ಶಿವಮೊಗ್ಗ :ಅಡಿಕೆ ಕಳ್ಳತನ ಪ್ರಕರಣದ ಮೂರು ಜನ ಆರೋಪಿತರ ಬಂಧನ.

562

ಶಿವಮೊಗ್ಗ :- ಹೊಳೆಹೊನ್ನೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ದಾಖಲಾದ ಅಡಿಕೆ ಕಳ್ಳತನ ಪ್ರಕರಣವನ್ನು ಪೊಲೀಸರು ಭೇದಿಸಿದ್ದು ಮೂರು ಜನರ ಬಂಧನ ಮಾಡಲಾಗಿದೆ.

ಆರೋಪಿತರಾದ ರೇವಣ್ಣಸಿದ್ದಪ್ಪ, 27 ವರ್ಷ ವಾಸ ಚನ್ನಗಿರಿ, ರಾಜೇಶ್, 24 ವರ್ಷ ವಾಸ ಭದ್ರಾವತಿ, ಪ್ರತಾಪ್, 21 ವರ್ಷ ವಾಸ ಭದ್ರಾವತಿ ಬಂಧಿತರು.

ಬಂಧಿತ ಆರೋಪಿತರಿಂದ ಹೊಳೆಹೊನ್ನೂರು ಪೊಲೀಸ್ ಠಾಣೆಯಲ್ಲಿ ದಾಖಲಾದ 2020ನೇ 02 ಅಡಿಕೆಕಳ್ಳತನ ಪ್ರಕರಣಗಳು ಹಾಗೂ 2021ನೇ ಸಾಲಿನ 01 ಅಡಿಕೆಕಳ್ಳತನ ಪ್ರಕರಣ ಸೇರಿ ಮೂರು ಅಡಿಕೆ ಕಳ್ಳತನ ಪ್ರಕರಣಗಳನ್ನು ಬೇಧಿಸಿದ್ದು ಒಟ್ಟು 22 ಕ್ವಿಂಟಾಲ್ ತೂಕದ ಅಂದಾಜು ಮೌಲ್ಯ 8,80,000₹( ಎಂಟು ಲಕ್ಷದ ಎಂಬತ್ತು ಸಾವಿರ) ಮೌಲ್ಯದ ಅಡಿಕೆಯನ್ನು ಹಾಗೂ
ಕೃತ್ಯಕ್ಕೆ ಬಳಸಿದ 3 ದ್ವಿಚಕ್ರ ವಾಹನಗಳು ಅಂದಾಜು ಒಂದು ಲಕ್ಷ ಇಪ್ಪತ್ತೈದು ಸಾವಿರ ಮೌಲ್ಯದ ಮಾಲನ್ನು ವಶಪಡಿಸಿಕೊಂಡು ಆರೋಪಿತರನ್ನು ನ್ಯಾಯಾಂಗ ಬಂಧನಕ್ಕೆ ನೀಡಲಾಗಿದೆ.

ಕಾರ್ಯಾಚರಣೆಯಲ್ಲಿ ಕೃಷ್ಣಮೂರ್ತಿ, Dsp, ಭದ್ರಾವತಿ ಉಪವಿಭಾಗ ರವರ ಮಾರ್ಗದರ್ಶನದಲ್ಲಿ,
ಮಂಜುನಾಥ್.ಇ.ಒ CPI, ಭದ್ರಾವತಿ ಗ್ರಾಮಾಂತರ ವೃತ್ತ ರವರ ನೇತೃತ್ವದ,
ಸುರೇಶ್, PSI ಹೊಳೆಹೊನ್ನೂರು ಪೊಲೀಸ್ ಠಾಣೆ, ಯೋಗೇಶ್ ASI ಹಾಗೂ ಸಿಬ್ಬಂದಿಗಳಾದ ಹೆಚ್.ಸಿ ಆನಂದ, ಕೃಷ್ಣಮೂರ್ತಿ, ಅಣ್ಣಪ್ಪ, ಪ್ರಸನ್ನ, ದೊಡ್ಡೇಶ ರವರುಗಳನ್ನೊಳಗೊಂಡ ತಂಡವು ಭಾಗವಹಿಸಿತ್ತು.




ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ