEWS
Search

ಶಿಕಾರಿಪುರ-ಬಸ್ ಚಾಲನೆವೇಳೆ ಹೃದಯಾಘಾತ!ಪ್ರಯಾಣಿಕರ ಪ್ರಾಣ ಉಳಿಸಿ ಸಾವುಕಂಡ ಚಾಲಕ!

676

ಶಿವಮೊಗ್ಗ :- ಶಿವಮೊಗ್ಗ ಜಿಲ್ಲೆಯ ಶಿಕಾರಿಪುರ ತಾಲೂಕಿನ ಕುಮದ್ವತಿ ಖಾಸಗಿ ಬಸ್ ಶಿಕಾರಿಪುರ ದಿಂದ ಹೊನ್ನಾಳ್ಳಿಗೆ ಹೊಗುವ ಮಾರ್ಗದಲ್ಲಿ ಬಸ್ ಚಾಲನೆ ಮಾಡುವ ಸಮಯದಲ್ಲಿ ಚಾಲಕನಿಗೆ ಹೃದಯಾಘಾತವಾಗಿದೆ.

ಈ ಸಂದರ್ಭದಲ್ಲಿ ಪರಿಸ್ಥಿತಿ ಅರಿತ ಚಾಲಕ ಬಸ್ ಅನ್ನು ನಿಯಂತ್ರಿಸಲು ಪ್ರಯತ್ನಿಸಿದ್ದಾನೆ ಈ ವೇಳೆ ರಸ್ತೆಯ ಪಕ್ಕದ ಮರಕ್ಕೆ ಡಿಕ್ಕಿ ಹೊಡೆಸಿದ್ದಾನೆ.
ಅದೃಷ್ಟವಶಾತ್ ಚಾಲಕನ ಜಾಗೃತಿಯಿಂದ ಬಸ್ ನಲ್ಲಿದ್ದ ಪ್ರಯಾಣಿಕರು ಪ್ರಾಣಾಪಾಯದಿಂದ ಬಚಾವ್ ಆಗಿದ್ದು ಚಿಕ್ಕಪುಟ್ಟ ಗಾಯಗಳಾಗಿವೆ.

ಶಿಕಾರಿಪುರ ತಾಲೂಕಿನ ಬಗನಕಟ್ಟೆ ನಿವಾಸಿ ಬಸ್ ಚಾಲಕ ಕುಮಾರ್ (32) ಮೃತ ಪಟ್ಟ ದುರ್ದೈವಿ ಯಾಗಿದ್ದು ಸಾವಿನ ದವಡೆಯಲ್ಲೂ ಪ್ರಯಾಣಿಕರ ಪ್ರಾಣ ಉಳಿಸಿದ್ದಾನೆ.




Leave a Reply

Your email address will not be published. Required fields are marked *